newsfirstkannada.com

ಸುಮಲತಾಗೆ ಆಪ್ತನಿಂದಲೇ ಕಂಟಕ; ನಟ ದರ್ಶನ್​ ಸಂಧಾನಕ್ಕೂ ಕ್ಯಾರೇ​​ ಎನ್ನದ ಇಂಡವಾಳು..! ​

Share :

Published February 27, 2024 at 8:31pm

  ಮಂಡ್ಯಕ್ಕಾಗಿ ಸುಮಲತಾ, ದಳಪತಿಗಳ ನಡುವೆ ಪೈಪೋಟಿ

  ಸುಮಲತಾ-ಸಚ್ಚಿದಾನಂದ ನಡುವೆ‌ ಮುಂದುವರೆದ ಮುನಿಸು

  ಯಾವುದೇ ಪ್ರಯೋಜನವಾಗದ ನಟ ದರ್ಶನ್​ ಸಂಧಾನ..!

ಮಂಡ್ಯ: ಸಕ್ಕರೆ ನಾಡು ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಪಟ್ಟು ಹಿಡಿದ ಸಂಸದೆ ಸುಮಲತಾ ಕ್ಷೇತ್ರ ಸಂಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮೂಲಕ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಈ ವೇಳೆ ಮಂಡ್ಯ ಗೌಡ್ತಿಗೆ ನಿಮಿಷಾಂಭ ದೇವಿ ಶುಭಸೂಚನೆ ಕೊಟ್ಟಿದ್ದಾಳೆ.

ರಾಜ್ಯಸಭೆ ಚುನಾವಣೆ ಭರಾಟೆ ನಡುವೆಯೇ ಲೋಕಸಭೆ ಚುನಾವಣಾ ಕಾವು ಕೂಡ ಜೋರಾಗಿದೆ. ಅದರಲ್ಲೂ ಮಂಡ್ಯ ಕ್ಷೇತ್ರ ಮಾತ್ರ ದಿನೇ ದಿನೆ ಕುತೂಹಲ ಕೆರಳಿಸುತ್ತಿದೆ. ಮಂಡ್ಯಕ್ಕಾಗಿ ಸುಮಲತಾ ವರ್ಸಸ್​ ದಳಪತಿಗಳ ನಡುವೆ ಸಖತ್ತಾಗಿ ಪೈಪೋಟಿ ನಡೆಯುತ್ತಿದೆ. ಈ ನಡುವೆ ಕ್ಷೇತ್ರ ಸಂಚಾರ ಮಾಡ್ತಿರುವ ಸುಮಲತಾಗೆ ದೇವಿ ಆಶೀರ್ವಾದ ಮಾಡಿದ್ದಾಳೆ.

ಸುಮಲತಾಗೆ ಬಲಗಡೆಯಿಂದ ಹೂ ನೀಡಿದ ನಿಮಿಷಾಂಭ ದೇವಿ

ಸಂಸದೆ ಸುಮಲತಾಗೆ ನಿಮಿಷಾಂಭ ದೇವಿ ಬಲಗಡೆ ಹೂ ನೀಡುವ ಮೂಲಕ ಶುಭ ಸೂಚನೆ ಕೊಟ್ಟಿದ್ದಾಳೆ. ಮಂಡ್ಯದ ಶ್ರೀರಂಗಪಟ್ಟಣದ ನಿಮಿಷಾಂಭ ದೇಗುಲದಲ್ಲಿ ಸುಮಲತಾ ಅಂಬರೀಶ್ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ರು. ಪೂಜೆ ಸಲ್ಲಿಸುತ್ತಿರುವಾಗ ದೇವಿ ಬಲಭಾಗದಲ್ಲಿ ಹೂ ನೀಡಿದೆ. ದೇವಿ ಬಲಗಡೆ ಹೂ ನೀಡಿದ್ರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇದ್ರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ಶುರುವಾಗಿದೆ. ದೇವಿಯ ಶುಭ ಸೂಚನೆಯಿಂದ ಸಂಸದೆ ಸುಮಲತಾ ಸಂತಸಗೊಂಡಿದ್ದಾರೆ.

ಸಂಸದೆ ಸುಮಲತಾ-ಇಂಡುವಾಳು ಸಚ್ಚಿದಾನಂದ ನಡುವೆ‌ ಮತ್ತೆ ಅಂತರ ಮುಂದುವರೆದಿದೆ. ಮೊನ್ನೆ ನಟ ದರ್ಶನ್ ಇಬ್ಬರ ನಡುವೆ ಸಂಧಾನ ಮಾತುಕತೆ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದ ಸುಮಲತಾ ಅವರನ್ನ ಸಚ್ಚಿದಾನಂದ ಭೇಟಿ ಮಾಡಿಲ್ಲ. ಶ್ರೀರಂಗಪಟ್ಟಣ ಹಾಗೂ ಕಾರಸವಾಡಿ ಗ್ರಾಮದಲ್ಲಿ ಸುಮಲತಾ, ಎಂಪಿ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಶುದ್ದ ಕುಡಿಯುವ ನೀರು ಘಟಕಗಳ ಉದ್ಘಾಟನೆ ಮಾಡಿದ್ರು. ಈ ವೇಳೆ ಸುಮಲತಾ ಜೊತೆ ಆಪ್ತ ಬೇಲೂರು ಸೋಮಶೇಖರ್ ಕಾಣಿಸಿಕೊಂಡ್ರು. ಆದ್ರೆ ತನ್ನ ಕ್ಷೇತ್ರಕ್ಕೆ ಬಂದ್ರೂ ಸುಮಲತಾರನ್ನ ಸ್ವಾಗತಿಸದೆ ಸಚ್ಚಿದಾನಂದ ಅಂತರ ಕಾಯ್ದುಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಾರೆ ಮಂಡ್ಯದಿಂದಲೇ ಲೋಕದ ಅಖಾಡಕ್ಕೆ ಧುಮುಕಬೇಕೆಂದು ಸುಮಲತಾ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಇತ್ತ ದಳಪತಿಗಳು ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ಭಾಗ್ಯ ಸಿಗುವುದೋ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಮಲತಾಗೆ ಆಪ್ತನಿಂದಲೇ ಕಂಟಕ; ನಟ ದರ್ಶನ್​ ಸಂಧಾನಕ್ಕೂ ಕ್ಯಾರೇ​​ ಎನ್ನದ ಇಂಡವಾಳು..! ​

https://newsfirstlive.com/wp-content/uploads/2024/02/Darshan_Induvalu.jpg

Load More