/newsfirstlive-kannada/media/post_attachments/wp-content/uploads/2023/06/TEAM_INDIA.jpg)
ಯಾಕೋ ಟೀಮ್ ಇಂಡಿಯಾ ಅದೃಷ್ಟಾನೇ ಸರಿ ಇಲ್ಲ ಅನ್ಸುತ್ತೆ. ಒಂದು ಕಡೆ ಹೈದ್ರಾಬಾದ್​ ಟೆಸ್ಟ್​​​ ಸೋಲು ತಂಡವನ್ನ ಕಂಗಲಾಗಿಸಿದೆ. ಇನ್ನೊಂದೆಡೆ ಪ್ರಮುಖ ನಾಲ್ವರು ಆಟಗಾರರ ಅಲಭ್ಯತೆ ಚಿಂತೆಗೀಡು ಮಾಡಿದೆ. ಇದರಿಂದ ಕ್ಯಾಪ್ಟನ್ ರೋಹಿತ್​​​​​​ ಶರ್ಮಾಗೆ ದಿಕ್ಕೇ ತೋಚದಂತಾಗಿದೆ. ಮುಂದೆ ಏನಾಗುತ್ತೋ ಅನ್ನೋ ಟೆನ್ಶನ್​ ಕಾಡ್ತಿದೆ.
ಇಂಗು ತಿಂಗು ಮಂಗನಂತಾದ ಭಾರತ..ಮುಂದೇನು..?
''ಯಾವಾಗ ದುಃಖ ಬರುತ್ತೋ ಅದು ಗೂಢಚಾರಿಯಾಗಿ ಬರಲ್ಲ. ಸೈನ್ಯವಾಗಿ ಬರುತ್ತೆ''. ವಿಲಿಯಮ್ ಶೇಕ್ಸ್​​​​ಪಿಯರ್​​​ ಹ್ಯಾಮ್ಲೆಟ್​​​​ನಲ್ಲಿ ಹೇಳಿದ ಮಾತಿದು. ಸದ್ಯ ಈ ಮಾತು ಟೀಮ್ ಇಂಡಿಯಾಗೆ ತುಂಬಾ ಸೂಟ್​ ಆಗುತ್ತೆ. ಯಾಕಂದ್ರೆ ಹೈದ್ರಾಬಾದ್​​ ಟೆಸ್ಟ್​ನಲ್ಲಿ ಸೋತು ಸುಣ್ಣವಾಗಿದೆ. ಆ ಸೋಲನ್ನ ಇನ್ನೂ ಅರಗಿಸಿಕೊಳ್ಳಲು ಆಗ್ತಿಲ್ಲ. ಇಂತಹ ಕಠಿಣ ಸಮಯದಲ್ಲಿ ಮತ್ತಿಬ್ಬರು ಮ್ಯಾಚ್ ವಿನ್ನರ್​ಗಳು ವೈಜಾಗ್​ ಟೆಸ್ಟ್​ನಿಂದ ಹೊರಬಿದ್ದಿದ್ದು, ಟೀಮ್ ಇಂಡಿಯಾದ ಕಥೆ ಇಂಗು ತಿಂದ ಮಂಗನಂತಾಗಿದೆ.
/newsfirstlive-kannada/media/post_attachments/wp-content/uploads/2023/12/Kohli_KL-Rahul.jpg)
ಜಡ್ಡು-ರಾಹುಲ್​​ಗೆ ಇಂಜುರಿ.. 2ನೇ ಟೆಸ್ಟ್​ಗೆ ಅಲಭ್ಯ..!
ಹೈದ್ರಾಬಾದ್​ ಟೆಸ್ಟ್​​ ಸೋಲಿನ ಬೆನ್ನಲ್ಲೆ ಭಾರತಕ್ಕೆ ಒಂದೇ ದಿನ ಡಬಲ್ ಶಾಕ್ ಎದುರಾಗಿದೆ. ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಹಾಗೂ ಸ್ಟಾರ್ ಬ್ಯಾಟ್ಸ್​​​ಮನ್ ಕೆ.ಎಲ್ ರಾಹುಲ್ 2ನೇ ಟೆಸ್ಟ್​​ನಿಂದ ಹೊರಬಿದ್ದಿದ್ದಾರೆ. ಇಬ್ಬರೂ ಗಾಯದಿಂದ ಬಳಲುತ್ತಿದ್ದಾರೆ. ಜಡೇಜಾ ಹ್ಯಾಮ್​ಸ್ಟ್ರಿಂಗ್​​​​ ಇಂಜುರಿಗೆ ತುತ್ತಾದ್ರೆ ಕನ್ನಡಿಗ ರಾಹುಲ್​ ತೊಡೆ ನೋವಿಗೆ ಒಳಗಾಗಿದ್ದಾರೆ.
ಜಡ್ಡು ಇಂಜುರಿ ಗಂಭೀರವಾಗಿದೆ. ರಿಕವರಿಗೆ ಸಾಕಷ್ಟು ಸಮಯಾವಕಾಶ ಬೇಕಿದೆ. ಹೀಗಾಗಿ ಉಳಿದ ಮೂರು ಟೆಸ್ಟ್​ ಆಡುವುದು ಅನುಮಾನ ಎಂದು ಹೇಳಲಾಗ್ತಿದೆ. ಇನ್ನು ರಾಹುಲ್​​​​ಗೆ ಮೈನರ್​​ ಇಂಜುರಿ ಆಗಿದ್ದು, ವೈಜಾಗ್ ಟೆಸ್ಟ್​ ಬಳಿಕ ಫುಲ್ ಫಿಟ್ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. 2ನೇ ಟೆಸ್ಟ್​​ನಲ್ಲಿ ಇಬ್ಬರು ಮೇನ್ ಪ್ಲೇಯರ್ಸ್​ ಅಲಭ್ಯತೆ ಭಾರತಕ್ಕೆ ದೊಡ್ಡ ಹಿನ್ನಡೆ ತಂದೊಡ್ಡಿದೆ.
ಕ್ರಿಕೆಟ್​ ಜನಕರಿಗಿಲ್ಲ ಕಿಂಗ್ ಕೊಹ್ಲಿ ಭಯ..!
ವಿರಾಟ್ ಕೊಹ್ಲಿ ಪರ್ಫಾಮ್​ ಮಾಡಲಿ, ಮಾಡದೇ ಇರಲಿ. ಅವರು ತಂಡದಲ್ಲಿದ್ರೆ, ಎದುರಾಳಿ ತಂಡ ಒತ್ತಡದಲ್ಲೆ ಕಣಕ್ಕಿಳಿಯುತ್ತೆ. ಸದ್ಯ ಆ ಭೀತಿ ಪ್ರವಾಸಿ ಇಂಗ್ಲೆಂಡ್​ ತಂಡಕ್ಕಿಲ್ಲ. ಯಾಕಂದ್ರೆ ರನ್ ಮಷಿನ್​​ ವೈಜಾಗ್ ಟೆಸ್ಟ್ ಕೂಡ ಆಡ್ತಿಲ್ಲ. ವೈಯಕ್ತಿಕ ಕಾರಣ ನೀಡಿ ಮೊದಲ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಂತಹ ಸೂಪರ್​​​​​​ ಸ್ಟಾರ್ ಅಲಭ್ಯತೆಯಲ್ಲಿ ರೋಹಿತ್​ ಪಡೆಯ ಕಮ್​​ಬ್ಯಾಕ್​ ಬಿಗ್ ಚಾಲೆಂಜ್ ಎನಿಸಿದೆ.
/newsfirstlive-kannada/media/post_attachments/wp-content/uploads/2023/11/SHAMI-6.jpg)
ಸ್ಪೀಡ್ ವೆಪನ್​ ಶಮಿ ವೈಜಾಗ್​​​​ ಟೆಸ್ಟ್​​ನಿಂದ ದೂರ..!
ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಹಾಗೂ ಕಿಂಗ್ ಕೊಹ್ಲಿ ಅಷ್ಟೇ ಅಲ್ಲ. ಸ್ಪೀಡ್​ಸ್ಟರ್​ ಮೊಹಮ್ಮದ್ ಶಮಿ ಕೂಡ ಮುಂದಿನ ಟೆಸ್ಟ್​ ಆಡುತ್ತಿಲ್ಲ. ಫುಲ್​ ಫಿಟ್​ ಆಗದ ಶಮಿಯನ್ನ ಆಯ್ಕೆ ಮಾಡಿ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಎನ್​ಸಿಯಿಂದ ಇಲ್ಲಿ ತನಕ ಶಮಿಯ ಫಿಟ್ನೆಸ್​​​​ ಕ್ಲೀಯರೆನ್ಸ್​ ಕೂಡ ಬಂದಿಲ್ಲ. ಈ ವಿಕೆಟ್ ಟೇಕರ್ ವೈಜಾಗ್​ನಲ್ಲಿ ಆಡಿದ್ರೆ ಆಂಗ್ಲರಿಗೆ ಅಕ್ಷರಶಃ ನರಕ ತೋರಿಸ್ತಿದ್ರು.
ಅತಿರಥರಿಲ್ಲದ ರೋಹಿತ್​ಗೆ ರಿಯಲ್ ಅಗ್ನಿಪರೀಕ್ಷೆ..!
ಗೆಲುವಿನ ಕನಸು ಕಾಣ್ತಿರೋ ಟೀಮ್ ಇಂಡಿಯಾ ನಾಲ್ವರು ಅತಿರಥ ಮಹಾರಥರಿಲ್ಲದೇ ವೈಜಾಗ್ ಟೆಸ್ಟ್​​ನಲ್ಲಿ ಕಣಕ್ಕಿಳಿಯುತ್ತಿದೆ. ಇದರಿಂದ ಕ್ಯಾಪ್ಟನ್ ರೋಹಿತ್​​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಟ್​ಮ್ಯಾನ್ ಮೊದಲೇ ​​​​ಹೈದ್ರಾಬಾದ್​ ಟೆಸ್ಟ್​​ ಸೋಲಿನಿಂದ ಜರ್ಝರಿತಾಗಿದ್ದಾರೆ. ಇದರ ಮಧ್ಯೆ ನಾಲ್ವರು ಕೀ ಪ್ಲೇಯರ್ಸ್​ ಅಲಭ್ಯತೆ ಬಿಗ್​ ಸೆಟ್​​​​​​ಬ್ಯಾಕ್ ಆಗಿದೆ. ಕ್ಯಾಪ್ಟನ್​ ಆ್ಯಂಡ್ ಹೆಡ್​ಕೋಚ್​​​ ಈ ಕೀ ಪ್ಲೇಯರ್​ಗಳ ಅನುಪಸ್ಥಿತಿಯನ್ನ ಹೇಗೆ ಮೀರಿ ನಿಲ್ತಾರೆ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


