/newsfirstlive-kannada/media/post_attachments/wp-content/uploads/2024/11/Sanju-samson-100-tilak-Varma.jpg)
ಜೊಹಾನ್ಸ್‌ಬರ್ಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಯೇ ಸುರಿದಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿರೀಕ್ಷೆಯಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದೆ. ಟಿ20 ಸೀರಿಸ್ ಗೆಲ್ಲುವ ತವಕದಲ್ಲಿರುವ ಟೀಂ ಇಂಡಿಯಾಗೆ ಆರಂಭಿಕ ಆಟಗಾರರು ನಿರಾಸೆ ಮೂಡಿಸಲಿಲ್ಲ.
ಇದನ್ನೂ ಓದಿ: TATA IPL 2025 ಆಟಗಾರರ ಹರಾಜು ಪಟ್ಟಿ ಪ್ರಕಟ; ₹2 ಕೋಟಿಯ ಸ್ಟಾರ್ ಪ್ಲೇಯರ್ಸ್ ಯಾರು?
ಬ್ಯಾಕ್ ಟು ಬ್ಯಾಕ್ ಸೆಂಜುರಿ ಸಿಡಿಸಿದ ಸಂಜು ಸ್ಯಾಮ್ಸನ್ ಅವರು ಮತ್ತೆ ಅಬ್ಬರದ ಆಟ ಪ್ರದರ್ಶನ ಮಾಡಿದರು. 8 ಸಿಕ್ಸರ್, 6 ಬೌಂಡರಿಗಳನ್ನು ಸಿಡಿಸಿದ ಸಂಜು ಭರ್ಜರಿ ಶತಕ ಸಿಡಿಸಿದರು. ಸಂಜು ಸ್ಯಾಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಸುಲಭವಾಗಿ 200ರ ಗಡಿ ದಾಟುವುದು ಬಹಳ ಸುಲಭವಾಯಿತು.
ಸಂಜು ಸ್ಯಾಮ್ಸನ್ ಜೊತೆ ಸೇರಿದ ತಿಲಕ್ ವರ್ಮಾ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಿಲಕ್ ಕೂಡ 9 ಸಿಕ್ಸರ್ ಸಿಡಿಸಿ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದರು. ಇವರಿಬ್ಬರ ಶತಕದ ಜೊತೆಯಾಟ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಸುಸ್ತಾಗುವಂತೆ ಮಾಡಿತು.
ದ.ಆಫ್ರಿಕಾಗೆ 284 ರನ್ ಟಾರ್ಗೆಟ್!
20 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡ ಭಾರತ ತಂಡ ದಕ್ಷಿಣ ಆಫ್ರಿಕಾಗೆ 284 ರನ್‌ಗಳ ಬಿಗ್ ಟಾರ್ಗೆಟ್ ನೀಡಿದೆ. ಅಜೇಯರಾಗಿ ಕ್ರೀಸ್‌ನಲ್ಲಿ ಉಳಿದ ತಿಲಕ್ ವರ್ಮಾ 120 ರನ್ ಸಿಡಿಸಿದ್ರೆ, ಸಂಜು ಸ್ಯಾಮ್ಸನ್ 109 ರನ್ ಗಳಿಸಿದ್ದಾರೆ. 4 ಟಿ20 ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಯಂಗ್ ಇಂಡಿಯಾ, ಕಪ್ ಗೆಲ್ಲುವ ತವಕದಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ