/newsfirstlive-kannada/media/post_attachments/wp-content/uploads/2024/06/Surya-kumar-Yadav-2.jpg)
ಅಫ್ಘನ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಜಸ್ಪ್ರಿತ್ ಬೂಮ್ರಾ ಬೆಂಕಿ ಆಟವಾಡಿದ್ರು. ಆದ್ರೆ, ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಕೈ ಹಿಡಿದೇ ಇದ್ದಿದ್ರೆ, ಸೂಪರ್ 8ನಲ್ಲಿ ಟೀಮ್ ಇಂಡಿಯಾ ಮೊದಲ ಜಯ ದಾಖಲಿಸ್ತಾ ಇರಲಿಲ್ಲ. ಮೊದಲ ಪಂದ್ಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಸೂರ್ಯ, ಕಳೆದ 2 ಪಂದ್ಯಗಳಿಂದ ತಂಡದ ಆಪತ್ಭಾಂದವನಾಗಿದ್ದಾರೆ. ಯಾರೇ ಕೈ ಕೊಡಲಿ ತಂಡವನ್ನ ಕಾಪಾಡಲು ಸೂರ್ಯ ಇದಾರೆ ಅನ್ನೋ ಆತ್ಮವಿಶ್ವಾಸ ಮೂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ಟೀಮ್ ಇಂಡಿಯಾ ಆರಂಭದಲ್ಲೇ ರನ್ ಗಳಿಕೆಗೆ ಪರದಾಟ ನಡೆಸಿತ್ತು. ಅದ್ರ ಬೆನ್ನಲ್ಲೇ ರೋಹಿತ್ ಶರ್ಮಾ, ರಿಷಭ್ ಪಂತ್ ಪೆವಿಲಿಯನ್ ಸೇರಿದ್ರು. ಕೆಲವೇ ಹೊತ್ತಲ್ಲಿ ವಿರಾಟ್ ಕೊಹ್ಲಿ ಕೂಡ ಪೆವಿಲಿಯನ್ ಸೇರಿದ್ರು. 8.3 ಓವರ್ಗಳಲ್ಲಿ ಕೇವಲ 62 ರನ್ಗಳಿಸಿದ್ದ ಟೀಮ್ ಇಂಡಿಯಾ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕಣಕ್ಕಿಳಿದ ಆಪತ್ಭಾಂದವ ಸೂರ್ಯಕುಮಾರ್, ಸಂಭ್ರಮದಲ್ಲಿದ್ದ ಅಫ್ಘನ್ನರಿಗೆ ಶಾಕ್ ಕೊಟ್ರು.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಕೊಟ್ಟ ರೋಹಿತ್, ವಿರಾಟ್.. ಅಫ್ಘಾನ್ ವಿರುದ್ಧ ಏನೆಲ್ಲ ಆಯಿತು ಗೊತ್ತಾ?
ಬಾರ್ಬಡೋಸ್ನಲ್ಲಿ ಸೂರ್ಯಕುಮಾರ್ ಸ್ಪೋಟ.!
4ನೇ ಕ್ರಮಾಂಕದಲ್ಲಿ ಕಣಕ್ಕಳಿದ ಸೂರ್ಯಕುಮಾರ್ ಅಫ್ಘನ್ನರ ಅಟ್ಟಹಾಸಕ್ಕೆ ಬ್ರೇಕ್ ಹಾಕೇ ಬಿಟ್ರು. ಸ್ಲೋ & ಲೋ ಪಿಚ್ನಲ್ಲಿ ಕಾದು ಹೊಡೆದ ಸೂರ್ಯಕುಮಾರ್ ಯಾದವ್, ಅಫ್ಟನ್ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಿದ್ರು. ಅಫ್ಘಾನಿಸ್ತಾನದ ಸ್ಪಿನ್ & ಪೇಸ್ ಅಟ್ಯಾಕ್ ಮೇಲೆ ದಾಳಿ ನಡೆಸಿದ ಸೂರ್ಯ, ಬಾರ್ಬಡೋಸ್ನಲ್ಲಿ ಧೂಳೆಬ್ಬಿಸಿದ್ರು.
A fight to remember ? pic.twitter.com/fQPP0gMRYi
— Surya Kumar Yadav (@surya_14kumar)
A fight to remember 💪 pic.twitter.com/fQPP0gMRYi
— Surya Kumar Yadav (@surya_14kumar) June 12, 2024
">June 12, 2024
5 ಬೌಂಡರಿ, 3 ಸಿಕ್ಸರ್... 189 ಸ್ಟ್ರೈಕ್ರೇಟ್ನಲ್ಲಿ ಘರ್ಜನೆ.!
ಟೀಮ್ ಇಂಡಿಯಾ ಮೊದಲಾರ್ಧದ ಬ್ಯಾಟಿಂಗ್ ನೋಡಿದವರ್ಯಾರೂ 180ರ ಹತ್ತಿರ ಹೋಗುತ್ತೆ ಅನ್ನೋ ನಿರೀಕ್ಷೆಯನ್ನೂ ಮಾಡಿರಲಿಲ್ಲ. ಎಲ್ಲರ ಲೆಕ್ಕಾಚಾರಗಳನ್ನ ಸೂರ್ಯಕುಮಾರ್ ಬದಲಿಸಿದ್ರು. 5 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಫ್ಘನ್ ಆರ್ಭಟಕ್ಕೆ ಬ್ರೇಕ್ ಹಾಕಿದ್ರು. ಸತತ 2 ಹಾಫ್ ಸೆಂಚುರಿ ಸಿಡಿಸಿದ ಸೂರ್ಯ, ಎದುರಿಸಿದ 28 ಎಸೆತಗಳಲ್ಲಿ 53 ರನ್ ಸಿಡಿಸಿದ್ರು.
ಇದನ್ನೂ ಓದಿ: ಕೊನೆಯ 10 ಓವರ್ಗಳಲ್ಲಿ ರನ್ ಹೊಳೆ.. ಬೂಮ್ ಬೂಮ್ ಬಿರುಗಾಳಿ ಹೆಂಗಿತ್ತು ಗೊತ್ತಾ..
ಹಾರ್ದಿಕ್ ಜೊತೆಗೆ ಅತ್ಯಮೂಲ್ಯ ಜೊತೆಯಾಟ.!
ತಾನೊಬ್ಬನೇ ರನ್ಗಳಿಸಿದ್ದು ಮಾತ್ರವಲ್ಲ.. 5ನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಜೊತೆಗೆ ಕ್ರೂಶಿಯಲ್ ಜೊತೆಯಾಟದಲ್ಲೂ ಸೂರ್ಯ ಭಾಗಿಯಾದ್ರು. ಈ ಜೋಡಿ 37 ಎಸೆತಗಳಲ್ಲಿ ಗಳಿಸಿದ 60 ರನ್ಗಳೇ ಪಂದ್ಯದ ಗತಿಯನ್ನ ಬದಲಿಸಿದ್ದು ಅಂದ್ರೆ ತಪ್ಪಾಗಲ್ಲ.
ಮೊದಲ 2 ಪಂದ್ಯ ಟೀಕೆ.. ಕೊನೆಯ 2 ಪಂದ್ಯ ಬಹುಪರಾಕ್.!
ಇದೇ ಟಿ20 ವಿಶ್ವಕಪ್ ಮಹಾಸಮರದ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈಕರ್ ಸೂರ್ಯಕುಮಾರ್ ವೈಫಲ್ಯ ಅನುಭವಿಸಿದ್ರು. ಆಗ ತೀವ್ರ ಟೀಕೆಗೂ ಗುರಿಯಾಗಿದ್ರು. ಆದ್ರೆ, ಕಳೆದ 2 ಪಂದ್ಯಗಳಿಂದ ಟೀಮ್ ಇಂಡಿಯಾ ಪಾಲಿನ ಆಪತ್ಭಾಂದವನಾಗಿದ್ದಾರೆ. ಯುಎಸ್ಎ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತೆ ಬಿಡುತ್ತೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಕೊನೆಯವರೆಗೂ ಹೋರಾಡಿದ ಸೂರ್ಯ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
An overall team effort! We keep marching on ??? pic.twitter.com/R26M36oHuU
— Surya Kumar Yadav (@surya_14kumar)
An overall team effort! We keep marching on 💪🇮🇳 pic.twitter.com/R26M36oHuU
— Surya Kumar Yadav (@surya_14kumar) June 20, 2024
">June 20, 2024
ಇದನ್ನೂ ಓದಿ: 3ನೇ ಬಾರಿಗೆ ದರ್ಶನ್ ಪೊಲೀಸ್ ಕಸ್ಟಡಿಗೆ.. ಈ ಆ್ಯಂಗಲ್ನಲ್ಲಿ ನಡಿಯಲಿದೆ ತನಿಖೆ
ನಿನ್ನೆ ನಡೆದ 2 ಪಂದ್ಯದಲ್ಲೂ ಸಂಕಷ್ಟದಲ್ಲಿದ್ದಾಗ ತಂಡದ ಕೈ ಹಿಡಿದ ಸೂರ್ಯ ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. ಸೂರ್ಯನ ಸ್ಪೋಟಕ ಅರ್ಧಶತಕದ ನೆರವಿನಿಂದ ತಂಡ ಸವಾಲಿನ ಸ್ಕೋರ್ ಕಲೆ ಹಾಕಿತು. ಸೂಪರ್ 8ನಲ್ಲಿ ಟೀಮ್ ಇಂಡಿಯಾ ಮೊದಲ ಗೆಲುವನ್ನೂ ದಾಖಲಿಸಿತು. ಆಪತ್ಭಾಂದವ ಸೂರ್ಯನ ಆಟ ಮುಂದೆಯೂ ಟೂರ್ನಿಯಲ್ಲಿ ಹೀಗೆ ಮುಂದುವರೆಯಲಿ. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಲಿ ಅನ್ನೋದೆ ಎಲ್ಲಾ ಅಭಿಮಾನಿಗಳ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ