/newsfirstlive-kannada/media/post_attachments/wp-content/uploads/2025/03/India-Travis-Head.jpg)
ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ಇಂದು ಭಾರತ, ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಾಗಿದೆ. ರೋಚಕ ಪಂದ್ಯಕ್ಕೆ ಕೆಲವೇ ಗಂಟೆಗಳ ಬಾಕಿ ಇರುವಾಗ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ ಆಟದ ಬಗ್ಗೆ ಭಾರೀ ಲೆಕ್ಕಾಚಾರಗಳು ನಡೆಯುತ್ತಿದೆ.
ಇದನ್ನೂ ಓದಿ: Semifinals: ದುಬೈ ಪಿಚ್ನಲ್ಲಿ ಭಾರೀ ಬದಲಾವಣೆ.. ಟೀಂ ಇಂಡಿಯಾಗೆ ಸಮಸ್ಯೆ ಹೆಚ್ಚಾಗಲಿದೆ..!
ಭಾರತದ ವಿರುದ್ಧ ಟ್ರಾವಿಸ್ ಹೆಡ್‌ಗೆ ಮೊದಲಿನಿಂದಲೂ ಜಿದ್ದಾಜಿದ್ದಿ ಇದ್ದೇ ಇದೆ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ 137 ರನ್ ಸಿಡಿಸಿ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದರು. ಚಾಂಪಿಯನ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲೂ ಟ್ರಾವಿಸ್ ಹೆಡ್ ಅಬ್ಬರಿಸಿದ್ರೆ ಮ್ಯಾಚ್‌ಗೆ ಟರ್ನಿಂಗ್ ಪಾಯಿಂಟ್ ಸಿಗೋದಂತೂ ಪಕ್ಕಾ. ಹೀಗಿರುವಾಗ ಖ್ಯಾತ ಜ್ಯೋತಿಷಿ ಸುಮಿತ್ ಬಜಾಜ್ ಎಂಬುವವರು ಸ್ಫೋಟಕ ಭವಿಷ್ಯ ಹೇಳಿದ್ದಾರೆ.
ಜ್ಯೋತಿಷಿ ಸುಮಿತ್ ಬಜಾಜ್ ಅವರ ಪ್ರಕಾರ ಭಾರತದ ವಿರುದ್ಧ ಇಂದು ಟ್ರಾವಿಸ್ ಹೆಡ್ ಅವರ ಆಟ ನಡೆಯೋದಿಲ್ಲ. ಟ್ರಾವಿಸ್ ಹೆಡ್ ಎಷ್ಟು ರನ್ ಹೊಡೆಯಬಹುದು ಅನ್ನೋದನ್ನು ಊಹಿಸಿರೋ ಸುಮಿತ್ ಬಜಾಜ್ ಅವರು ಟ್ರಾವಿಸ್ ಹೆಡ್ 49 ರನ್‌ಗಳನ್ನು ದಾಟುವುದಿಲ್ಲ. ಕ್ರೀಸ್‌ಗೆ ಇಳಿಯೋ ಹೆಡ್ 5 ಅಥವಾ 23 ರನ್‌ಗಳನ್ನಷ್ಟೇ ಹೊಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.
Travis Head is unlikely to cross score of 49 tomorrow in Semi Final against India.
Score of 5, 23 also great possibility. #TravisHead#INDvsAUS
— Sumit Bajaj (Astrologer) (@astrosumitbajaj)
Travis Head is unlikely to cross score of 49 tomorrow in Semi Final against India.
Score of 5, 23 also great possibility. #TravisHead#INDvsAUS— Sumit Bajaj (Astrologer) (@astrosumitbajaj) March 3, 2025
">March 3, 2025
ಜ್ಯೋತಿಷಿ ಸುಮಿತ್ ಬಜಾಜ್ ಅವರು ಟ್ರಾವಿಸ್ ಹೆಡ್ ಬ್ಯಾಟಿಂಗ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದು, ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಜ್ಯೋತಿಷಿ ಸುಮಿತ್ ಅವರ ಪೋಸ್ಟ್ ಫುಲ್ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಇಂದಿನ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರ ಬ್ಯಾಟಿಂಗ್ ಅನ್ನೋ ಎದುರು ನೋಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ