/newsfirstlive-kannada/media/post_attachments/wp-content/uploads/2024/06/India-vs-England.jpg)
ಚುಟುಕು ವಿಶ್ವಕಪ್​ ಸೆಮಿಸ್​​ ಸಮರದಲ್ಲಿ ಟೀಮ್​ ಇಂಡಿಯಾ ಗೆಲುವಿನ ಪತಾಕೆ ಹಾರಿಸಿದೆ. ಆಂಗ್ಲರ ಅಟ್ಟಹಾಸಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರೋಹಿತ್​ ಪಡೆ ಫೈನಲ್​ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿದೆ. ಗಯಾನದಲ್ಲಿ ಮಳೆಯ ಕಾಟದ ನಡುವೆ, ಇಂಡಿಯನ್​​ ಟೈರ್ಗರ್ಸ್​​ ಆರ್ಭಟಿಸಿದ ರೀತಿಗೆ ಕ್ರಿಕೆಟ್ ಜನಕರು ಬೆಚ್ಚಿ ಬಿದ್ದಿದ್ದಾರೆ.
ಸೇಡಿಗೆ ಸೇಡು.. ಮುಯ್ಯಿಗೆ ಮುಯ್ಯಿ.. ಲೆಕ್ಕ ಬಡ್ಡಿ ಸಮೇತ ಚುಕ್ತಾ
ಆಂಗ್ಲರ ಅಟ್ಟಹಾಸಕ್ಕೆ ಬಿತ್ತು ಬ್ರೇಕ್​.. ಭಾರತಕ್ಕೆ ಭರ್ಜರಿ ಜಯ
ಗಂಟು ಮೂಟೆ ಕಟ್ಟಿದ ಇಂಗ್ಲೆಂಡ್​, ಫೈನಲ್​ಗೆ ಟೀಮ್​ ಇಂಡಿಯಾ
ಕ್ರಿಕೆಟ್​ ಲೋಕದ ಎರಡು ಬಲಿಷ್ಠ ತಂಡಗಳ ನಡುವಿನ ಹೈವೋಲ್ಟೆಜ್​ ಕದನ ಪಂದ್ಯ ನೋಡಲು ಕಾದ ಫ್ಯಾನ್ಸ್​ ಆರಂಭದಲ್ಲಿ ಅನುಭವಿಸಿದ್ದು ನಿರಾಸೆಯನ್ನ. ಸಿಕ್ಕಾಪಟ್ಟೆ ಕಾಟ ಕೊಟ್ಟ ಮಳೆರಾಯ ಫ್ಯಾನ್ಸ್ ಕುತೂಹಲಕ್ಕೆ ಆರಂಭದಲ್ಲಿ ಅಡ್ಡಿ ಪಡಿಸಿದ. ಮಳೆ ಯಾವಾಗ ನಿಲ್ತೋ ಆಗ ಶುರುವಾಯ್ತು ನೋಡಿ ಇಂಡಿಯನ್​ ಟೈಗರ್​ಗಳ ಆರ್ಭಟ. ಮೊದಲು ಬ್ಯಾಟಿಂಗ್​.. ಆಮೇಲೆ ಬೌಲಿಂಗ್​​.. ಟೋಟಲ್​ ಡಾಮಿನೇಶನ್​ ಮಾಡಿದ ಟೀಮ್​ ಇಂಡಿಯನ್ಸ್​ ಗಯಾನದಲ್ಲಿ ವಿಜಯ ಪತಾಕೆ ಹಾರಿಸಿದರು.
/newsfirstlive-kannada/media/post_attachments/wp-content/uploads/2024/06/Team-India.jpg)
2022ರ ಚುಟುಕು ವಿಶ್ವಕಪ್​ ಸೆಮಿಸ್​ನಲ್ಲಿ ಆಂಗ್ಲರು ಟೀಮ್​ ಇಂಡಿಯಾವನ್ನ ಅಟ್ಟಾಡಿಸಿ ಹೊಡೆದಿದ್ದರು. ಆ ರಿವೇಂಜ್​ ಫೈಟ್​ಗೆ ಈ ಬಾರಿ ಪರ್ಫೆಕ್ಟ್​ ವೇದಿಕೆ ಸಿದ್ಧವಾಗಿತ್ತು. ಸೇಡಿನ ಜ್ವಾಲೆ ಟೀಮ್​ ಇಂಡಿಯಾ ಆಟಗಾರರ ಎದೆಯಲ್ಲಿ ಹೊತ್ತಿ ಉರೀತಾ ಇತ್ತು. ಆಂಗ್ಲರ ಅಟ್ಟಹಾಸಕ್ಕೆ ಬ್ರೇಕ್​ ಹಾಕಿ ಆ ಸೇಡನ್ನ ಬಡ್ಡಿ ಸಮೇತ ಚುಕ್ತಾ ಮಾಡಿಕೊಂಡಿದೆ ಇಂಡಿಯಾ. ಸೆಮಿಸ್​ನಲ್ಲಿ 68 ರನ್​ಗಳ ದಿಗ್ವಿಜಯ ಅಂದ್ರೆ ಸಾಮಾನ್ಯನಾ.
10 ವರ್ಷಗಳ ಬಳಿಕ ಫೈನಲ್​ಗೆ ಟೀಮ್​ ಇಂಡಿಯಾ ಎಂಟ್ರಿ.!
ಫೈನಲ್​ನಲ್ಲಿ ಫೈಟ್​ನಲ್ಲಿ ಸೋಲಿಲ್ಲದ ಸರದಾರರ ಮುಖಾಮುಖಿ.!
2014 ಟಿ20 ವಿಶ್ವಕಪ್​ ಕೊನೆ.. ಆ ಬಳಿಕ ಟೀಮ್​ ಇಂಡಿಯಾ ಚುಟುಕು ವಿಶ್ವಕಪ್​ನಲ್ಲಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದೇ ಇಲ್ಲ. ಇದೀಗ 10 ವರ್ಷಗಳ ಬಳಿಕ ರೋಹಿತ್​ ಪಡೆ ಫೈನಲ್​ಗೆ ಸೋಲಿಲ್ಲದ ಸರದಾರನಂತೆ ಎಂಟ್ರಿ ಕೊಟ್ಟಿದೆ. ಬಾರ್ಬಡೋಸ್​ನಲ್ಲಿ ನಡೆಯೋ ಫೈನಲ್​ ಫೈಟ್​ನಲ್ಲಿ ಸೌತ್​ ಆಫ್ರಿಕಾವನ್ನ ಎದುರಿಸಲಿದೆ. ಭಾರತ ತಂಡದ ಸದ್ಯದ ಅಬ್ಬರ ನೋಡಿದ್ರೆ, ಫೈನಲ್​​ ಗೆಲ್ಲೋದು ಕಷ್ಟದ ವಿಚಾರವೇನಲ್ಲ.
/newsfirstlive-kannada/media/post_attachments/wp-content/uploads/2024/06/Rohit-Sharma-INDvsENG2024.jpg)
ಈ ಸಲ ಕಪ್ ನಮ್ದೇ!!
ಟಿ20 ಫೈನಲ್​ಗೆ ಎಂಟ್ರಿ ಕೊಟ್ಟಿರುವ ಟೀಮ್​ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಿಸಿಸಿಐ ಅಧ್ಯಕ್ಷ ಜೈಶಾ ಅವರು ರೋಹಿತ್ ಪಡೆ ಆಟಕ್ಕೆ ಸಂತಸ ವ್ಯಕ್ತಪಡಿಸಿದ್ದು, ಈ ಸಲ ಕಪ್ ಗೆಲ್ಲೋದು ನಾವೇ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us