/newsfirstlive-kannada/media/post_attachments/wp-content/uploads/2025/03/Ind-Vs-NZ-Match-1.jpg)
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಫೈಟ್‌ನಲ್ಲಿ ಟೀಮ್ ಇಂಡಿಯಾನೇ ಗೆಲ್ಲೋ ಫೇವರಿಟ್ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಹಾಗಂತ, ಮೈ ಮರೆಯುವಂತಿಲ್ಲ.. ಆತ್ಮವಿಶ್ವಾಸ ಓಕೆ. ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ ಕಷ್ಟ. ಕಷ್ಟ. ಯಾಕಂದ್ರೆ, ಸೈಲೆಂಟ್ ಕಿಲ್ಲರ್ ಕಿವೀಸ್ ಪಡೆಯಲ್ಲಿ ಪವರ್ಫುಲ್ ಮಿಸೈಲ್ಗಳಿವೆ. ಆ ಮಿಸೈಲ್ಗಳ ಮುಂದೆ ಯಾಮಾರಿದ್ರೆ, ಅಷ್ಟೇ ಕಥೆ.
ಇಂಡೋ - ಕಿವೀಸ್ ಫೈನಲ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ದುಬೈನಲ್ಲಿ ದರ್ಬಾರ್ ನಡೆಸಿ ಚಾಂಪಿಯನ್ ಕಿರೀಟಕ್ಕೆ ಮುತ್ತಿಡಲು ಉಭಯ ತಂಡಗಳು ನಾನಾ ತಂತ್ರ-ಪ್ರತಿತಂತ್ರ ರೂಪಿಸಿವೆ. ಲೀಗ್ನಲ್ಲಿ ನ್ಯೂಜಿಲೆಂಡ್ ತಂಡದ ಎದುರು ಗೆದ್ದ ಅತ್ಯುತ್ಸಾಹದಲ್ಲಿರುವ ಟೀಮ್ ಇಂಡಿಯಾ, ಫೈನಲ್ಸ್ನಲ್ಲೂ ಸೆದೆಬಡೆಯೋ ಲೆಕ್ಕಾಚಾರದಲ್ಲಿದೆ. ಆದ್ರೆ, ಅದು ಅಷ್ಟು ಸುಲಭದಲ್ಲ.. ಇದಕ್ಕೆ ಕಾರಣ ಕಿವೀಸ್ ಬತ್ತಳಿಕೆಯಲ್ಲಿರುವ ಆ ಪವರ್ ಫುಲ್ ಮಿಸೈಲ್ಗಳು.
ದುಬೈನಲ್ಲೇ ನಮ್ದೇ ದರ್ಬಾರ್.. ಫೈನಲ್ ಗೆಲ್ತೇವೆ.. ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಡ್ತೇವೆ ಅನ್ನೋ ನಂಬಿಕೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳಲ್ಲಿದೆ. ಆದ್ರೆ, ಟೀಮ್ ಇಂಡಿಯಾದ ಸಂಹಾರಕ್ಕೆ ಕಿವೀಸ್ ಪಡೆಯಲ್ಲಿರುವ ಆ ಬ್ರಹ್ಮಾಸ್ತ್ರಗಳು.. ಒಂದಕ್ಕಿಂದ ಒಂದು ಪವರ್ ಫುಲ್ ಆ್ಯಂಡ್ ಡೇಜರಸ್.. ಅಷ್ಟೇ ಅಲ್ಲ.! ಟೀಮ್ ಇಂಡಿಯಾ ಪಾಲಿಗೆ ವಿಲನ್ಸ್.
01. ರಚಿನ್ ರೋರಿಂಗ್.. ಕನ್ನಡಿಗ ಆಗ್ತಾನೆ ಕಂಟಕ..!
ಟೀಮ್ ಇಂಡಿಯಾಗೆ ಬಿಗೆಸ್ಟ್ ಥ್ರೆಟ್ ಅಂದ್ರೆ, ಯಂಗ್ ಸೆನ್ಸೇಷನ್ ರಚಿನ್ ರವೀಂದ್ರ.. ಕನ್ನಡಿಗನೇ ಆಗಿರುವ ಈತ ಟೀಮ್ ಇಂಡಿಯಾಗೆ ಕಂಟಕ ಆಗೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ ಆಡಿರೋ 3 ಪಂದ್ಯಗಳಿಂದ 75.33ರ ಬ್ಯಾಟಿಂಗ್ ಅವರೇಜ್ನಲ್ಲಿ 226 ರನ್ ಚಚ್ಚಿರುವ ರಚಿನ್, 2 ಶತಕ ಸಿಡಿಸಿದ್ದಾರೆ. ಟೀಮ್ ಇಂಡಿಯಾ ಎದುರಿನ ಲೀಗ್ ಮ್ಯಾಚ್ನಲ್ಲಿ ರವೀಂದ್ರನ ಅಬ್ಬರ ನಡೆಯದಿದ್ದರೂ, 2023ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ನೀಡಿದ್ದ ಕಾಟ ಮರೆಯುವಂತಿಲ್ಲ.
02. ಸೈಲೆಂಟ್ ಕಿಲ್ಲರ್ ಕೇನ್ ಬಗ್ಗೆ ಎಚ್ಚರ.. ಎಚ್ಚರ..!
ಕೇನ್ ವಿಲಿಯಮ್ಸನ್.. ಕಿವೀಸ್ ಪಡೆಯ ಬ್ಯಾಟಿಂಗ್ ಮಾಸ್ಟರ್. ಕ್ರೂಶಿಯಲ್ ಮ್ಯಾಚ್ಗಳಲ್ಲಿ ಕ್ರೀಸ್ಗೆ ಅಂಟಿಕೊಳ್ಳುವ ಕೇನ್, ಸೈಲೆಂಟ್ ಆಗಿಯೇ ಗೇಮ್ನ ಮುಗಿಸೋ ಸೈಲೆಂಟ್ ಕಿಲ್ಲರ್. ಎಂಥಹ ಕಂಡೀಷನ್ಸ್ನಲ್ಲದರೂ ಆಡೋ ಸಾಮರ್ಥ್ಯ ಇರೋ ಕೇನ್, ಟೀಮ್ ಇಂಡಿಯಾ ಎದುರು ಸಾಲಿಡ್ ಆಟವಾಡುತ್ತಾರೆ. ಹೀಗಾಗಿ ಕೇನ್ ವಿಲಿಯಮ್ಸನ್ ಎಚ್ಚರ ವಹಿಸಬೇಕು. ಇಲ್ಲ ಖೇಲ್ ಖತಂ ಗ್ಯಾರಂಟಿ.
03. ಮಿಚೆಲ್ ಸ್ಯಾಟ್ನರ್ ಸೂಪರ್ ಆಟ!
ನ್ಯೂಜಿಲೆಂಡ್ ಕ್ಯಾಪ್ಟನ್ ಮಿಚೆಲ್ ಸ್ಯಾಟ್ನರ್ ಬಗ್ಗೆ ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ. ಯಾಕಂದ್ರೆ, ಲೋವರ್ ಆರ್ಡರ್ನಲ್ಲಿ ಬ್ಯಾಟ್ ಬೀಸಬಲ್ಲ ಸ್ಯಾಟ್ನರ್, ಸ್ಪಿನ್ ಮೆಜಿಶೀಯನ್ ಆಗಿ ತಂಡಕ್ಕೆ ನೆರವಾಗ್ತಾರೆ. ಈ ಲೆಫ್ಟಿ ಸ್ಪಿನ್ನರ್ ಟೀಮ್ ಇಂಡಿಯಾ ಆಟಗಾರರಿಗೆ ಸಖತ್ ಕಾಟ ನೀಡಿದ್ದಾರೆ. ವಿರಾಟ್ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಸ್ಯಾಟ್ನರ್, 6 ಬಾರಿ ಔಟ್ ಮಾಡಿದ್ದಾರೆ. ಈತನ ಎದುರು ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಇಲ್ಲ ಟೀಮ್ ಇಂಡಿಯಾ ಕಷ್ಟ ತಪ್ಪಿದಿಲ್ಲ.
ಇದನ್ನೂ ಓದಿ: ನ್ಯೂಜಿಲೆಂಡ್ ತುಂಬಾನೇ ಡೇಂಜರ್.. ಈ 3 ಕಹಿ ಘಟನೆಯನ್ನ ರೋಹಿತ್ ಪಡೆ ಮರೆಯಬಾರದು..!
ಇವ್ರೇ ಅಲ್ಲ. ಗ್ಲೇನ್ ಫಿಲಿಫ್ಸ್, ಮೈಕೆಲ್ ಬ್ರಾಸ್ವೆಲ್ರಂಥ ಡೇಂಜರಸ್ ಆಟಗಾರರೂ ಕಿವೀಸ್ ಪಡೆಯಲ್ಲಿದ್ದಾರೆ. ಹೀಗಾಗಿ ರೋಹಿತ್ ಬ್ರಿಗೇಡ್ ಸಾಲಿಡ್ ಸ್ಟ್ರಾಟರ್ಜಿ ಆ್ಯಂಡ್ ಗೇಮ್ ಪ್ಲಾನ್ನೊಂದಿಗೆ ರಣರಂಗಕ್ಕಿಳಿಯಬೇಕು. ಇಲ್ಲ ಹಳೇ ಇತಿಹಾಸವೇ ಮರುಕಳಿಸೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ