/newsfirstlive-kannada/media/post_attachments/wp-content/uploads/2025/02/IND-VS-PAK-1.jpg)
ಇಂಡೋ-ಪಾಕ್​​ ಹೈವೋಲ್ಟೆಜ್​ ಕದನದಲ್ಲಿ ಟೀಮ್​ ಇಂಡಿಯಾನೇ ಗೆಲ್ಲೋ ಹಾಟ್ ಫೇವರಿಟ್​. ಭಾರತೀಯ ಕ್ರಿಕೆಟ್​ ಅಭಿಮಾನಿಗಳು, ಕ್ರಿಕೆಟ್​ ಎಕ್ಸ್​​​ಪರ್ಟ್ಸ್​ ಮಾತ್ರವಲ್ಲ. ಶಾಹೀದ್​ ಅಫ್ರಿದಿಯಂತಹ ಪಾಕಿಸ್ತಾನದ ದಿಗ್ಗಜ ಮಾಜಿ ಆಟಗಾರರೇ ಟೀಮ್​ ಇಂಡಿಯಾ ಗೆಲ್ಲುತ್ತೆ ಅನ್ನೋ ಭವಿಷ್ಯ ನುಡಿಯುತ್ತಿದ್ದಾರೆ. ಹಾಗಾದ್ರೆ, ರೋಹಿತ್​ ಪಡೆಗೆ ಗೆಲುವು ಅಷ್ಟೊಂದು ಸುಲಭನಾ? ಯಾವ ಚಾಲೆಂಜೂ ಇಲ್ವಾ? ಖಂಡಿತಾ ಇದೆ.
ವಿಶ್ವ ಕ್ರಿಕೆಟ್​ ಲೋಕದ ಚಿತ್ತ ಅರಬ್ಬರ ನಾಡು ದುಬೈ ಮೇಲಿದೆ. ಕೆಲವೇ ಗಂಟೆಗಳಲ್ಲಿ ದುಬೈನ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಹೈವೋಲ್ಟೆಜ್​​​ ಕ್ರಿಕೆಟ್​ ಕಾಳಗ ಆರಂಭವಾಗಲಿದೆ. ಇಂಡೋ-ಪಾಕ್​ ನಡುವಿನ ಬಿಗ್​ ಬ್ಯಾಟಲ್​ ಕ್ರಿಕೆಟ್​ ಕಾವನ್ನ ಹೆಚ್ಚಿಸಿದೆ.
ಚಾಂಪಿಯನ್ಸ್​ ಟ್ರೋಫಿಯ ಮೊದಲ ಪಂದ್ಯ ಗೆದ್ದು ಟೀಮ್​ ಇಂಡಿಯಾ ಆತ್ಮವಿಶ್ವಾಸದ ಅಲೆಯಲ್ಲಿದೆ. ಆದ್ರೆ, ಪಾಕ್​​ ಮೊದಲ ಪಂದ್ಯ ಸೋತು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಪರ್ಫಾಮೆನ್ಸ್​ ಲೆಕ್ಕಾಚಾರದಲ್ಲಿ ಸದ್ಯಕ್ಕಂತೂ ಟೀಮ್​ ಇಂಡಿಯಾನೇ ಗೆಲ್ಲೋ ಹಾಟ್​ ಫೇವರಿಟ್​. ಹಾಗಂತ ಪಾಕಿಸ್ತಾನವನ್ನ ಕಡೆಗಣಿಸುವಂತಿಲ್ಲ. ರೋಹಿತ್​ ಪಡೆಯ ಮುಂದೆಯೂ ಹಲವು ಸವಾಲುಗಳಿವೆ.
/newsfirstlive-kannada/media/post_attachments/wp-content/uploads/2023/06/INDVSPAK_MATCH_1.jpg)
ದುಬೈ ಅಂಗಳದಲ್ಲಿ ಪಾಕ್​ ವಿರುದ್ಧ ಸೋಲಿನ ದರ್ಶನ!
ಇಂದಿನ ಪಂದ್ಯ ನಡೀತಾ ಇರೋದೇ ದುಬೈ ಮೈದಾನದಲ್ಲಿ. ಈ ಮೈದಾನದಲ್ಲಿ ಟೀಮ್​ ಇಂಡಿಯಾ ಪಾಕ್​ ವಿರುದ್ಧ 2 ಬಾರಿ ಮುಗ್ಗರಿಸಿದೆ. 2021ರ ಟಿ20 ವಿಶ್ವಕಪ್​ ಫೈಟ್​​ನಲ್ಲಿ ಪಾಕ್​ ವಿರುದ್ಧ ಸೋತ ಟೀಮ್​ ಇಂಡಿಯಾ, ಟೂರ್ನಿಯಿಂದಲೇ ಹೊರ ಬಿದ್ದು ಮುಖಭಂಗ ಅನುಭವಿಸಿತ್ತು.
2022ರಲ್ಲಿ ನಡೆದ ಏಷ್ಯಾಕಪ್​ನ ಸೂಪರ್​ 4 ಫೈಟ್​ನಲ್ಲೂ, ಟೀಮ್​ ಇಂಡಿಯಾ ಪಾಕ್​ ವಿರುದ್ಧ ಸೋಲಿಗೆ ಶರಣಾಯ್ತು. 182 ರನ್​ಗಳ ಟಾರ್ಗೆಟ್​ ಡಿಫೆಂಡ್​ ಮಾಡಿಕೊಳ್ಳುವಲ್ಲಿ ಎಡವಿದ ಟೀಮ್​ ಇಂಡಿಯಾ, 5 ವಿಕೆಟ್​ಗಳ ಅಂತರದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿತ್ತು.
/newsfirstlive-kannada/media/post_attachments/wp-content/uploads/2025/02/IND-VS-PAK.jpg)
UAE ಪಾಕಿಸ್ತಾನದ​ ಪಾಲಿಗೆ ಸೆಕೆಂಡ್​ ಹೋಮ್​.!
UAE ಪಾಕಿಸ್ತಾನ ತಂಡದ ಪಾಲಿಗೆ 2ನೇ ತವರು ಮನೆ ಇದ್ದಂತೆ. 185 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನ UAEನಲ್ಲಿ ಪಾಕಿಸ್ತಾನ ತಂಡ ಆಡಿದೆ. ಹೀಗಾಗಿ ಇಲ್ಲಿನ ಪ್ಲೇಯಿಂಗ್​ ಕಂಡೀಷನ್ಸ್​ ಬಗ್ಗೆ ಪಾಕ್​ಗೆ, ಪಿನ್​ ಟು ಪಿನ್​ ಮಾಹಿತಿಯಿದೆ. ಒಂದರ್ಥ ಹೋಮ್​ ಕಂಡೀಷನ್ಸ್​ನಲ್ಲಿ ಸಿಗೋ ಲಾಭ ಇಲ್ಲೂ ರಿಜ್ವಾನ್​ ಪಡೆಗೆ ಸಿಗಲಿದೆ. ಟಾಸ್​​ ಲೆಕ್ಕಾಚಾರ, ಪಿಚ್​ ವರ್ತನೆ, ಗೇಮ್​ ರೀಡಿಂಗ್​ ಈ ಎಲ್ಲಾ ವಿಚಾರಗಳಲ್ಲಿ ಪಾಕ್​ ಪಡೆ ಭಾರತ ತಂಡಕ್ಕಿಂತ ಒಂದೆಜ್ಜೆ ಮುಂದಿರಲಿದೆ.
ಲೆಫ್ಟ್​ ಆರ್ಮ್​ ಪೇಸರ್​​ ಶಾಹೀನ್​ ಅಫ್ರಿದಿ ಬಿಗ್​ ಥ್ರೆಟ್​.!
ಪಾಕಿಸ್ತಾನ​ ತಂಡದ ಪ್ರಮುಖ ಶಾಹೀನ್​ ಶಾ ಅಫ್ರಿದಿಗೂ ಇಲ್ಲಿನ ಪ್ಲೇಯಿಂಗ್​ ಕಂಡಿಷನ್​​​ ಸಖತ್ತಾಗಿ ಸೂಟ್​ ಆಗುತ್ತೆ. 2021ರ ಟಿ20 ವಿಶ್ವಕಪ್​​ನಲ್ಲಿ ಇದೇ ದುಬೈ ಸ್ಟೇಡಿಯಂನಲ್ಲಿ ರೋಹಿತ್​, ರಾಹುಲ್​, ಕೊಹ್ಲಿಯಂತ ಟೀಮ್​ ಇಂಡಿಯಾ ಬಿಗ್​ ಸ್ಟಾರ್​ಗಳ ವಿಕೆಟ್​ ಎಗರಿಸಿದ್ರು. ಟೀಮ್​ ಇಂಡಿಯಾ ಸ್ಟಾರ್​​ಗಳಿಗೆ ಈಗಲೂ ಲೆಫ್ಟ್​ ಆರ್ಮ್​ ಪೇಸರ್​​ಗಳ ವೀಕ್​ನೆಸ್​​ ಕಾಡ್ತಿದೆ. ಹೀಗಾಗಿ ಶಾಹೀನ್​ ಪೇಸ್​ & ಸ್ವಿಂಗ್​ನ ಎಚ್ಚರಿಕೆಯಿಂದ ಡೀಲ್​​ ಮಾಡಬೇಕಿದೆ.
/newsfirstlive-kannada/media/post_attachments/wp-content/uploads/2024/06/Pakistan_Players.jpg)
ಬೂಮ್ರಾ ಇಲ್ಲ...! ರಿಜ್ವಾನ್​, ಬಾಬರ್​​.. ಡೇಂಜರ್​​..!
ಟೀಮ್​ ಇಂಡಿಯಾ ಪ್ರಮುಖ ವೇಗಿ ಜಸ್​ಪ್ರಿತ್​ ಬೂಮ್ರಾ ಸೇವೆಯನ್ನ ಕಳೆದುಕೊಂಡಿದೆ. ಹೀಗಾಗಿ ಪಾಕ್​ ನಾಯಕ ಮೊಹಮ್ಮದ್​ ರಿಜ್ವಾನ್​, ಬಾಬರ್​ ಅಝಂ ಟೀಮ್​ ಇಂಡಿಯಾವನ್ನ ಕಾಡೋ ಸಾಧ್ಯತೆಯಿದೆ. ಟೀಮ್​ ಇಂಡಿಯಾ ವಿರುದ್ಧದ ಪಂದ್ಯ ಅಂದ್ರೆ ಕ್ರೀಸ್​ ಕಚ್ಚಿ ಆಡೋ ಇವರಿಬ್ಬರಿಗೆ ಸೆಟಲ್​ ಆಗೋಲೆ ಬಿಡುವಂತಿಲ್ಲ. ಕ್ರಿಸ್​ನಲ್ಲಿ ಸೆಟಲ್​ ಆದ್ರೆ ರನ್​​ ಹೊಳೆ ಹರಿಸಿಬಿಡ್ತಾರೆ. 2021ರ ಟಿ20 ವಿಶ್ವಕಪ್​ನಲ್ಲಿ ಇವರಿಬ್ಬರು ವಿಕೆಟ್​ ಬಿಟ್​​ ಕೊಡದೇ ಟಾರ್ಗೆಟ್​​ ಚೇಸ್ ಮಾಡಿದ್ರಲ್ವಾ.. ಅದನ್ನ ಮರೆಯಬಾರದು.
ಇದನ್ನೂ ಓದಿ: ಭಾರತಕ್ಕೆ 4 ಸೂಪರ್ ಸ್ಟಾರ್ಸ್ ಪವರ್.. ಈ ನಾಲ್ವರು ಸಿಡಿದೆದ್ರೆ ಪಾಕಿಸ್ತಾನ ನೆಲ ಕಚ್ಚೋದು ಪಕ್ಕಾ!
ಯುವ ಆಟಗಾರರಿದ್ದಾರೆ​ ಎಚ್ಚರ.! ಎಚ್ಚರ.!
ಪಾಕ್​ ಪಡೆಯಲ್ಲಿ ಯುವ ಆಟಗಾರರ ದಂಡೇ ಇದೆ. ಸೌದ್​ ಶಕೀಲ್​, ಸಲ್ಮಾನ್​ ಆಘಾ, ಖುಷ್ದಿಲ್​ ಷಾರನ್ನ ಕಡೆಗಣಿಸುವಂತಿಲ್ಲ. ಲೆಗ್​ ಸ್ಪಿನ್ನರ್​ ಅಬ್ರಾಹಂ ಅಹ್ಮದ್​, ವೇಗಿ ನಸೀಮ್​ ಶಾ ಕೂಡ ಅಷ್ಟೇ ಡೇಂಜರಸ್​.. ಈ ಯಂಗ್​ ವೆಪನ್​ಗಳ ಎದುರು​​ ನಗ್ಲೆಟ್​ ಮಾಡದೆ ಸೀರಿಯಸ್​ ಆಟವಾಡಬೇಕಿದೆ.
ಮೇಲ್ನೋಟಕ್ಕೆ ಗೆಲ್ಲೋ ಫೇವರಿಟ್​ ಅನ್ನಿಸಿಕೊಂಡಿರೋ ಟೀಮ್​ ಇಂಡಿಯಾ, ಈ ಎಲ್ಲಾ ಚಾಲೆಂಜ್​ಗಳನ್ನ ಮೆಟ್ಟಿ ನಿಲ್ಲಬೇಕಿದೆ. ಆಗ ಮಾತ್ರ ದುಬೈನಲ್ಲಿ ವಿಜಯ ದುಂದುಭಿ ಮೊಳಗಿಸಲು ಸಾಧ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us