/newsfirstlive-kannada/media/post_attachments/wp-content/uploads/2025/04/child-dearth.jpg)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರುಣಾಜನಕ ಘಟನೆ ನಡೆದು ಹೋಗಿದೆ. ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಬಾಳಿ ಬದುಕಬೇಕಾಗಿದ್ದ ಶಿಶುವೊಂದು ಸಾವನ್ನಪ್ಪಿದೆ. ಹೌದು, ಹದಿಹರೆಯದ ವಯಸ್ಸಿನಲ್ಲಿ ಅಪ್ರಾಪ್ತ ಇಬ್ಬರು ಪ್ರೀತಿಯಲ್ಲಿ ಬಿದ್ದು ಪುಟ್ಟ ಕಂದಮ್ಮನನ್ನೇ ಬಲಿಕೊಟ್ಟಿದ್ದಾರೆ. ಅಚ್ಚರಿ ಏನೆಂದರೆ ಸ್ನೇಹಿತರೇ ಸೇರಿಕೊಂಡು ಡೆಲಿವರಿ ಮಾಡಿರೋ ಬಗ್ಗೆ ಗೊತ್ತಾಗಿದೆ.
ಇದನ್ನೂ ಓದಿ:ಕರುಳು ಚುರ್ ಅನ್ನೋ ಕೃತ್ಯ.. ಕಸ ಬಿಸಾಡು ಅಂತಾ ವೃದ್ಧನ ಕೈಗೆ ಕವರ್ ಕೊಟ್ಟ ಯುವತಿ.. ಅದರಲ್ಲಿ ಏನಿತ್ತು..?
ಬೆಂಗಳೂರಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮನೆ ಹತ್ತಿರದಲ್ಲೇ ವಾಸವಿರುವ ವೃದ್ಧನ ಕೈಯಲ್ಲಿ ಈ ಕಸ ಬಿಸಾಡಿ ಅಂತಾ ಅಪ್ರಾಪ್ತೆ ಶಿಶುವಿದ್ದ ಕವರ್ ಅನ್ನು ಕೊಟ್ಟಿದ್ದಾಳೆ. ಆಗ ವೃದ್ಧ ಅದರ ಅರಿವಿಲ್ಲದೇ ಆ ಕವರ್ ಅನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಹೋಗಿದ್ದಾರೆ. ಹೀಗೆ ಪೌರಕಾರ್ಮಿಕರು ಕಸ ಸ್ವಚ್ಛ ಮಾಡುವಾಗ ಶಿಶುವಿನ ಶವವನ್ನ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆ ಕೂಡಲೇ ಪೊಲೀಸರಿಂದ ತನಿಖೆ ಶುರು ಮಾಡಿ ಸುತ್ತಮುತ್ತಲ ಸಿಸಿಟಿವಿ ಸರ್ಚ್ ಮಾಡಿಸಿದ್ದಾರೆ. ಅದೇ ವೇಳೆ ಪೊಲೀಸರಿಗೆ CCTVಯಲ್ಲಿ ಸೈಕಲ್ನಲ್ಲಿ ವೃದ್ಧನ ಗುರುತು ಪತ್ತೆಯಾಗಿದೆ. ಕವರ್ನಲ್ಲಿದ್ದ ಶಿಶುವಿನ ಶವ ಎಸೆದ ವೃದ್ಧನನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಆಗ ನೋಡಿ ವೃದ್ಧನಿಂದಲೇ ಅಪ್ರಾಪ್ತರ ಲವ್ ಸ್ಟೋರಿ, ಶಿಶು ಸಾವಿನ ಸತ್ಯ ಬೆಳಕಿಗೆ ಬಂದಿದೆ.
ಪೊಲೀಸರು ವೃದ್ಧನ ಮಾಹಿತಿ ಪಡೆದು ನೇರವಾಗಿ ಆಕೆಯ ಮನೆಗೆ ಹೋಗಿದ್ದಾರೆ. ವಿಚಾರಣೆ ವೇಳೆ ಆಗ ಅಪ್ರಾಪ್ತೆ ಹುಡುಗನ ಜೊತೆಗಿನ ಲವ್ ಸ್ಟೋರಿ ರಿವೀಲ್ ಆಗಿದೆ. ಹೀಗೆ ಸ್ನೇಹಿತರೇ ಸೇರಿಕೊಂಡು ಮಾಡಿರೋ ಡಿಲೆವರಿ ಯಡವಟ್ಟಿನಿಂದ ನವಜಾತ ಶಿಶು ಉಸಿರುಗಟ್ಟಿ ಸಾವನ್ನಪ್ಪಿದೆ. ಇದು ಯಾರಿಗೂ ಗೊತ್ತಾಗಬಾರದು ಅಂತ ಮಗುವಿನ ಶವವನ್ನ ಕವರ್ನಲ್ಲಿಟ್ಟು ಕಸ ಅಂತಾ ವೃದ್ಧನ ಕೊಟ್ಟಿರುವುದಾಗಿ ಪೊಲೀಸರ ಮುಂದೆ ಅಪ್ರಾಪ್ತೆ ಬಾಯ್ಬಿಟ್ಟಿದ್ದಾಳೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಯಲಹಂತಕ ಪೊಲೀಸರು ಅಪ್ರಾಪ್ತನನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ