newsfirstkannada.com

ಸ್ಕಾಲರ್​ಶಿಪ್​ಗಾಗಿ ಇನ್ಫೋಸಿಸ್ ಅರ್ಜಿ ಆಹ್ವಾನ.. ಆಯ್ಕೆಯಾದವರಿಗೆ ಎಷ್ಟು ಲಕ್ಷ? ಅರ್ಹತೆಗಳು ಏನು?

Share :

Published August 12, 2024 at 2:16pm

Update August 12, 2024 at 2:19pm

    ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಿರಬೇಕು?

    ಇನ್ಫೋಸಿಸ್ ಫೌಂಡೇಷನ್​ಗೆ ಆನ್​ಲೈನ್ ಮೂಲಕ ಅಪ್ಲೇ ಮಾಡಿ

    ಸ್ಕಾಲರ್​ಶಿಪ್​ಗೆ ಅಪ್ಲೇ ಮಾಡಲು ಯಾವ್ಯಾವ ದಾಖಲೆಗಳು ಬೇಕು.?

ವಿದ್ಯಾರ್ಥಿವೇತನಕ್ಕಾಗಿ ಇನ್ಫೋಸಿಸ್ ಸಂಸ್ಥೆ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಆಗಸ್ಟ್​ 15ರ ಒಳಗೆ ಆಸಕ್ತ ಮಹಿಳಾ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದಾಗಿದೆ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?

ಇನ್ಫೋಸಿಸ್ ಫೌಂಡೇಷನ್ ಎಸ್‌ಟಿಇಎಂ ಸ್ಟಾರ್ಸ್‌ ಸ್ಕಾಲರ್‌ಶಿಪ್‌ ಪ್ರೋಗ್ರಾಮ್ 2024-25ರ ಸಾಲಿನ ಅರ್ಜಿಗಳನ್ನ ಆಹ್ವಾನ ಮಾಡಿದೆ. ಇಂಜಿನಿಯರಿಂಗ್, ಎಂಬಿಬಿಎಸ್, ಗಣಿತ, ತಂತ್ರಜ್ಞಾನ, ವಿಜ್ಞಾನ ವಿಷಯಗಳಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದ ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಪ್ರತಿ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಇದೇ 15 ಕೊನೆ ದಿನಾಂಕ ಆಗಿದ್ದು ವಿದ್ಯಾರ್ಥಿನಿಯರು ಆನ್​ಲೈನ್​ ಮೂಲಕ ಅಪ್ಲೇ ಮಾಡಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಆಧಾರ್/ಪಾನ್ ಕಾರ್ಡ್​, ದ್ವಿತಿಯ ಪಿಯುಸಿಯ ಪ್ರಮಾಣ ಪತ್ರ, ಜೆಇಇ/ಸಿಇಟಿ/ ನೀಟ್​ನಲ್ಲಿ ಪಡೆದ ಮಾರ್ಕ್ಸ್​ಶೀಟ್, ಸದ್ಯ ಅಡ್ಮಿಷನ್ ಆದ ಪದವಿಯ ಪ್ರಮಾಣ ಪತ್ರ, ಪಾಸ್ ​ಫೋಟೋಗಳು, ಆದಾಯ ಪ್ರಮಾಣ ಪತ್ರ, ಕರೆಂಟ್ ಬಿಲ್, ಬ್ಯಾಂಕ್ ಅಕೌಂಟ್ ಮಾಹಿತಿ.

ವಿದ್ಯಾರ್ಥಿನಿಯರು ಅಪ್ಲೇ ಮಾಡಬೇಕು ಎಂದರೆ ಈ ಲಿಂಕ್​ಗೆ ಭೇಟಿ ಕೊಡಿ- ವೆಬ್‌ಸೈಟ್‌ https://www.buddy4study.com/page/infosys-stem-stars-scholarship

ಅರ್ಜಿ ಹಾಕಲು ವಿದ್ಯಾರ್ಥಿನಿಯರಿಗೆ ಏನೇನು ಅರ್ಹತೆಗಳು ಇರಬೇಕು..?

  • ಭಾರತೀಯ ವಿದ್ಯಾರ್ಥಿನಿ ಆಗಿರಬೇಕು.
  • ವಿಜ್ಞಾನ, ಗಣಿತ ವಿಭಾಗದ 4 ವರ್ಷದ ಪದವಿಗೆ ಇದೇ ವರ್ಷ ಅಡ್ಮಿಷನ್ ಆಗಿರಬೇಕು.
  • ಬೇರೆ ಸ್ಕಾಲರ್​ಶಿಪ್​ಗಳನ್ನ ಪಡೆದಿರಬಾರದು
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಳಿಗಿಂತ ಹೆಚ್ಚಿರಬಾರದು
  • ಪದವಿಯ 4 ವರ್ಷ ಯಾವುದೇ ವಿಷಯದಲ್ಲಿ ಫೇಲ್ ಆಗಬಾರದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕಾಲರ್​ಶಿಪ್​ಗಾಗಿ ಇನ್ಫೋಸಿಸ್ ಅರ್ಜಿ ಆಹ್ವಾನ.. ಆಯ್ಕೆಯಾದವರಿಗೆ ಎಷ್ಟು ಲಕ್ಷ? ಅರ್ಹತೆಗಳು ಏನು?

https://newsfirstlive.com/wp-content/uploads/2024/08/Scholarship.jpg

Load More