ವಾರಕ್ಕೆ 70 ಗಂಟೆಯ ಕೆಲಸ.. ನಾರಾಯಣ ಮೂರ್ತಿ ಸಲಹೆಗೆ ಖ್ಯಾತ ಹೃದ್ರೋಗ ತಜ್ಞರಿಂದ ಖಡಕ್ ಪ್ರಶ್ನೆ; ನೆಟ್ಟಿಗರು ಫಿದಾ!

author-image
admin
Updated On
ವಾರಕ್ಕೆ 70 ಗಂಟೆಯ ಕೆಲಸ.. ನಾರಾಯಣ ಮೂರ್ತಿ ಸಲಹೆಗೆ ಖ್ಯಾತ ಹೃದ್ರೋಗ ತಜ್ಞರಿಂದ ಖಡಕ್ ಪ್ರಶ್ನೆ; ನೆಟ್ಟಿಗರು ಫಿದಾ!
Advertisment
  • ನಮ್ಮ ದೇಶದ ಯುವಕರು ವಾರಕ್ಕೆ 70 ಗಂಟೆ ಶ್ರಮವಹಿಸಿ ಕೆಲಸ ಮಾಡಬೇಕು
  • ಪ್ರತಿ ದಿನದ 24 ಗಂಟೆಯಲ್ಲಿ 12 ಗಂಟೆ ಕೆಲಸಕ್ಕೆ ಸೀಮಿತವಾಗಿರುತ್ತೆ
  • 8 ಗಂಟೆ ನಿದ್ರೆ, 2 ಗಂಟೆ ವೈಯಕ್ತಿಕ ಕೆಲಸಕ್ಕೆ 2 ಗಂಟೆ ಬೆಂಗಳೂರಿನ ಟ್ರಾಫಿಕ್‌ಗೆ

ಬೆಂಗಳೂರು: ನಮ್ಮ ದೇಶದ ಯುವಕರು ವಾರಕ್ಕೆ 70 ಗಂಟೆ ಶ್ರಮವಹಿಸಿ ಕೆಲಸ ಮಾಡಬೇಕು. ಆಗ ಮಾತ್ರ ಭಾರತದ ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ನಾರಾಯಣ ಮೂರ್ತಿ ಅವರನ್ನೇ ಬೆಂಬಲಿಸಿದ್ರೆ ಮತ್ತೂ ಕೆಲವರು ಇದು ಸರೀನಾ ಎಂದು ಪ್ರಶ್ನಿಸುತ್ತಿದ್ದಾರೆ.

ನಾರಾಯಣ ಮೂರ್ತಿ 70 ಗಂಟೆಯ ಈ ಹೇಳಿಕೆ ವೈರಲ್ ಆದ ಬಳಿಕ ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞರು ಮತ್ತೊಂದು ಮಹತ್ವದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇತ್ತೀಚೆನ ಒತ್ತಡದ ಬದುಕಿಗೆ ವೈದ್ಯರು ಹೇಳೋದು ಸರಿ ಅನಿಸಿದರೂ ಅವರು ಕೊಟ್ಟಿರುವ ಕಾರಣಗಳು ಅಚ್ಚರಿಗೆ ಕಾರಣವಾಗಿದೆ.

publive-image

ಡಾ. ದೀಪಕ್ ಕೃಷ್ಣಮೂರ್ತಿ ಅವರು ಸಾಮಾಜಿಕ ಜಾಲತಾಣವಾದ Xನಲ್ಲಿ ನಾರಾಯಣ ಮೂರ್ತಿ ಅವರ ಸಲಹೆಯನ್ನು ಪ್ರಸ್ತಾಪಿಸಿ ಒಂದು ಟ್ವೀಟ್ ಮಾಡಿದ್ದಾರೆ. ನಾರಾಯಣ ಮೂರ್ತಿ ಅವರ ಪ್ರಕಾರ ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ನಿಜ. ಆದರೆ, ಇತ್ತೀಚೆನ ಲೈಫ್ ಸ್ಟೈಲಿನಿಂದ ಹೆಚ್ಚು, ಹೆಚ್ಚು ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರೋದು ಅಚ್ಚರಿಯ ವಿಚಾರ ಎಂದಿದ್ದಾರೆ.


">October 27, 2023

ಡಾ. ದೀಪಕ್ ಕೃಷ್ಣಮೂರ್ತಿ ಅವರು ಹೇಳುವಂತೆ ಸಾಮಾನ್ಯವಾಗಿ ಬೆಂಗಳೂರಿನ ಯುವ ಸಮುದಾಯ ಒತ್ತಡದಲ್ಲೇ ಕಾಲ ಕಳೆಯುತ್ತಿದೆ. ಒತ್ತಡದಲ್ಲೇ ಸಮಯಕ್ಕೆ ಬೆಲೆ ಕಟ್ಟುವ ಯುವಕರು ಆ ಸಮಯವನ್ನು ಕೆಲಸ ಮತ್ತು ವೈಯಕ್ತಿಕ ಬದುಕಿಗೆ ಹಂಚಿಕೊಂಡಿರುತ್ತಾರೆ. ನನಗೆ ಅರಿವಿರುವಂತೆ ದಿನದ 24 ಗಂಟೆಯಲ್ಲಿ 12 ಗಂಟೆ ಕೆಲಸಕ್ಕೆ ಸೀಮಿತವಾಗಿರುತ್ತೆ. ಉಳಿದ 12 ಗಂಟೆಗಳಲ್ಲಿ 8 ಗಂಟೆ ನಿದ್ದೆಗೆ ಜಾರಿ ಹೋಗುತ್ತದೆ. ಇನ್ನು, 4 ಗಂಟೆಗಳಲ್ಲಿ 2 ಗಂಟೆ ಬೆಂಗಳೂರು ಟ್ರಾಫಿಕ್‌ನಲ್ಲೇ ಕಳೆಯಬೇಕಾಗುತ್ತೆ. 2 ಗಂಟೆಯಲ್ಲಿ ವೈಯಕ್ತಿಕ ಕೆಲಸಗಳಿಗೆ ಉಳಿಯುತ್ತಿದೆ. ಹೀಗಿರುವಾಗ ಸಾಮಾಜಿಕ ಕಾರ್ಯಗಳಿಗೆ, ಕುಟುಂಬಸ್ಥರ ಜೊತೆ ಕಾಲ ಕಳೆಯೋದಕ್ಕೆ, ವ್ಯಾಯಾಮ ಮಾಡೋದಕ್ಕೆ, ಮನರಂಜನೆಗೆ ಸಮಯ ಎಲ್ಲಿದೆ. ಇದರಲ್ಲಿ ಕೆಲಸ ಮುಗಿದ ಬಳಿಕವೂ ಆಫೀಸ್‌ನ ಇ-ಮೇಲ್ ಹಾಗೂ ಫೋನ್‌ ಕರೆಗಳಿಗೆ ಉತ್ತರಿಸುವುದನ್ನು ನಾನು ಸೇರಿಸಿಲ್ಲ. ಇಷ್ಟೆಲ್ಲಾ ಒತ್ತಡ ಇರುವಾಗ ಯುವಕರು ಯಾಕೆ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಡಾ. ದೀಪಕ್ ಕೃಷ್ಣಮೂರ್ತಿ ಅವರು ಮಾಡಿರುವ ಈ ಪೋಸ್ಟ್‌ಗೆ ಬಹಳಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಅನ್ನ ಕೆಲವರು ಒಪ್ಪಿಕೊಂಡಿದ್ರೆ, ಬಹಳಷ್ಟು ಮಂದಿ ಲೈಕ್ಸ್ ಮತ್ತು ಕಮೆಂಟ್‌ಗಳನ್ನು ಮಾಡಿದ್ದಾರೆ. ಒತ್ತಡದ ಜೀವನದಿಂದ ಹೃದಯ ಸಮಸ್ಯೆಗಳು, ಮಾನಸಿಕ ಮತ್ತು ಮಾನಸಿಕ ಸಮಸ್ಯೆಗಳು, ವಿಚ್ಛೇದನ, ಪೋಷಕರ ಸಮಸ್ಯೆಗಳು, ಆತಂಕ ಎದುರಾಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment