/newsfirstlive-kannada/media/post_attachments/wp-content/uploads/2023/09/Infosys.jpg)
ಬೆಂಗಳೂರು: ಈ ಹಿಂದೆಯೇ ಇಂದಿನ ಯುವ ಜನಾಂಗ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾದವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು. ಈಗ ಮತ್ತೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ನಡೆದ ಸಿಎನ್ಬಿಸಿ ಗ್ಲೋಬಲ್ ಲೀಡರ್ಶೀಪ್ ಸಮ್ಮಿಟ್ನಲ್ಲಿ ಮಾತಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು, 1986ರಲ್ಲಿ ಭಾರತದಲ್ಲಿ ಐಟಿ ಕ್ಷೇತ್ರದಲ್ಲಿ ಕೇವಲ 5 ಕೆಲಸ ಮಾಡುವ ನೀತಿ ಜಾರಿಗೆ ತರಲಾಯ್ತು. ಇದು ನನಗೆ ಭಾರೀ ಆಘಾತ ತಂದಿತು ಎಂದರು.
ನನ್ನನ್ನು ದಯವಿಟ್ಟು ಕ್ಷಮಿಸಿ. ಕೆಲಸದ ಅವಧಿ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸತ್ತರೂ ದೇಶದ ಆರ್ಥಿಕ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋದನ್ನು ಮತ್ತೆ ಪ್ರತಿಪಾದಿಸುತ್ಥೇನೆ ಎಂದರು ನಾರಾಯಣ ಮೂರ್ತಿ.
ಮೋದಿಯೇ ಪ್ರೇರಣೆ ಎಂದ್ರು!
ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುತ್ತಾರೆ. ಇವರು ದೇಶದ ಅಭಿವೃದ್ಧಿಗೆ ಮೂಲ ಪ್ರೇರಣೆ. ಮೋದಿ ಹಾಗೆಯೇ ಯುವಕರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು. ನಾನು ವೃತ್ತಿ ಜೀವನದ ಆರಂಭದಲ್ಲಿ ಪ್ರತಿದಿನ 14 ಗಂಟೆ ಕೆಲಸ ಮಾಡುತ್ತಿದ್ದೆ ಎಂದರು.
ಜಪಾನ್, ಜರ್ಮನಿ ರೀತಿಯ ದೇಶದಲ್ಲಿ ಜನ ವಾರಕ್ಕೆ 70 ಗಂಟೆ ಕೆಲಸ ಮಾಡುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ದೇಶ ಕಟ್ಟಿದ್ದಾರೆ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ಗಂಟೆ ಕೆಲಸ ಮಾಡಲೇಬೇಕು. ಆಗ ನಮ್ಮ ದೇಶ ಅಭಿವೃದ್ಧಿ ಆಗುತ್ತದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ