/newsfirstlive-kannada/media/post_attachments/wp-content/uploads/2025/06/CTR-HOSPITAL.jpg)
ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ.. ಆದ್ರೆ, ಇಲ್ಲೊಂದು ಆಸ್ಪತ್ರೆ ಮಾತ್ರ ರೋಗಿಗಳ ಪಾಲಿಗೆ ಶಾಪವಾಗಿ ಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಹುಟ್ಟಿದ ಹಸುಗೂಸು ಜೀವ ಬಿಟ್ಟು ಎಂಟು ದಿನ ಕಳೆದ್ರೂ ಹೆತ್ತ ತಾಯಿಗೆ ಕಂದನ ಮುಖ ತೋರಿಸಿಲ್ಲ. ಇದ್ರಿಂದ ಹೆತ್ತಮ್ಮ ಮಗುವಿನ ಚಿಂತೆಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಕೊರಗುವಂತಾಗ್ಬಿಟ್ಟಿದೆ.
ಕಂದ.. ಎಲ್ಲಿದ್ದೀಯಾ?
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಮಾಳಗೊಂಡನಹಳ್ಳಿ ನಿವಾಸಿ ಸಾಲಮ್ಮ ಕಳೆದ ಎಂಟು ದಿನಗಳ ಹಿಂದೆ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ದಾಖಲಾಗಿದ್ರು. ಆದರೆ ಆಸ್ಪತ್ರೆಗೆ ದಾಖಲಾಗಿ 30 ಗಂಟೆಗಳ ಬಳಿಕ ಸಾಲಮ್ಮ ಅವರಿಗೆ ಸಿಜೆರಿಯನ್ ಮಾಡಿ ಹೆರಿಗೆ ಮಾಡಿಸಿದ್ದರು ವೈದ್ಯರು. ಆದ್ರೆ ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಮಗು ಸತ್ತು ಹೋಗಿದ್ದು, ಅಂದು ಕರ್ತವ್ಯದಲ್ಲಿದ್ದ ಡಾ.ಉಮಾ ಅವರ ಕರ್ತವ್ಯ ಲೋಪಕ್ಕೆ ಮಗು ಬಲಿಯಾಗಿದೆ ಅನ್ನೋದು ಪೋಷಕರ ಆರೋಪ. ಅತ್ತ, ಮಗು ಸತ್ತು ಎಂಟು ದಿನ ಕಳೆದ್ರು ಸತ್ತ ಮಗುವಿನ ಮುಖ ಕೂಡ ಪೋಷಕರಿಗೆ ತೋರಿಸಿಲ್ಲ.. ಅಲ್ಲದೇ ತೀರಿಕೊಂಡಿರುವ ಮಗು ಎಲ್ಲಿದೆ? ಹೇಗಿದೆ ಅಂತ ಹೆತ್ತವರಿಗೆ ಗೊತ್ತಿಲ್ಲದೇ ಮಗುವಿನ ಪೋಷಕರು ಆಸ್ಪತ್ರೆಯಲ್ಲೇ ಪರದಾಡ್ತಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ ಕಣ್ಮನ ಸೆಳೆದ ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ಆಸಿಯಾ; ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ!
ಮಗು ತೀರಿಕೊಂಡು ಎಂಟು ದಿನ ಕಳೆದ್ರೂ ಪೋಷಕರಿಗೆ ಮೃತದೇಹ ಕೊಟ್ಟಿಲ್ಲ ಅಂದ್ರೆ ಏನ್ ಅರ್ಥ ಅಲ್ವಾ? ಹೀಗಾಗಿ ಈ ಬಗ್ಗೆ ತನಿಖೆ ಆಗ್ಬೇಕು ಅಂತ ಹೆತ್ತವ್ವ ಪಟ್ಟು ಹಿಡಿದಿದ್ದಾಳೆ. ಈ ಬಗ್ಗೆ ಮಾತಾನಾಡಿದ ಜಿಲ್ಲಾ ಸರ್ಜನ್ ಡಾ. ರವೀಂದ್ರ ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳೋದಾಗಿ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಮನುಷತ್ವ ಅಂದ್ರೇನು ಅನ್ನೋದೇ ಗೊತ್ತಿಲ್ವೇನೋ? ಇಂಥ ಅಮಾನವೀಯ ಘಟನೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು.
ಇದನ್ನೂ ಓದಿ: ಆಪರೇಷನ್ ಸಿಂಧೂ ಯಶಸ್ವಿ ಕಾರ್ಯಾಚರಣೆ.. ದೆಹಲಿಗೆ ಬಂದಿಳಿದ 110 ಭಾರತೀಯರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ