/newsfirstlive-kannada/media/post_attachments/wp-content/uploads/2025/07/AKASH_DEEP-2.jpg)
5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನ ಆಡಿವೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಗಾಯಗಳ ಸಮಸ್ಯೆ ಎಡೆಬಿಡದೇ ಕಾಡುತ್ತಿವೆ. ರಿಷಭ್ ಪಂತ್, ಅರ್ಷ್ದೀಪ್ ಸಿಂಗ್ ಗಾಯಕ್ಕೆ ತುತ್ತಾದ ಬೆನ್ನಲ್ಲೇ ಟೀಮ್ ಇಂಡಿಯಾದ ಇನ್ನೊಬ್ಬ ವೇಗಿ ಆಕಾಶ್ ದೀಪ್ ಕೂಡ ಇಂಜುರಿಗೆ ಒಳಗಾಗಿರುವ ಆಘಾತಕಾರಿ ವಿಷ್ಯ ಹೊರ ಬಿದ್ದಿದೆ.
ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ನಡೆಯುವ 4ನೇ ಟೆಸ್ಟ್ ಪಂದ್ಯಕ್ಕೂ ಮೊದಲೇ ಭಾರತ ತಂಡದಲ್ಲಿ ಇಂಜುರಿ ತಾಂಡವಾಡುತ್ತಿದೆ. ಟೀಮ್ ಇಂಡಿಯಾದ ವೇಗಿ ಆಕಾಶ ದೀಪ್ ಅವರು ತೊಡೆಸಂದು (Groin Nniggle) ಗಾಯಕ್ಕೆ ಒಳಗಾಗಿರುವುದು ಗಿಲ್ ಸೇನೆಗೆ ಆತಂಕ ಮೂಡಿಸಿದೆ. ಏಕೆಂದರೆ ಸರಣಿಯಲ್ಲಿ ಸಮಬಲ ಕಾಪಾಡಿಕೊಳ್ಳಬೇಕು ಎಂದರೆ ಬೌಲರ್ಗಳು ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ತಂಡದಲ್ಲಿ ಇಂಜುರಿ ಆಗುವುದು ಸಾಮಾನ್ಯವಾಗಿರುವುದು ತಲೆನೋವು ಹೆಚ್ಚಿಸಿದೆ.
ಇದನ್ನೂ ಓದಿ: ಯಂಗ್ ಪ್ಲೇಯರ್ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್.. 24 ವರ್ಷದ ಯುವ ಆಟಗಾರನಿಗೆ ಒಲಿದ ಅವಕಾಶ
ಮೊದಲು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಇವರಾದ ಮೇಲೆ ಅರ್ಷ್ದೀಪ್ ಸಿಂಗ್ ಅವರು ಎಡಗೈನ ಗಾಯಕ್ಕೆ ತುತ್ತಾಗಿದ್ದರು. ಇವೆರಡೇ ಎನ್ನುವಷ್ಟರಲ್ಲಿ ಇದೀಗ ಆಕಾಶ್ ದೀಪ್ ಕೂಡ ತೊಡೆಸಂದು ಗಾಯದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಇನ್ನು ಅರ್ಷ್ ದೀಪ್ ಬದಲಿಗೆ ತಂಡಕ್ಕೆ ಹರಿಯಾಣದ ಯಂಗ್ ಬೌಲರ್ ಅನ್ಶುಲ್ ಕಾಂಬೋಜ್ ಅವರು ಎಂಟ್ರಿ ಕೊಡಲಿದ್ದಾರೆ.
ತಂಡದಲ್ಲಿ ಆಗುತ್ತಿರುವ ಈ ಎಲ್ಲ ಬೆಳವಣಿಗೆಗಳು ಶುಭ್ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಎಂದೇ ಹೇಳಬಹುದು. ಏಕೆಂದರೆ ಅರ್ಷ್ದೀಪ್ ಸಿಂಗ್ ಹಾಗೂ ಆಕಾಶ್ ದೀಪ್ 4ನೇ ಟೆಸ್ಟ್ ಪಂದ್ಯ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇನ್ನು 4ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಜುಲೈ 23 ರಿಂದ ಆರಂಭವಾಗಲಿದೆ. ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ