/newsfirstlive-kannada/media/post_attachments/wp-content/uploads/2025/04/KOHLI_SALT.jpg)
ಐಪಿಎಲ್ ಸೀಸನ್​​ 18ರಲ್ಲಿ ರಾಯಲ್​ ಆಟವಾಡ್ತಿದ್ದ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿದ್ದಾಗಲೇ ಐಪಿಎಲ್​ ಮುಂದೂಡಿಕೆಯಾಗಿತ್ತು. ಇದೀಗ ಐಪಿಎಲ್​ ಪುನಾರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಅಭಿಮಾನಿಗಳ ವಲಯದಲ್ಲಿ ಮತ್ತೆ ಜೋಶ್​ ಮರುಕಳಿಸಿದ್ದು ಆರ್​​ಸಿಬಿ ಕ್ಯಾಂಪ್​ನಿಂದ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಇಲ್ಲಿದೆ.
ಸೀಸನ್​ 18ರ ಐಪಿಎಲ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡ್ತಾ ಇದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ಲೇ ಆಫ್​ ಸ್ಟೇಜ್​ಗೆ​​​ ದಾಪುಗಾಲಿಡೋ ತವಕದಲ್ಲಿತ್ತು. ಇನ್ನೇನು ಆರ್​​ಸಿಬಿ ಅಧಿಕೃತವಾಗಿ ಕ್ವಾಲಿಫೈ ಆಯಿತು ಅನ್ನೋವಾಗಲೇ, ಭಾರತ-ಪಾಕ್​ ನಡುವೆ ಉಂಟಾದ ಉದ್ವಿಗ್ನತೆಯಿಂದಾಗಿ ಐಪಿಎಲ್​ ಟೂರ್ನಿ ಮುಂದೂಡಿಕೆ ಆಗಿತ್ತು.
ಇದೀಗ ಐಪಿಎಲ್​ ಪುನಾರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಅಭಿಮಾನಿಗಳ ವಲಯದಲ್ಲಿ ಮತ್ತೆ ಜೋಶ್​​ ಬಂದಿದೆ. ಆದ್ರೆ, ಈ ಬಗ್ಗೆ ಆರ್​​ಸಿಬಿ ಕ್ಯಾಂಪ್​ನಲ್ಲಿ ಖುಷಿಯ ಸುದ್ದಿ ಹರಿದಾಡುತ್ತಿದೆ. ಗಾಯಕ್ಕೆ ತುತ್ತಾಗಿದ್ದ ನಾಯಕ ಹಾಗೂ ಜ್ವರದಿಂದ ಬಳಲುತ್ತಿದ್ದ ಸ್ಟಾರ್ ಬ್ಯಾಟರ್ ಹಿಂದಿರುಗುವುದು ಕನ್​ಫರ್ಮ್ ಆಗಿದೆ.
ರಜತ್​ ಬಹುತೇಕ ಫಿಟ್​​.!
ಕ್ಯಾಪ್ಟನ್​ ರಜತ್​ ಪಾಟಿದಾರ್​​ ಚೆನ್ನೈ ಸೂಪರ್​ ಕಿಂಗ್ಸ್​​ ವಿರುದ್ಧದ ಪಂದ್ಯದ ವೇಳೆ ಕೈ ಬೆರಳಿನ ಇಂಜುರಿಗೆ ತುತ್ತಾಗಿದ್ದರು. ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ ಗಾಯದ ನೋವಿನಿಂದ ಪಾಟಿದಾರ್​ ಬಳಲಿದ್ರು. ಹೀಗಾಗಿ ಆ ಪಂದ್ಯದಲ್ಲಿ ಜಿತೇಶ್​ ಶರ್ಮಾ ಆರ್​​ಸಿಬಿ ತಂಡವನ್ನ ಮುನ್ನಡೆಸೋಕೆ ರೆಡಿಯಾಗಿದ್ದರು. ಅಷ್ಟರಲ್ಲಿ ಟೂರ್ನಿ ಮುಂದೂಡಿಕೆಯಾಗಿತ್ತು. ಇದೀಗ ಪಾಟಿದಾರ್​ ಬಹುತೇಕ ಫಿಟ್​ ಆಗಿದ್ದಾರೆ ಎನ್ನಲಾಗಿದ್ದು, ರಿಸ್ಟಾರ್ಟ್​ ಆಗೋ ವೇಳೆಗೆ ಆಯ್ಕೆಗೆ ಲಭ್ಯವಿರುತ್ತಾರೆ ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2025/04/SALT_RAJATH.jpg)
ಬ್ಯಾಟಿಂಗ್​​ಗೆ ಬಂತು ಬಲ.!
ಅಗ್ರೆಸ್ಸಿವ್​ ಆಟದಿಂದ ಎದುರಾಳಿಗಳನ್ನ ಚಿಂದಿ ಉಡಾಯಿಸಿದ್ದ ಫಿಲ್​ ಸಾಲ್ಟ್​​ ಆರ್​​ಸಿಬಿಗೆ ಈ ಸೀಸನ್​ನಲ್ಲಿ​​ ಸಾಲಿಡ್​ ಓಪನಿಂಗ್​ ನೀಡ್ತಾ ಇದ್ದರು. ಕೊಹ್ಲಿ -ಸಾಲ್ಟ್​​ ಜೋಡಿಯ ಕರಾಮತ್ತಿಗೆ ಎದುರಾಳಿಗಳು ಥಂಡಾ ಹೊಡೆದ್ರೆ, ಫ್ಯಾನ್ಸ್​​ ಉಘೇ ಉಘೇ ಅಂತಿದ್ರು. ಆದ್ರೆ, ವೈರಲ್​ ಫೀವರ್​​ನಿಂದ ಬಳಲಿದ್ದ ಫಿಲ್​ ಸಾಲ್ಟ್​ ಕಳೆದ 2 ಪಂದ್ಯಗಳಿಂದ ಹೊರಗುಳಿದಿದ್ದರು. ಲಕ್ನೋ ಎದುರು ಆಡೋದು ಅನುಮಾನವಾಗಿತ್ತು. ಇದೀಗ ಸಾಲ್ಟ್​ ಚೇತರಿಸಿಕೊಂಡಿದ್ದು, ತಂಡಕ್ಕೆ ಬಲ ಬಂದಿದೆ.
ರಾಜ ರಜತ್​ ಪಾಟಿದಾರ್​, ಫಿಲ್​ ಸಾಲ್ಟ್​​ ಫಿಟ್​ ಆಗಿರೋದು ರಾಯಲ್ ಚಾಲೆಂಜರ್ಸ್ ತಂಡದ ಬಲ ಹೆಚ್ಚಿಸಿದೆ. ನಿಜಕ್ಕೂ ಇದು ಅಭಿಮಾನಿಗಳ ವಲಯ ಸಂಭ್ರಮಿಸೋ ವಿಚಾರ. ಐಪಿಎಲ್​ನಲ್ಲಿ ಫುಲ್ ಕಾನ್ಫೆಡೆನ್ಸಿಯಾಗಿ ಆಡುತ್ತಿರುವ ಆರ್​ಸಿಬಿ ತಂಡ ಈ ಸಲ ಟ್ರೋಫಿ ಗೆಲ್ಲುವ ಪೇವರಿಟ್ ಟೀಮ್ ಎನಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us