/newsfirstlive-kannada/media/post_attachments/wp-content/uploads/2025/07/RISHABH_PANT.jpg)
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಅಂತಿಮ ಟೆಸ್ಟ್ ಪಂದ್ಯ ಜುಲೈ 31 ರಿಂದ ಆರಂಭವಾಗಲಿದೆ. ಶುಭ್ಮನ್ ಗಿಲ್ ನೇತೃತ್ವದ ತಂಡ 5ನೇ ಪಂದ್ಯವನ್ನ ಗೆಲ್ಲಲೇಬೇಕಾದ ಅನಿವಾರ್ಯಕ್ಕಿ ಸಿಲುಕಿದೆ. ಈಗಾಗಲೇ ಟೀಮ್ ಇಂಡಿಯಾ ಲಂಡನ್ ತಲುಪಿದ್ದು ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ಇಂಜುರಿಗೆ ಒಳಗಾಗಿದ್ದ ರಿಷಭ್ ಪಂತ್ ಗಾಯವಾದ ಮೂರೂ-ನಾಲ್ಕು ದಿನಗಳ ಬಳಿಕ ಕಾಲಿಗೆ ಪ್ಲಾಸ್ಟರ್ ಮಾಡಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ ಕಾಲಿಗೆ ವೈದ್ಯರಿಂದ ಪ್ಲಾಸ್ಟರ್ ಮಾಡಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಪಂತ್ ಅವರ ಕಾಲಿನ ಬೆರಳಿನ ಇಂಜುರಿಗೆ ತುತ್ತಾಗಿದ್ದರು. ಸ್ಕ್ಯಾನ್ ರಿಪೋರ್ಟ್ನಲ್ಲಿ ಮೂಳೆ ಮುರಿದಿದೆ ಎಂದು ತಿಳಿದು ಬಂದರೂ, ಪ್ಲಾಸ್ಟರ್ ಮಾಡಿಸಿಕೊಳ್ಳದೇ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದರು.
ಇದನ್ನೂ ಓದಿ:ಶಾರುಕ್ ಖಾನ್ ಜತೆ ಮಾಡಿದ್ದು ಒಂದೇ ಒಂದು ಸಿನಿಮಾ.. ಈಗ 45,000 ಕೋಟಿ ರೂಪಾಯಿ ಒಡತಿ ಈ ಹೀರೋಯಿನ್!
ಇಷ್ಟೇ ಅಲ್ಲದೇ 4ನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲೂ ಅಗತ್ಯ ಬಿದ್ದರೆ ತಂಡಕ್ಕಾಗಿ ಬ್ಯಾಟಿಂಗ್ ಮಾಡಬೇಕೆಂಬ ಕಾರಣದಿಂದ ಪಂತ್ ಕಾಲಿಗೆ ಪ್ಲಾಸ್ಟರ್ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಮೂರೂ-ನಾಲ್ಕು ದಿನಗಳ ಕಾಲ ನೋವಲ್ಲೇ ಇದ್ದರು. ಪಂದ್ಯ ಅಂತ್ಯವಾದ ಬಳಿಕ ಪ್ಲಾಸ್ಟರ್ ರಿಷಭ್ ಪಂತ್ ಕಾಲಿಗೆ ಪ್ಲಾಸ್ಟರ್ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಶುಭ್ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಲಂಡನ್ ತಲುಪಿದೆ. ಮ್ಯಾಂಚೆಸ್ಟರ್ನಿಂದ ಲಂಡನ್ಗೆ ರೈಲಿನಲ್ಲಿ ಭಾರತದ ಆಟಗಾರರು ಪ್ರಯಾಣಿಸಿದ್ದು ವಿಶೇಷ ಅನಿಸಿತು. ಇಂದಿನಿಂದ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಲಿದೆ. ಜುಲೈ 31 ರಿಂದ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಸರಣಿ ಸಮಬಲ ಸಾಧಿಸಲು ಟೀಮ್ ಇಂಡಿಯಾ ಗೆಲ್ಲಲೇಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ