/newsfirstlive-kannada/media/post_attachments/wp-content/uploads/2025/02/RISHABH_PANT.jpg)
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಇನ್ನೇನು ಫೆಬ್ರುವರಿ 19 ರಂದು ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಎಲ್ಲಾ 8 ತಂಡಗಳು ಅಭ್ಯಾಸದಲ್ಲಿ ತೊಡಗಿಕೊಂಡಿದ್ದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿವೆ. ಅದರಂತೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾದ ಆಟಗಾರರು ಕೂಡ ದುಬೈನ ಸ್ಟೇಡಿಯಂನಲ್ಲಿ ಭರ್ಜರಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಆದರೆ ಈ ವೇಳೆ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯಕ್ಕೆ ಒಳಗಾಗಿರುವುದು ತಿಳಿದು ಬಂದಿದೆ.
ರಿಷಬ್ ಪಂತ್ ಭಾರತದ ಭರವಸೆಯ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್. ಸದ್ಯ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ತಂಡದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಬಳಿಕ ವಿಕೆಟ್ ಕೀಪರ್ ಆಗಿ ಎರಡನೇಯವರು ಆಗಿ ಸ್ಥಾನ ಪಡೆದಿದ್ದಾರೆ. ಈಗಾಗಲೇ ದುಬೈ ತಲುಪಿರುವ ರೋಹಿತ್ ಶರ್ಮಾ ಬಳಗ ಅಲ್ಲಿನ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುವಲ್ಲಿ ಮಗ್ನವಾಗಿದೆ. ಅಭ್ಯಾಸ ಮಾಡುವಾಗ ರಿಷಬ್ ಪಂತ್ ಗಾಯಗೊಂಡು ನೆಲಕ್ಕೆ ಉರುಳಿ, ಒದ್ದಾಡಿದ್ದಾರೆ.
ಇದನ್ನೂ ಓದಿ:ಬೆಕ್ಕು ಮಾಡಿದ ಕಿತಾಪತಿಗೆ 2 ದಿನ ತಡವಾಗಿ ಟೇಕ್-ಆಫ್ ಆದ ವಿಮಾನ..!
ವರದಿಗಳ ಪ್ರಕಾರ ಮೈದಾನದಲ್ಲಿ ಅಭ್ಯಾಸ ಮಾಡುವಾಗ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ರಿಷಬ್ ಪಂತ್ ಪಕ್ಕದಲ್ಲೇ ನಿಂತಿದ್ದರು. ಆದರೆ ಬಾಲ್ ಬಂದ ತಕ್ಷಣ ಪಾಂಡ್ಯ ಜೋರಾಗಿ ಬ್ಯಾಟ್ ಬೀಸಿದ್ದಾರೆ. ಆಗ ಬಾಲ್ ನೇರವಾಗಿ ಹೋಗಿ ರಿಷಬ್ ಪಂತ್ ಎಡ ಮೊಣಕಾಲಿಗೆ ಬಿದ್ದಿದೆ. ಇದರಿಂದ ತಕ್ಷಣ ನೆಲಕ್ಕೆ ಬಿದ್ದ ಪಂತ್ ನೋವಿನಿಂದ ಮೈದಾನದಲ್ಲೇ ಒರಳಾಡಿದ್ದಾರೆ.
ಮಾಹಿತಿ ತಿಳಿದು ಕೂಡಲೇ ವೈದ್ಯಕೀಯ ತಂಡ ಬಂದು ಪಂತ್ ಅವರ ಎಡ ಮೊಣಕಾಲಿಗೆ ಐಸ್ ಪ್ಯಾಕ್ ಇಟ್ಟಿದ್ದಾರೆ. ಸದ್ಯ ಚಿಕಿತ್ಸೆಗೆಂದು ಪಂತ್ರನ್ನ ಕರೆದುಕೊಂಡು ಹೋಗಿದ್ದಾರೆ. ಮಾಹಿತಿ ಪ್ರಕಾರ ಕಾರು ಆ್ಯಕ್ಸಿಡೆಂಟ್ನಲ್ಲಿ ಗಾಯಗೊಂಡಿದ್ದ ಪಂತ್ ಕಾಲಿಗೆ ಈಗ ಬಾಲ್ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ವೈದ್ಯರು ಅಧಿಕೃತವಾಗಿ ವರದಿ ನೀಡಿದ ಬಳಿಕ ಮುಂದಿ ಪಂದ್ಯ ಪಂತ್ ಅವರು ಆಡುತ್ತಾರೋ, ಇಲ್ವೋ ಎನ್ನುವುದು ಗೊತ್ತಾಗಲಿದೆ. ಇನ್ನು ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಬಾಂಗ್ಲಾದ ವಿರುದ್ಧ ಫೆಬ್ರುವರಿ 20 ರಂದು ಮಧ್ಯಾಹ್ನ 2:30ಕ್ಕೆ ಆಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ