ಭಾರತದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಪಡೆದ 5 ಹಳ್ಳಿಗಳು ಇವು! ಇದನ್ನು ಸಾಧಿಸಿದ್ದು ಹೇಗೆ?

author-image
Gopal Kulkarni
Updated On
ಭಾರತದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆ ಪಡೆದ 5 ಹಳ್ಳಿಗಳು ಇವು! ಇದನ್ನು ಸಾಧಿಸಿದ್ದು ಹೇಗೆ?
Advertisment
  • ಇವು ಭಾರತದ ಅತ್ಯಂತ ಸ್ವಚ್ಛ ಗ್ರಾಮಗಳು ಎಂಬ ಹೆಗ್ಗಳಿಕೆ ಪಡೆದಿವೆ ಗೊತ್ತಾ?
  • ಇಂತಹದೊಂದು ಸಾಧನೆ ದೇಶದ ಕೇವಲ 5 ಹಳ್ಳಿಗಳಿಗೆ ಸಾಧ್ಯವಾಗಿದ್ದು ಹೇಗೆ ?
  • 5 ಗ್ರಾಮಗಳ ಸ್ವಚ್ಛತೆಯ ನೀತಿ ಮತ್ತು ಪಾಲನೆ ಉಳಿದ ಗ್ರಾಮಗಳಿಗೆ ಮಾದರಿ

ಸ್ವಚ್ಛ ಮತ್ತು ಹಸಿರು ಪ್ರದೇಶ ಎಂಬ ಶಬ್ದ ನಮ್ಮ ಕಿವಿಗೆ ಬೀಳುತ್ತಿದ್ದಂತೆ ನಮ್ಮ ಮನಸಿನಲ್ಲಿ ಬರುವ ಮೊದಲ ಯೋಚನೆ ಯಾವುದು? ಅತ್ಯಾಧುನಿಕ ತ್ಯಾಜ್ಯ ನಿರ್ವಹಣೆಯ ತಂತ್ರಜ್ಞಾನ, ಹಸಿರಿನಿಂದಲೇ ತುಂಬಿರುವಂತಹ ಉದ್ಯಾವನಗಳು. ಹೀಗೆ ಹಲವು ವಿಚಾರಗಳು ತಲೆಯಲ್ಲಿ ಬರುತ್ತವೆ. ಅದೃಷ್ಟವಶಾತ್ ಅಥವಾ ಆಶ್ಚರ್ಯಕರ ರೀತಿಯಲ್ಲಿ ಭಾರತದಲ್ಲಿ ಕೆಲವೊಂದು ಸಿಟಿಗಳು ಈ ಒಂದು ಹೆಗ್ಗಳಿಕೆಯನ್ನು ಗಳಿಸಿವೆ. ಆದ್ರೆ ಎಲ್ಲಾ ಸಿಟಿಗಳು ಅಲ್ಲ. ಮೈಸೂರಿನಂತಹ ಒಂದಿಷ್ಟು ನಗರಗಳನ್ನು ಹೊರತುಪಡಿಸಿದರೆ ಭಾರತದ ಬಹುತೇಕ ಮಹಾನಗರಳು ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತೆಯನ್ನು ಕಾಪಾಡಲು ಹೆಣಗಾಡುತ್ತಿವೆ. ಇಂತಹ ಸಮಯದಲ್ಲಿ ದೇಶದ ಒಂದು ಅತ್ಯಂತ ಪುಟ್ಟ ಹಳ್ಳಿಗಳ ಜನರು ಸೇರಿಕೊಂಡು ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು. ನಮ್ಮ ಪ್ರದೇಶವನ್ನು ಪರಿಶುದ್ಧವಾಗಿ ಹೇಗೆ ಇಟ್ಟುಕೊಳ್ಳಬೇಕು ಎಂಬುದಕ್ಕೆ ದೇಶಕ್ಕೆ ತೋರಿಸಿಕೊಟ್ಟಿವೆ.

ಇದನ್ನೂ ಓದಿ:ಭಾರತದಲ್ಲಿ ಮೊಟ್ಟ ಮೊದಲ ಟ್ರೈನ್ ಹೈಜಾಕ್ ನಡೆದಿದ್ದು ಯಾವಾಗ? ಮಾಡಿದ್ದು ಯಾರು? ಹೇಗಿತ್ತು ಆಪರೇಷನ್?

ಈ ಗ್ರಾಮಗಳಲ್ಲಿ ಪ್ಲಾಸ್ಟಿಕ್​ನ ತುಣುಕು ಕೂಡ ಪ್ರವೇಶ ಪಡೆಯುವುದಿಲ್ಲ. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯ ಇಲ್ಲಿ ದಿನನಿತ್ಯ ನಡೆಯುತ್ತದೆ. ಹೀಗಂತ ಇವರಿಗೆ ಯಾರು ಕೂಡ ಹೇಳಿಕೊಟ್ಟಿಲ್ಲ. ಆದ್ರೆ ಅವರು ಈ ರೀತಿ ಇರುವುದರಿಂದ ಗ್ರಾಮದ ವಾತಾವರಣವೂ ಸರಿಯಾಗಿರುತ್ತದೆ. ಮತ್ತು ಸ್ವಚ್ಛತೆಯನ್ನು ಕಾಪಾಡಿದಂತೆಯೂ ಆಗುತ್ತದೆ ಎಂಬುದನ್ನು ತೋರಿಸಿಕೊಟ್ಟಿವೆ. ಅಂತಹ ಹಳ್ಳಿಗಳು ಯಾವುವು ಎಂಬುದನ್ನು ನೋಡುವುದಾದ್ರೆ

publive-image

1. ಮೇಘಾಲಯದ ಮಾವ್ಲಿನ್ನಾಂಗ್: ಈ ಒಂದು ಗ್ರಾಮ ಮೇಘಾಲಯ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಬರುತ್ತದೆ. ಮಾವ್ಲಿನ್ನಾಂಗ್ ಎಂಬ ಹಳ್ಳಿಯೂ ಏಷಿಯಾದಲ್ಲಿಯೇ ಅತ್ಯಂತ ಸ್ವಚ್ಛವಾದ ಹಳ್ಳಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಕೇವಲ ಶುದ್ಧ ಬೀದಿಗಳು ಹಾಗೂ ಶುದ್ಧ ನೀರಿನಿಂದಲೇ ಮಾತ್ರ ಈ ಗ್ರಾಮ ಜನಪ್ರಿಯತೆಯನ್ನು ಪಡೆದಿಲ್ಲ. ಸಾಕ್ಷರತೆಯ ವಿಚಾರದಲ್ಲಿಯೂ ಕೂಡ ಈ ಗ್ರಾಮ ಹೆಮ್ಮೆಯೆನಿಸುವ ಕೆಲಸವನ್ನು ಮಾಡಿದೆ. ಈ ಗ್ರಾಮದಲ್ಲಿ ಸಾಕ್ಷರತೆಯ ಸಂಖ್ಯೆ ಶೇಕಡಾ 93.71 ರಷ್ಟಿದೆ. ಇದಕ್ಕೆ ಕಾರಣ ಈ ಗ್ರಾಮದ ಜನರು ತಮಗೆ ತಾವೆ ಹಾಕಿಕೊಂಡ ಕೆಲವು ನಿಯಮಗಳು. ಈ ಗ್ರಾಮದಲ್ಲಿ ನಿಮಗೆ ಹುಡುಕಿದರೂ ಒಂದ ತುಣುಕು ಪ್ಲಾಸ್ಟಿಕ್ ಸಿಗುವುದಿಲ್ಲ. ಪ್ಲಾಸ್ಟಿಕ್​ನ್ನು ತ್ಯಜಿಸುವುದರ ಜೊತೆ ಕಸ ಸುಡುವುದು ಕೂಡ ಇಲ್ಲಿ ನಿಷಿದ್ಧ. ಇನ್ನು ಗ್ರಾಮದ ಎಲ್ಲಾ ಮನೆಯವರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಜಾಗವನ್ನು ನಿತ್ಯವೂ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಸ್ವಯಂಪ್ರೇರಿತರಾಗಿ ಮಾಡುತ್ತಾರೆ. ಇನ್ನು ಕಟ್ಟಡ ನಿರ್ಮಾಣದಂತಹ ಕೆಲಸಗಳಿಗೆ ಸ್ಥಳೀಯ ವಸ್ತುಗಳನ್ನೇ ಬಳಸಿ ಗ್ರಾಮದಲ್ಲಿ ಕಾರ್ಬನ್​​ನ ಹೆಜ್ಜೆ ಮೂಡದಂತೆ ನೋಡಿಕೊಳ್ಳುತ್ತಾರೆ. ಮನೆಯಲ್ಲಿನ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಗ್ರಾಮಸ್ಥರು ಆದ್ಯತೆ ನೀಡುತ್ತಾರೆ.

publive-image

2. ಮಧ್ಯಪ್ರದೇಶದ ಬಘುವಾರ: ಮಧ್ಯಪ್ರದೇಶದ ಹೃದಯದ ಭಾಗದಲ್ಲಿರುವ ನರ್ಸಿಂಗಪುರ ಜಿಲ್ಲೆಯಲ್ಲಿರುವ ಬಘುವಾರ್ ಎಂಬ ಗ್ರಾಮವೂ ಕೂಡ ಒಂದು ಹಳ್ಳಿ ಎಷ್ಟು ಶುದ್ಧವಾಗಿ ಹಾಗೂ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ತಮ್ಮ ಗ್ರಾಮದ ಸ್ವಚ್ಛತೆಯ ಕಾರ್ಯವನ್ನು ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ತಮ್ಮ ಜವಾಬ್ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಕೇವಲ ಸ್ವಚ್ಛತೆಯ ಬಗ್ಗೆ ಇಲ್ಲಿಯ ಜನರು ಮಾತನಾಡುವುದಿಲ್ಲ. ನಿತ್ಯವೂ ಅದನ್ನು ಬದುಕುತ್ತಾರೆ. ಅವರು ಗ್ರಾಮದ ಎಲ್ಲಾ ಓಣಿಗಳನ್ನು ಸ್ವಯಂ ಪ್ರೇರಿತರಾಗಿ ನಿತ್ಯ ಗುಡಿಸುತ್ತಾರೆ. ಗ್ರಾಮದ ಎಲ್ಲ ಭಾಗಗಳು ಸ್ವಚ್ಛವಾಗಿವೆಯೋ ಇಲ್ಲವೋ ಎಂಬುದರ ಬಗ್ಗೆ ಖಚಿತತೆ ಪಡೆದುಕೊಳ್ಳುತ್ತಾರೆ. ಈ ಗ್ರಾಮವೂ ಅತ್ಯುನ್ನತವಾದ ಅಂಡರ್​ಗ್ರೌಂಡ್ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ಇವರು ಸಾಧಿಸಲು ಸಾಧ್ಯವಾಗಿದ್ದು. ಗ್ರಾಮದ ಪ್ರತಿ ಮನೆಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸ್ವಚ್ಛತೆಯ ವಿಚಾರದಲ್ಲಿ ಇಡೀ ಗ್ರಾಮವೇ ಒಗ್ಗಟ್ಟಾಗಿ ನಿಲ್ಲುತ್ತದೆ. ಅದು ಮಾತ್ರವಲ್ಲ ನೀರಿನ ನಿರ್ವಹಣೆಯನ್ನು ಅತ್ಯಂತ ಸಮರ್ಥನೀಯವಾಗಿ ನಿರ್ವಹಿಸಲಾಗುತ್ತದೆ

publive-image

3. ನಾಗಾಲ್ಯಾಂಡ್​ನ ಶಿಶುನು ಗ್ರಾಮ: ನಾಗಾಲ್ಯಾಂಡ್​ನಲ್ಲಿರುವ ಶಿಶುನ ಎನ್ನು ಗ್ರಾಮ ಒಂದು ಸಮುದಾಯ ಒಂದು ದೊಡ್ಡ ಬದಲಾವಣೆಯನ್ನು ಹೇಗೆ ಮಾಡಲು ಸಾಧ್ಯ ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದೆ. ಈ ಗ್ರಾಮ ಕೇವಲ ಸ್ವಚ್ಛತೆಗೆ ಮಾತ್ರವಲ್ಲ. ತಂಬಾಕು ಮತ್ತು ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಯನ್ನೂ ಕೂಡ ಈ ಗ್ರಾಮ ಪಡೆದಿದೆ. ಈ ಗ್ರಾಮದಲ್ಲಿ ತಂಬಾಕು ಉತ್ಪನ್ನಗಳಿಗೆ ಪ್ರವೇಶವಿಲ್ಲ. ಪ್ಲಾಸ್ಟಿಕ್​​ಗೂ ಕೂಡ ಪ್ರವೇಶವಿಲ್ಲ. ಈ ಒಂದು ಕಾರ್ಯವನ್ನು ಸಾಧಿಸಲು ಅವರಿಗೆ ತುಂಬಾ ಸಹಾಯಕವಾಗಿದ್ದು ಮನರೇಗಾದಿಂದ ಬಂದಂತಹ ನಿಧಿ ಎಂದು ಹೇಳಲಾಗುತ್ತದೆ.

publive-image

4. ಕೇರಳದ ತುರುಥಿಕ್ಕರ್​: ಎರ್ನಾಕುಲಂ ಜಿಲ್ಲೆಯಲ್ಲಿರುವ ಈ ತುರುಥಿಕ್ಕರ್ ಎಂಬ ಹಳ್ಳಿ ರಾಜ್ಯದ ಮೊದಲ ಹಸಿರು ಗ್ರಾಮ ಎಂಬ ಪ್ರಶಸ್ತಿಯನ್ನು ಪಡೆದಿದೆ. ಇದೇ ರಾತ್ರೋ ರಾತ್ರಿಯಲ್ಲಿ ನಡೆದ ಒಂದು ಅದ್ಭತವಲ್ಲ ಇದರ ಹಿಂದೆ ದೊಡ್ಡ ಶ್ರಮ ಇದೆ. ಊರ್ಜಾ ನಿರ್ಮಲ ಹರಿಥಾ ಗ್ರಾಮ ಯೋಜನೆಯನ್ನು ಸಮರ್ಥವಾಗಿ ಅಳವಡಿಸಿಕೊಂಡು ಈ ಗ್ರಾಮ ಹಂತ ಹಂತವಾಗಿ ಭಾರತದ ನಿರ್ಮಲ ಗ್ರಾಮಗಳಲ್ಲಿ ಒಂದು ಎಂಬ ಹೆಸರನ್ನು ಪಡೆದಿದೆ. ಜನರಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸುವ ಮೂಲಕ. ಸರಿಯಾಗಿ ತ್ಯಾಜ್ಯನಿರ್ವಹಣೆ ಹಾಗೂ ಗ್ರಾಮದ ಜನರ ಒಗ್ಗಟ್ಟು ಮತ್ತು ಬಲಿಷ್ಠವಾದ ಬೆಂಬಲದ ವ್ಯವಸ್ಥೆಯಿಂದ ಇದು ಸಾಧ್ಯವಾಗಿದೆ.

publive-image

5. ಅಸ್ಸಾಂನ ಮಜುಲಿ: ಮಜುಲಿ, ಅಸ್ಸಾಂನ ಅತ್ಯಂದ ಸುಂದರವಾದ ದ್ವೀಪ. ಜೊರ್ಹಾತ್​ ಜಿಲ್ಲೆಯಲ್ಲಿರುವ ಈ ಗ್ರಾಮ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ತಾನು ಅಳವಡಿಸಿಕೊಂಡಿರುವ ಸ್ವಚ್ಛ ಗ್ರಾಮ ಎಂಬ ಸಂಕಲ್ಪಕ್ಕೂ ಕೂಡ ಹೆಸರಾಗಿದೆ. ಇಲ್ಲಿ ಹೆಚ್ಚು ಮನೆಗಳನ್ನು ಬಿದಿರನಿಂದಲೇ ಕಟ್ಟಲಾಗಿದೆ. ಇಡೀ ಸಮುದಾಯವೇ ಗ್ರಾಮದ ಸ್ವಚ್ಛತೆಗೆ ಕೈ ಜೋಡಿಸುತ್ತದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಹೇಗೆ ಎಂಬುದನ್ನು ಈ ಗ್ರಾಮದ ಜನರು ಬದುಕಿ ತೋರಿಸಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment