/newsfirstlive-kannada/media/post_attachments/wp-content/uploads/2025/04/Siraj-5.jpg)
ಟೀಮ್ ಇಂಡಿಯಾಗೆ ಬೇಡವಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಬೇಡವಾದರು. ಮಾನಸಿಕವಾಗಿ ಕುಗ್ಗಿದ್ದ ವೇಗಿ ಮೊಹಮ್ಮದ್ ಸಿರಾಜ್, ಐಪಿಎಲ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಸಿರಾಜ್ ಎಸೆಯೋ ಒಂದೊಂದು ಸ್ಪೆಲ್, ಬೆಂಕಿ ಚೆಂಡಿನಂತಿದೆ. ಗುಜರಾತ್ ಟೈಟನ್ಸ್ ವೇಗಿ ಕಮ್ಬ್ಯಾಕ್ ಹಿಂದಿರೋ ರೋಚಕ ಸ್ಟೋರಿ ಇದು.
ಐಪಿಎಲ್ನಲ್ಲಿ ಸಖತ್ ಸೌಂಡ್ ಮಾಡ್ತಿರುವ ಸಿರಾಜ್ ತನ್ನ ಸೂಪರ್ ಸ್ಪೆಲ್ಗಳಿಂದ ಗುಜರಾತ್ ತಂಡದ ಬಲ ಹೆಚ್ಚಿಸಿದ್ದಾರೆ. ಸಿರಾಜ್ ಮಿಂಚಿನ ದಾಳಿ ನಡೆಸಿರೋ ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಭರ್ಜರಿಯಾಗಿ ಗೆದ್ದು ಬೀಗಿದೆ. ಸದ್ಯ ಟೈಟನ್ಸ್ ತಂಡದ ಲೀಡರ್ ಆಫ್ ದ ಪೇಸ್ ಅಟ್ಯಾಕ್ ಎನಿಸಿಕೊಂಡಿರೋ ಸಿರಾಜ್ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ಐಪಿಎಲ್ ಸೀಸನ್-18ರಲ್ಲಿ ಸಿರಾಜ್ರ ಟಾಪ್ 3 ಸ್ಪೆಲ್ಸ್ ನೋಡಲೇಬೇಕು.
ಸಿರಾಜ್ ಎಕ್ಸ್ಪ್ರೆಸ್ ದಾಳಿಗೆ ಹೈದ್ರಾಬಾದ್ ಉಡೀಸ್
ಹೋಂ ಗ್ರೌಂಡ್ ಹೈದ್ರಾಬಾದ್ನಲ್ಲಿ ಸಿರಾಜ್, ಸನ್ರೈಸರ್ಸ್ ತಂಡಕ್ಕೆ ವಿಲನ್ ಆಗಿ ಕಾಡಿದ್ರು. ತನ್ನ ಮೊದಲೆರಡು ಓವರ್ಗಳಲ್ಲಿ ಸಿರಾಜ್, ಡೇಂಜರಸ್ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ವಿಕೆಟ್ ಪಡೆದು, ಎಸ್ಆರ್ಎಚ್ ತಂಡವನ್ನ ಬ್ಯಾಕ್ಫುಟ್ಗೆ ತಳ್ಳಿದ್ರು. 4 ಓವರ್ಗಳ ಸ್ಪೆಲ್ನಲ್ಲಿ ಸಿರಾಜ್, ಕೇವಲ 17 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ರು.
ಇದನ್ನೂ ಓದಿ: 9 ಸಿಕ್ಸರ್, 7 ಬೌಂಡರಿ.. ಕೇವಲ 39 ಎಸೆತದಲ್ಲಿ ಸ್ಫೋಟಕ ಶತಕ.. ಐಪಿಎಲ್ನಲ್ಲಿ ಹೊಸ ದಾಖಲೆ..!
ಬೆಂಗಳೂರಿನಲ್ಲಿ ಸಿಡಿದ ಸಿರಾಜ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ ಸಿರಾಜ್ ಸಿಡಿದೆದ್ದಿದ್ರು. ಚಿನ್ನಸ್ವಾಮಿಯಲ್ಲಿ ಸಾಲಿಡ್ ಸ್ಪೆಲ್ ಹಾಕಿದ್ದ ಸಿರಾಜ್, ಅಗ್ರೆಸಿವ್ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಮತ್ತು ಬಿಗ್ಹಿಟ್ಟರ್ ಲಿಯಾಮ್ ಲಿವಿಂಗ್ಸ್ಟೋನ್ ವಿಕೆಟ್ ಪಡೆದ್ರು. ಐಪಿಎಲ್ನಲ್ಲಿ ಇದು ಸಿರಾಜ್ರ ಸೆಕೆಂಡ್ ಬೆಸ್ಟ್ ಬೌಲಿಂಗ್ ಸ್ಪೆಲ್ ಆಗಿತ್ತು.
ಸಿರಾಜ್ ಸುನಾಮಿ, ಬೆಚ್ಚಿಬಿದ್ದ ಮುಂಬೈ!
ಅಹ್ಮದಾಬಾದ್ನಲ್ಲಿ ವೇಗಿ ಸಿರಾಜ್ ದಾಳಿಗೆ ಮುಂಬೈ ಇಂಡಿಯನ್ಸ್ ಬೆಚ್ಚಿಬಿದ್ದಿತ್ತು. ಪವರ್ ಪ್ಲೇನಲ್ಲೇ ಸಿರಾಜ್, ಮುಂಬೈ ಇಂಡಿಯನ್ಸ್ಗೆ ಬಿಗ್ ಶಾಕ್ ನೀಡಿದ್ರು. ಸಿರಾಜ್ ತನ್ನ ಫಸ್ಟ್ ಸ್ಪೆಲ್ನಲ್ಲೇ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ರಿಯಾನ್ ರಿಕಲ್ಟನ್ ವಿಕೆಟ್ ಪಡೆದಿದ್ರು. ಆ ಪಂದ್ಯದಲ್ಲಿ ಸಿರಾಜ್ ಸ್ವಲ್ಪ ದುಬಾರಿಯಾದ್ರೂ ಆರಂಭದಲ್ಲೇ ಮುಂಬೈ ಬ್ಯಾಟಿಂಗ್ ಲೈನ್ಅಪ್ನ ಡ್ಯಾಮೇಜ್ ಮಾಡಿದ್ರು.
ಇದನ್ನೂ ಓದಿ: RCB ಕ್ಯಾಪ್ಟನ್ ರಜತ್ ಪಾಟೀದಾರ್ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..!
ವಿಕೆಟ್ ಗಳಿಕೆಯಲ್ಲಿ ನಂಬರ್ 3
ಸಿರಾಜ್ ಒಳ್ಳೆ ಲೆಂಥ್ನಲ್ಲಿ ಬೌಲಿಂಗ್ ಮಾಡ್ತಿದ್ದಾರೆ. ಆಡಿರೋ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. 7.75ರ ಎಕಾನಮಿಯಲ್ಲಿ ರನ್ ನೀಡ್ತಿರೋ ಹೈದ್ರಾಬಾದ್ ಪೇಸರ್, ಮಿಚ್ಚೆಲ್ ಸ್ಟಾರ್ಕ್ ನಂತರ ಮೋಸ್ಟ್ ಸಕ್ಸಸ್ಫುಲ್ ಪೇಸರ್ ಎನಿಸಿಕೊಂಡಿದ್ದಾರೆ. ಸಿರಾಜ್ ಆಟ ಹೀಗೆ ಮುಂದುವರೆದ್ರೆ, ಗುಜರಾತ್ ಟೈಟನ್ಸ್ ಪ್ಲೇ ಆಫ್ ಎಂಟ್ರಿ, ಕಷ್ಟವೇನಲ್ಲ.
ಅನ್ಯಾಯ, ಅವಮಾನ, ಎದೆಗುಂದದ ಸಿರಾಜ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವೇಗಿ ಸಿರಾಜ್ರನ್ನು ರೀಟೈನ್ ಮಾಡಿಕೊಳ್ಳಲಿಲ್ಲ. ನಂತರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ವೇಗಿ ಸಿರಾಜ್ರನ್ನ ಕೈಬಿಡಲಾಯ್ತು. ಈ ಎರಡು ಸಂದರ್ಭಗಳು, ಸಿರಾಜ್ಗೆ ಸಿಡಿಲು ಬಡಿದಂತಾಯ್ತು. ಎಲ್ಲೋ ಒಂದು ಕಡೆ ತನಗೆ ಅನ್ಯಾಯ ಆಗಿದೆ ಅನ್ನೋ ಆತಂಕದ ಜೊತೆಗೆ ಎಮೋಷನಲ್ ಆಗಿದ್ದ ಸಿರಾಜ್ ಕಷ್ಟದ ದಿನಗಳಲ್ಲೂ ಎದೆಗುಂದಲಿಲ್ಲ. ಬ್ಯಾಡ್ಟೈಮ್ನಲ್ಲೂ ಟಫ್ ಮ್ಯಾನ್ ಆಗಿದ್ದ ಸಿರಾಜ್, ಇದೀಗ ತನ್ನ ಸಾಮರ್ಥ್ಯ ತೋರಿಸಿದ್ದಾರೆ.
ಸಿರಾಜ್ ರಿಯಲ್ ಫೈಟರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಐಪಿಎಲ್ನಲ್ಲಿ ಗ್ರೇಟ್ ಕಮ್ಬ್ಯಾಕ್ ಮಾಡಿರೋ ಸಿರಾಜ್ ಯುವ ಕ್ರಿಕೆಟಿಗರಿಗೆ ರೋಲ್ ಮಾಡಲ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: RCB ಕ್ಯಾಪ್ಟನ್ ರಜತ್ ಪಾಟೀದಾರ್ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್