ಇದು ವಿಶ್ವದ ಅತಿಹೆಚ್ಚು ಮಾರಾಟವಾಗುವ ಎರಡನೇ ಪರ್ಫ್ಯೂಮ್​.. ಇದರ ಹಿಂದಿದೆ ಮೊಘಲರ ನಂಟು

author-image
Gopal Kulkarni
Updated On
ಇದು ವಿಶ್ವದ ಅತಿಹೆಚ್ಚು ಮಾರಾಟವಾಗುವ ಎರಡನೇ ಪರ್ಫ್ಯೂಮ್​.. ಇದರ ಹಿಂದಿದೆ ಮೊಘಲರ ನಂಟು
Advertisment
  • ವಿಶ್ವದಲ್ಲಿಯೇ ಅತಿಹೆಚ್ಚು ಮಾರಾಟವಾಗುವ ಎರಡನೇ ಪರ್ಫ್ಯೂಮ್ ಯಾವುದು?
  • ಈ ಪರ್ಫ್ಯೂಮ್​ಗೂ ಶಾಜಹಾನ್, ಮಮ್ತಾಜ್ ಪ್ರೇಮ ಕಥೆಗೂ ಇದೆ ಒಂದು ನಂಟು
  • ಜಾಕ್ವೆಸ್ ಎಡ್ವರ್ಡ್ ಗೆರ್ಲೈನ್​ಗೆ ಈ ಪರ್ಫ್ಯೂಮ್​ ತಯಾರಿಸಲು ಅಸಲಿ ಪ್ರೇರಣೆ ಏನು?

ಮೊಘಲ ಇತಿಹಾಸವೆಂದರೆ ಕೇವಲ ಯುದ್ಧ, ಕ್ರೌರ್ಯ ಮತ್ತು ಸಾಮ್ರಾಜ್ಯ ವಿಸ್ತರಣಾದಾಹಿಗಳ ಇತಿಹಾಸವಲ್ಲ. ಅದರಾಚೆಗೂ ಅವರು ಇತಿಹಾಸದಲ್ಲಿ ಅನೇಕ ವಿಶೇಷತೆಗಳಿಗೆ ದಾಖಲಾಗಿ ಹೋಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ವಾಸ್ತುಶಿಲ್ಪ, ಪ್ರೀತಿ ಕಥೆಗಳು ಹಾಗೂ ತಿನಿಸು ಇವು ಕೂಡ ಮೊಘಲ ಸಾಮ್ರಾಜ್ಯದಲ್ಲಿ ಕಾಣಸಿಗುವು ವಿಶೇಷತೆಗಳು. ಇದರೊಂದಿಗೆ ಈ ಸಾಮ್ರಾಜ್ಯ ಜಗತ್ತಿಗೆ ಆಕರ್ಷಕ, ಮನಮೋಹಕ ಮತ್ತು ನವೀನವಾದಂತಹ ಸೆಂಟ್​ಗಳನ್ನು ಅವರು ಪರಿಚಯಿಸಿದ್ದಾರೆ.

ಇದನ್ನೂ ಓದಿ:ವಿಶ್ವದಲ್ಲಿಯೇ ಅತ್ಯಂತ ಸಂತೋಷದಿಂದ ಇರುವ ರಾಷ್ಟ್ರಗಳು ಯಾವುವು! ಭೀಕರ ದುಃಖದಲ್ಲಿ ಮುಳುಗಿರುವ ದೇಶ ಯಾವುದು?

ಅನೇಕರಿಗೆ ಗೊತ್ತೆ ಇದೆ. ಇಸ್ಲಾಂ ರಾಷ್ಟ್ರಗಳಲ್ಲಿ ಪರ್ಫ್ಯೂಮ್​​ಗಳಿಗೆ ಹೆಸರು ಮಾಡಿವೆ. ಅಲ್ಲಿ ಸಿಗುವ ವಿಶಿಷ್ಟ ಹಾಗೂ ವಿಶೇಷ ಪರ್ಫ್ಯೂಮ್ ಹಾಗೂ ಪರಿಮಳದ ಸೆಂಟ್​ಗಳು ವಿಶ್ವದಲ್ಲಿ ಬೇರೆಯೆಡೆಗೆ ಸಿಗುವುದು ಕಡಿಮೆ. ಆದ್ರೆ ಫ್ರಾನ್ಸ್​ನ ಜಾಕ್ವೆಸ್ ಎಡ್ವರ್ಡ್ ಗೆರ್ಲೈನ್ ಎಂಬುವವ ಜಗತ್ತಿನ ಅತ್ಯಂತ ಪ್ರಭಾವಿತ ಹಾಗೂ ಪ್ರಸಿದ್ಧ ಪರ್ಫ್ಯೂಮ್​ಗಳಲ್ಲಿ ಒಂದಾದ ಶಾಲಿಮಾರ್​ನ್ನು 1921ರಲ್ಲಿ ತಯಾರಿಸಬೇಕು ಎಂದು ನಿರ್ಧರಿಸಿ.ಅದರಂತೆ ಶಾಲಿಮಾರ್ ಎಂಬ ಸುಗಂಧದ್ರವ್ಯ 1925 ಲಾಂಚ್ ಆಯಿತು ಅಂದಿನಿಂದಲೂ ಇದರ ಉತ್ಪದಾನೆ ಇಂದಿಗೂ ಕೂಡ ನಿರಂತರವಾಗಿ ನಡೆಯತ್ತಲೇ ಇದೆ .publive-image

ಜಾಕ್ವೆಸ್ ಎಡ್ವರ್ಡ್ ಗೆರ್ಲೈನ್ ಈ ಒಂದು ಪರ್ಫ್ಯೂಮ್ ಸಿದ್ಧಪಡಿಸಲು ಅವನಿಗೆ ಮೂಲ ಪ್ರೇರಣೆ ಮೊಘಲ ದೊರೆ ಹಾಗೂ ತಾಜಮಹಲ್ ನಿರ್ಮಾತ ಶಾಜಹಾನ್​ ಮತ್ತು ಆತನ ಪತ್ನಿ ಮುಮ್ತಾಜ್ ನಡುವಿನ ಪ್ರೇಮ ಕಥೆ. ತನ್ನ ಪ್ರೀತಿಯ ಪತ್ನಿ ಮಮ್ತಾಜ್ ಗಾಗಿಯೇ ತಾಜ್​ ಮಹಲ್, ಶಾಲಿಮಾರ್ ಗಾರ್ಡನ್​ನನ್ನು ನಿರ್ಮಿಸಿದ್ದನು ಶಾಜಹಾನ್​. ಈ ಒಂದು ಪ್ರೇಮ ಕಥೆಯನ್ನು ಜಾಕ್ವೆಸ್ ಎಡ್ವರ್ಡ್ ಗೆರ್ಲೈನ್, ಒಮ್ಮೆ ಪ್ಯಾರಿಸ್​ಗೆ ಹೋದಾಗ ಅಲ್ಲಿಯ ಮಹಾರಾಜನಿಂದ ಕೇಳಿದ್ದ. ಅವನಿಗೆ ಶಜಹಾನ್​ ಮತ್ತು ಮುಮ್ತಾಜ್ ನಡುವಿನ ಪ್ರೀತಿಯ ಕಥೆ ತುಂಬಾ ಇಷ್ಟವಾಯಿತು. ಅಂದಿನಿಂದಲೇ ಪ್ರೇಮಿಗಳಿಗಾಗಿಯೇ ಅವರ ಗುರುತಾಗಿಯೇ ಇದಕ್ಕೆ ಇನ್ನೊಂದು ಹೋಲಿಕೆಯಾಗದಂತಹ ಪರ್ಫ್ಯೂಮ್​ವೊಂದನ್ನು ಸಿದ್ಧಗೊಳಿಸಬೇಕು ಎಂಬ ಇಚ್ಛೆಯಾಯಿತು.

ಇದನ್ನೂ ಓದಿ:ಮತ್ತೆ ಯುದ್ಧ ಶುರು.. ಗಾಜಾ ಪಟ್ಟಿಯಲ್ಲಿ ಮತ್ತೆ ತೀವ್ರ ಮಾನವೀಯ ಬಿಕ್ಕಟ್ಟು..!

publive-image

1921ರಿಂದಲೇ ಜಾಕ್ವೆಸ್ ಎಡ್ವರ್ಡ್ ಗೆರ್ಲೈನ್ ಸಿದ್ಧನಾದ ಪ್ರಾಜೆಕ್ಟ್ ಶಾಮಿಲಾರ್​​ಗಗೆ ಸಜ್ಜಾದ. ಒಂದು ಅದ್ಭುತ ಬ್ಯಾಕರಟ್ ಕ್ರಿಸ್ಟಲ್ ಬಾಟಲ್​ನ್ನು ಪರ್ಫ್ಯೂಮ್ ಸಿದ್ಧವಾಗುವುದಕ್ಕಿಂತ, ಲಾಂಚ್ ಆಗುವುದಕ್ಕಿಂತ ಮುಂಚೆಯೇ ವಿನ್ಯಾಸ ಮಾಡಿಟ್ಟಿದ್ದ. ಕೊನೆಗೆ 1925ರಲ್ಲಿ ಶಾಲಿಮಾರ್ ಪರ್ಫ್ಯೂಮ್​​ ಲಾಂಚ್ ಆಯಿತು ಸುಮಾರು ಶತಮಾನಗಳ ಕಾಲಗಳಾದರು ಅದರ ಬೇಡಿಕೆ ಇನ್ನೂ ಕುಗ್ಗಿಲ್ಲ. ಗೆರ್ಲೈನ್​ನ ಪರಂಪರೆಯ ಗುರುತಾಗಿ ಇಂದಿಗೂ ಕೂಡ ಅತ್ಯಂತ ಹೆಚ್ಚು ಬೇಡಿಕೆ ಹಾಗೂ ಮಾರಾಟವಗುವ ಪರ್ಫ್ಯೂಮ್​ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಒಂದು ಅಂದಾಜಿನ ಪ್ರಕಾರ ಈ ಪರ್ಫ್ಯೂಮ್ ಜಾಗತಿಕವಾಗಿ ಒಂದು ಗಂಟೆಯಲ್ಲಿ ಸುಮಾರು 108 ಬಾಟಲ್​ಗಳು ಮಾರಾಟವಾಗುತ್ತವಂತೆ. ಲಾ ಪೆಟೈಟ್ ರೋಬ್ ನೊಯಿರ್ ನಂತರ ಅತ್ಯಂತ ಹೆಚ್ಚು ಮಾರಾಟವಾಗುವ ಪರ್ಫ್ಯೂಮ್​​, ಈ ಶಾಲಿಮಾರ್ ಪರ್ಫ್ಯೂಮ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment