newsfirstkannada.com

ಯಂಗ್ ಟ್ಯಾಲೆಂಟೆಡ್ ಧ್ರುವ್ ಜುರೆಲ್ ಯಾರು.. ಕಾರ್ಗಿಲ್​ ಯೋಧನ ಪುತ್ರ ಕ್ರಿಕೆಟರ್ ಆಗುವುದರ ಹಿಂದಿದೆ ಅಮ್ಮನ ತ್ಯಾಗ!

Share :

Published January 14, 2024 at 1:17pm

    ಕಿಟ್ ಬೇಕೆಂದು ಕೇಳಿದಾಗ ಧ್ರುವ್​ ಜುರೆಲ್​ಗೆ ತಂದೆ ಹೇಳಿರುವುದೇನು?

    ಅಪ್ಪನ ವಿರೋಧದ ನಡುವೆ, ಅಮ್ಮನ ಪ್ರೋತ್ಸಾಹದಿಂದ ಕ್ರಿಕೆಟರ್​ ಆದ

    ಟೀಮ್ ಇಂಡಿಯಾದ ಧ್ರುವತಾರೆಯಂತೆ ಮಿಂಚಲಿ ಎನ್ನುವುದೇ ಆಶಯ

ಈತನ ಹುಟ್ಟಹಬ್ಬಕ್ಕೆ ಜಸ್ಟ್​ ಆರೇ 6 ದಿನ ಬಾಕಿಯಿತ್ತು. ಟೀಮ್ ಇಂಡಿಯಾ ಪರ ಆಡುವ ಕನಸು ಕಂಡಿದ್ದ ಈತನಿಗೆ ಇಷ್ಟು ಬೇಗ ಆಯ್ಕೆಯಾಗುವ ಕಿಂಚಿತ್ತು ನಂಬಿಕೆ ಇರಲಿಲ್ಲ. ಆದ್ರೆ, ತಡ ರಾತ್ರಿ ಕೇಳಿದ ಆ ಸುದ್ದಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಇದಕ್ಕೆ ಕಾರಣ ಆತನ ಕನಸು ನನಸಾಗಿತ್ತು.

ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್​ ಸರಣಿ ಮೊದಲ 2 ಪಂದ್ಯಗಳಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. 16 ಆಟಗಾರರ ಬಲಿಷ್ಠ ತಂಡವನ್ನೇ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ, ಕೆಲ ಆಟಗಾರರಿಗೆ ಶಾಕ್ ನೀಡಿದೆ. ಕೆಲ ಆಟಗಾರರಿಗೆ ಬುಲಾವ್ ನೀಡಿರುವ ಸೆಲೆಕ್ಷನ್ ಕಮಿಟಿ, ಬರೋಬ್ಬರಿ ಮೂವರು ವಿಕೆಟ್ ಕೀಪರ್​ಗಳಿಗೆ ಮಣೆಹಾಕಿದೆ. ಈ ಪೈಕಿ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್​​​ಗೆ ಮಣೆ ಹಾಕಿ ಅಚ್ಚರಿ ಮೂಡಿಸಿದೆ.

ಇಂಗ್ಲೆಂಡ್ ಟೆಸ್ಟ್​ ಸಿರೀಸ್​​​​​​​​​ಗೆ ಪ್ರಕಟಿಸಿರೋ ತಂಡದಲ್ಲಿ ಇಶಾನ್ ಕಿಶನ್​​ಗೆ ಸ್ಥಾನ ನೀಡದ ಸೆಲೆಕ್ಷನ್ ಕಮಿಟಿ, ಮೊದಲ ಬಾರಿಗೆ 22 ವರ್ಷದ ಧ್ರುವ್​ ಜುರೆಲ್​​ಗೆ ತಂಡದಲ್ಲಿ ಸ್ಥಾನ ನೀಡಿದೆ. ಆ ಮೂಲಕ ಯುವ ವಿಕೆಟ್ ಕೀಪರ್​​ಗೆ ಹುಟ್ಟುಹಬ್ಬದ ಗಿಫ್ಟ್​ ನೀಡಿದೆ. ಅಷ್ಟೇ ಅಲ್ಲ, ಬಾಲ್ಯದಲ್ಲಿ ಧ್ರುವ್, ಕಂಡಿದ್ದ ಕನಸು ನನಸಾಗಿದೆ. ಕಠಿಣ ಶ್ರಮಕ್ಕೆ ಬೆಲೆ ಸಿಕ್ಕಿದೆ.

ಧ್ರುವ್ ಜುರೆಲ್​. 22 ವರ್ಷದ ಯಂಗ್ ಟ್ಯಾಲೆಂಟೆಡ್ ಕ್ರಿಕೆಟರ್. ಉತ್ತರ ಪ್ರದೇಶದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ್ದ ಧ್ರುವ್​ ಜುರೆಲ್​​​​​​, ತಂದೆ ನೀಮ್ ಸಿಂಗ್ ಓರ್ವ ಯೋಧರಾಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ಹೋರಾಟ ನಡೆಸಿದ್ದವರಲ್ಲಿ ಇವರು ಒಬ್ಬರು. ಯೋಧರಾಗಿದ್ದ ಅಪ್ಪನಿಗೆ ಮಗನೂ ದೇಶ ಕಾಯಬೇಕು. ಸರ್ಕಾರಿ ನೌಕರಿ ತೆಗೆದುಕೊಳ್ಳಬೇಕು ಅನ್ನೋದೇ ಆಸೆ. ಇದಕ್ಕೆ ಕಾರಣ ಮನೆಯಲ್ಲಿನ ಕಷ್ಟ.

ಅಮ್ಮನ ಚಿನ್ನ ಮಾರಿ ಕ್ರಿಕೆಟ್ ಕಿಟ್ ಖರೀದಿ

ಅಪ್ಪ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಧ್ರುವ್​ಗೆ ಹೇಳಿದ್ರೆ, ಧ್ರುವ್ ಮನಸ್ಸು ಮಾತ್ರ ಕ್ರಿಕೆಟ್ ಮೇಲೆಯೇ ನೆಟ್ಟಿತ್ತು. ಕ್ರಿಕೆಟ್ ಕಿಟ್​​​ಗೆ 8 ಸಾವಿರ ಬೇಕಾಗಿದೆ ಎಂದು ಅಪ್ಪನ ಬಳಿ ಅಳಲು ತೋಡಿಕೊಂಡಿದ್ದ. ಆದ್ರೆ, ಇದಕ್ಕೆ ತಂದೆ ಕ್ರಿಕೆಟ್ ಆಡುವುದನ್ನೇ ನಿಲ್ಲಿಸಲು ಸೂಚಿಸಿದ್ದರು. ಆದ್ರೆ, ಈ ವೇಳೆ ಮಗನ ಕನಸಿಗೆ ನೀರೆರೆದಿದ್ದು ಧ್ರವ್ ತಾಯಿ.

ತನ್ನ ಚಿನ್ನಾಭರಣವನ್ನ ಮಾರಾಟ ಮಾಡಿದ ಧ್ರವ್ ತಾಯಿ, ಕ್ರಿಕೆಟ್​ ಕಿಟ್​​ಗೆ ಹಣ ನೀಡಿದರು. ಇಲ್ಲಿಂದಲೇ ಧ್ರುವ್, ಅಸಲಿ ಕ್ರಿಕೆಟ್​​ ಜರ್ನಿ ಶುರುವಾಗೋದು. ಧ್ರುವ್ ಕೂಡ ಕ್ರಿಕೆಟ್​ನ ಸಿರೀಯಸ್ ಆಗಿ ತೆಗೆದುಕೊಂಡರು.

ಕ್ರಿಕೆಟ್​​ಗಾಗಿ ನೋಯ್ಡಾಗೆ ಧ್ರವ್ ಶಿಫ್ಟ್​​.. U-19ನಲ್ಲಿ ಸ್ಥಾನ..!

ಜೂನಿಯರ್ ಕ್ರಿಕೆಟರ್ ಆಗಿ ಆಗ್ರಾ, ಉತ್ತರ ಪ್ರದೇಶಗಳ ತಂಡಗಳ ಪರವಾಡಿದ್ದ ಧ್ರುವ್, ಹೆಚ್ಚಿನ ಅವಕಾಶಗಳಿಗಾಗಿ ನೋಯ್ಡಾಗೆ ತೆರಳುವ ಧ್ರುವ್, ಡೆಲ್ಲಿ ತಂಡದಲ್ಲಿ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸ್ತಾರೆ. ಈ ವೇಳೆ ಮಗನ ಬೆಳವಣಿಗೆಗೆ ಜೊತೆಯಾಗಿ ಧ್ರುವ್​​ ತಾಯಿ ನೋಯ್ಡಾದಲ್ಲಿ ನೆಲೆಸುತ್ತಾರೆ. ಈ ಹಂತದಲ್ಲೇ ಧ್ರುವ್, 2020ರ ಅಂಡರ್​-19 ವಿಶ್ವಕಪ್​ ತಂಡದ ಉಪ ನಾಯಕನಾಗಿ ಆಯ್ಕೆಯಾಗುವ ಧ್ರುವ್​​​, ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅಂಡರ್​-19 ವಿಶ್ವಕಪ್​​ TO ಮಿಲಿಯನ್ ಡಾಲರ್ ಟೂರ್ನಿ​..!

2020ರ ಅಂಡರ್​-19 ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್, ರವಿ ಬಿಷ್ನೋಯಿ, ಪ್ರಿಯಮ್​​​ ಗರ್ಗ್, ಕಾರ್ತಿಕ್ ತ್ಯಾಗಿ 2021​ ಐಪಿಎಲ್​ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಕರಿಯಾಗ್ತಾರೆ. ಆದ್ರೆ, ಅನ್​ಸೋಲ್ಡ್​ ಆಗಿದ್ದ ಧ್ರುವ್, ಮಾನಸಿಕವಾಗಿ ಕುಗ್ಗುತ್ತಾರೆ. ಈ ವೇಳೆ ಬೆನ್ನೆಲುಬಾಗಿ ನಿಲ್ಲುವ ತಂದೆ, ತಾಯಿ ಸ್ಥೈರ್ಯ ತುಂಬುತ್ತಾರೆ. ಈ ಬಳಿಕ 2022ರ ಬಿಡ್ಡಿಂಗ್​ನಲ್ಲಿ ರಾಜಸ್ಥಾನ ರಾಯಲ್ಸ್​ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸುತ್ತೆ. ಇಂಪ್ಯಾಕ್ಟ್​ ಪ್ಲೇಯರ್ ಆಗಿ ಚೊಚ್ಚಲ ಸೀಸನ್​ನಲ್ಲಿ ಕೆಲ ಪಂದ್ಯಗಳಲ್ಲೇ ಆಡಿದ್ರೂ 172.73ರ ಸ್ಟ್ರೈಕ್​ರೇಟ್‌ನಲ್ಲಿ 152 ರನ್ ಗಳಿಸಿ ಇಂಪ್ಯಾಕ್ಟ್​ ಫುಲ್ ಪರ್ಫಾಮೆನ್ಸ್​ ನೀಡಿ ಗಮನ ಸೆಳೆಯುತ್ತಾರೆ.

ನಂತರ ದೇಶಿ ಕ್ರಿಕೆಟ್​ನಲ್ಲೂ ಉತ್ತರ ಪ್ರದೇಶದ ಪರ ಮಿಂಚಿನ ಪ್ರದರ್ಶನ ನೀಡುವ ಧ್ರುವ್, ಕಳೆದ ವರ್ಷ ನಡೆದ ಎಮರ್ಜಿಂಗ್ ಏಷ್ಯಾಕಪ್​​ಗೂ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ, ಕಳೆದ ತಿಂಗಳಷ್ಟೇ ಸೌತ್ ಆಫ್ರಿಕಾ ಪ್ರವಾಸಕ್ಕೂ ತೆರಳಿದ್ದರು. ಸದ್ಯ ಉತ್ತರ ಪ್ರದೇಶ ರಣಜಿ ತಂಡದಲ್ಲಿರುವ ಧ್ರುವ್, ಉತ್ತಮ ಪ್ರದರ್ಶನವನ್ನೇ ನೀಡ್ತಿದ್ದಾರೆ.

ಅಂದು ಅಮ್ಮನ ತ್ಯಾಗ, ಈತನ ಧೃಢ ನಿರ್ಧಾರದ ಜೊತೆ ಜೊತೆಗೆ ಶ್ರಮದ ಪ್ರತಿಫಲವಾಗಿ ಇಂದು ಟೀಮ್ ಇಂಡಿಯಾ ಬಾಗಿಲು ತೆರೆದಿದೆ. ಟೀಮ್ ಇಂಡಿಯಾದ ಧ್ರುವತಾರೆಯಂತೆ ಮಿಂಚಲಿ ಅನ್ನೋದೆ ಕ್ರಿಕೆಟ್ ಅಭಿಮಾನಿಗಳ ಆಶಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯಂಗ್ ಟ್ಯಾಲೆಂಟೆಡ್ ಧ್ರುವ್ ಜುರೆಲ್ ಯಾರು.. ಕಾರ್ಗಿಲ್​ ಯೋಧನ ಪುತ್ರ ಕ್ರಿಕೆಟರ್ ಆಗುವುದರ ಹಿಂದಿದೆ ಅಮ್ಮನ ತ್ಯಾಗ!

https://newsfirstlive.com/wp-content/uploads/2024/01/DHRUVA_JUREL_DHONI.jpg

Load More