ಪಾಪರ್ ಪಾಕ್​​ಗೆ ಭಾರತದಿಂದ ಮತ್ತೊಂದು ಪೆಟ್ಟು.. ತಳಮಳಗೊಂಡ ನಟ, ನಟಿಯರು..!

author-image
Ganesh
Updated On
ಪಾಪರ್ ಪಾಕ್​​ಗೆ ಭಾರತದಿಂದ ಮತ್ತೊಂದು ಪೆಟ್ಟು.. ತಳಮಳಗೊಂಡ ನಟ, ನಟಿಯರು..!
Advertisment
  • ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಭಾರತ ದಾಳಿ ನಡೆಸೋ ಸಾಧ್ಯತೆ
  • ಗುಳ್ಳೆ ನರಿ ಪಾಕ್ ಮತ್ತೆ ಯುದ್ಧ ಮಾಡಿದ್ರೆ ಪಾಪರ್​ ಆಗೋದು ಫಿಕ್ಸ್
  • ​ಪಾಕಿಸ್ತಾನದಲ್ಲಿ ಹಣದುಬ್ಬರದ ಪರಿಸ್ಥಿತಿ ಹೇಗಿದೆ..?

ಒಂದೆಡೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗುತ್ತ ಸಾಗಿದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರದಬ್ಬುತ್ತಿದೆ. ಇದರ ನಡುವೆ ಪಾಕ್​ಗೆ ಅತ್ಯಂತ ಆಘಾತಕಾರಿ ಸುದ್ದಿ ಅಂದ್ರೆ ಅದು ಬೆಲೆ ಏರಿಕೆ. ಹಣದುಬ್ಬರ.. ಪಾಪರ್​ ಆಗೋ ಭಯ ಶುರುವಾಗಿದೆ.

ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಭಾರತ ದಾಳಿ ನಡೆಸೋ ಸಾಧ್ಯತೆ

ಭಾರತ ಸೇನೆ ತನ್ನ ರಣ ಬೇಟಿಗೆ ಟೈಂ ಫಿಕ್ಸ್​ ಮಾಡ್ಕೊಂಡಿದೆ. ಮೊದಲು ಪಾಕ್ ಆಕ್ರಮಿತ ಕಾಶ್ಮೀರ ನೆಲದಿಂದ ಟಾರ್ಗೆಟ್​ ಸ್ಟಾರ್ಟ್​ ಮಾಡಲಿದ್ದು, ಶತ್ರುಗಳ ಸಂಹಾರ ಇಲ್ಲಿಂದಲೇ ನಡೆಯಲಿದೆ. ವಾಯು ಸೇನೆ & ಭೂಸೇನೆ ಅಧಿಕಾರಿಗಳು ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ದಾಳಿ ನಡೆಸೋ ಸಾಧ್ಯತೆ ಇದೆ. ಇಲ್ಲಿಯವರಿಗೆ 46 ಉಗ್ರರ ನೆಲೆಗಳನ್ನ ಸೇನೆ ಗುರುತಿಸಿದೆ. ಇದನ್ನ ತಿಳಿದ ಪಾಕ್​ ಸೇನೆ ಉಗ್ರರ ನೆಲೆಯಿಂದ ಉಗ್ರರನ್ನ ಶಿಫ್ಟ್​ ಮಾಡಿದೆ. ಆದ್ರೆ, ಪಾಕ್​​ ಬಚ್ಚಿಟ್ಟ ಉಗ್ರರ ಸ್ಥಳಗಳ ಮೇಲೆ ದಾಳಿ ಫಿಕ್ಸ್ ಆಗಿದೆ. ಎಲ್ಲಾ ಉಗ್ರರ ನೆಲೆ ಪತ್ತೆ ಹಚ್ಚೊ ಕೆಲಸ ಮಾಡುತ್ತಿರೋ ಭಾರತೀಯ ಸೇನೆ ಮುಂದಿನ ಕೆಲ ಗಂಟೆಯಲ್ಲಿ ಕಾರ್ಯಾಚರಣೆ ಶುರು ಮಾಡಲಿದೆ.

ಇದನ್ನೂ ಓದಿ: ಪಾಕ್​ ಸೇನೆಗೆ ತನ್ನ ದೇಶದಲ್ಲೇ ದೊಡ್ಡ ಅವಮಾನ.. ಕವಡೆ ಕಾಸಿನ ಕಿಮ್ಮತ್ತೂ ಅಲ್ಲಿಲ್ಲ..! VIDEO

publive-image

ಈವರೆಗೂ ಪಾಕ್​ ಭಾರತದ ಮೇಲೆ 4 ಬಾರಿ ಯುದ್ಧ ಮಾಡಿದ್ರೂ ಬುದ್ಧಿ ಕಲಿತಿಲ್ಲ. ಗುಳ್ಳೆ ನರಿ ಪಾಕಿಸ್ತಾನ ಮತ್ತೆ ಯುದ್ಧ ಮಾಡಿದ್ರೆ ಪಾಪರ್​ ಆಗೋದು ಪಕ್ಕ ಅಂತ ಗೊತ್ತಿದ್ರೂ ದೌಲತ್​ ಮೆರಿತಿದೆ. ಹಣದುಬ್ಬರ.. ಅಗತ್ಯ ವಸ್ತುಗಳ ಬೆಲೆ ದುಬಾರಿಯಿಂದ ಪಾಕಿಸ್ತಾನ​ ಕಂಗಾಲಾಗಿದೆ.

ಪಾಪರ್​ ಪಾಕ್​!

  • ಜೂನ್​ನಲ್ಲಿ ಪಾಕ್​​​ನಲ್ಲಿ ಹಣದುಬ್ಬರ ಶೇ.5.5 ರಿಂದ 7.5ಕ್ಕೆ ಏರಿಕೆ ಭೀತಿ
  •  ಪಾಕಿಸ್ತಾನದಲ್ಲಿ ಅಕ್ಕಿಯ ಬೆಲೆ ಪ್ರತಿ ಕೆಜಿಗೆ 340 ರೂಪಾಯಿಗೆ ಏರಿಕೆ
  •  ಪಾಕ್​ನಲ್ಲಿ ಚಿಕನ್ ಬೆಲೆ ಪ್ರತಿ ಕೆಜಿಗೆ 800 ರೂಪಾಯಿಗೆ ಏರಿಕೆ ಆಗಿದೆ
  •  ಮಾರ್ಚ್​​​ನಲ್ಲಿ IMF​​ನಿಂದ 2 ಬಿಲಿಯನ್ ಡಾಲರ್ ಸಾಲ ಪಡೆದ ಪಾಕ್​
  •  ಭಾರತದೊಂದಿಗೆ ಯುದ್ಧದಿಂದ ಮತ್ತೆ ಏರುಮುಖವಾಗುವ ಹಣದುಬ್ಬರ
  •  ಆಹಾರದ ಕೊರತೆ, ಹಸಿವಿನಿಂದ ಜನ ಬಳಲುತ್ತಾರೆಂದ ವಿಶ್ವಬ್ಯಾಂಕ್

ಇದನ್ನು ಓದಿ: ಪಾಕಿಸ್ತಾನದ ಮಗ್ಗಲು ಎಲ್ಲಾ ಕಡೆಯಿಂದಲೂ ಮುರಿಯುತ್ತಿದೆ.. ಈಗ ಶಾಕ್ ಮೇಲೆ ಶಾಕ್..!

publive-image

ಭಾರತದಲ್ಲಿ ಹಲವು ಪಾಕಿಸ್ತಾನಿ ನಟರ ಇನ್‌ಸ್ಟಾ ಖಾತೆ ಬಂದ್​

ಭಾರತದಲ್ಲಿ ಹನಿಯಾ ಆಮಿರ್ ಮತ್ತು ಮಹಿರಾ ಖಾನ್ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳನ್ನ ನಿಷ್ಕ್ರಿಯಗೊಳಿಸಲಾಗಿದೆ. ಇದರಿಂದ ಪಾಕಿಸ್ತಾನಿ ಸೆಲೆಬ್ರಿಟಿಗಳು ಕಂಗಾಲಾಗಿದ್ದಾರೆ. ಭಾರತ ಮಿಲಿಟರಿ ಯುದ್ಧ ಕ್ರಮದ ಬೆನ್ನಲ್ಲೇ ಪಾಕಿಸ್ತಾನ ಷೇರು​ ಮಾರ್ಕೆಟ್​ 3 ಸಾವಿರದ 545 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ. ಒಟ್ಟಾರೆ, ಹಣದುಬ್ಬರ.. ಬೆಲೆ ದುಬಾರಿ.. ಮಕಾಡೆ ಮಲಗುತ್ತಿರೋ ಷೇರ್​ ಮಾರ್ಕೆಟ್.. ಇದೆಲ್ಲಾ ಪಾಕ್​ ನಿದ್ದೆಗೆಡಿಸಿದೆ.

ಇದನ್ನೂ ಓದಿ: POK ಅಂದರೆ ಏನು..? ಕಾಶ್ಮೀರದ ಎಷ್ಟು ಭಾಗವನ್ನು ಪಾಕಿಸ್ತಾನ ಹೊಂದಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment