/newsfirstlive-kannada/media/post_attachments/wp-content/uploads/2024/04/insta1.jpg)
ಮೆಟಾ ಒಡೆತನದ ಇನ್ಸ್ಟಾಗ್ರಾಂ ಕಾರ್ಯದಲ್ಲಿ ವ್ಯತ್ಯಾಯವಾಗಿದೆ. ಬಳಕೆದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕರು ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನಂಬಿದ್ರೆ ನಂಬಿ! ಬರೀ 2499 ರೂಪಾಯಿಗೆ ಫ್ಲಿಪ್ ಫೋನ್! ಒಂದು ಬಾರಿ ಚಾರ್ಜ್ ಮಾಡಿದ್ರೆ 7 ದಿನ ಬರುತ್ತೆ!
ಇನ್ಸ್ಟಾಗ್ರಾಂನಲ್ಲಿ ವಿಶ್ವದಾದ್ಯಂತ ಬೆಳಿಗ್ಗೆ 11:30ರ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಸುಮಾರು 1 ಸಾವಿರಕ್ಕೂ ಅಧಿಕ ಬಳಕೆದಾರರು ಇನ್ಸ್ಟಾಗ್ರಾಂ ಡೌನ್ ಆಗಿರುವ ಬಗ್ಗೆ ಎಕ್ಸ್ನಲ್ಲಿ ಬರೆದು ಹಾಕಿದ್ದಾರೆ. ಬಳಿಕ ಸಮಸ್ಯೆ ಎದುರಿಸಿದ ಬಳಕೆದಾರರ ಸಂಖ್ಯೆ ಏರಿಕೆ ಕಂಡಿದೆ.
ಇದನ್ನೂ ಓದಿ: BSNL ಮತ್ತಷ್ಟು ಗ್ರಾಹಕರ ಸ್ನೇಹಿ.. Jio, Airtelನಲ್ಲಿ ಇಲ್ಲದ ವಿಶೇಷ ಸೌಲಭ್ಯ, ದುಸ್ರಾ ಮಾತಾಡಂಗೇ ಇಲ್ಲ!
ಇನ್ಸ್ಟಾಗ್ರಾಂ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಮೆಟಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತರೆ ಫ್ಲಾಟ್ಫಾರ್ಮ್ನಲ್ಲೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಇನ್ಸ್ಟಾಗ್ರಾಂ ಡೌನ್ ಆದಂತೆ ಮಿಮ್ಸ್ಗಳು ಕಾಣಿಸಿಕೊಂಡಿದೆ. ಅನೇಕರು ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಬಹುಸಂಖ್ಯಾ ಬಳಕೆದಾರರನ್ನು ಹೊಂದಿದೆ. ಇದರ ಮೂಲಕ ಫೋಟೋ, ವಿಡಿಯೋ, ರೀಲ್ಸ್ ಹರಿಬಿಡಬಹುದಾಗಿದೆ. ಮಾತ್ರವಲ್ಲದೆ ನ್ಯೂಸ್, ಬ್ಯುಸಿನೆಸ್ಗೂ ಈ ಫ್ಲಾಟ್ಫಾರ್ಮ್ ಪ್ರೋತ್ಸಾಹ ನೀಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ