/newsfirstlive-kannada/media/post_attachments/wp-content/uploads/2024/04/insta1.jpg)
ಮೆಟಾ ಒಡೆತನದ ಇನ್​​ಸ್ಟಾಗ್ರಾಂ ಸದಾ ಒಂದಲ್ಲಾ ಒಂದು ಹೊಸ ಫೀಚರ್ಸ್​ ಅನ್ನು ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ತನ್ನ ಬಳಕೆದಾರರಿಗಾಗಿ ನೂತನ ವೈಶಿಷ್ಟ್ಯವನ್ನು ಇನ್​ಸ್ಟಾಗ್ರಾಂ ಬಿಡುಗಡೆ ಮಾಡಿದೆ. ಅದೇನು ಗೊತ್ತಾ?
ಇನ್​​ಸ್ಟಾಗ್ರಾಂನಲ್ಲಿ ಫೋಟೋ, ವಿಡಿಯೋ ಹಂಚುವ ಆಯ್ಕೆ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೀಗ ಒಂದೇ ಪೋಸ್ಟ್​ನಲ್ಲಿ 20 ವಿಡಿಯೋ ಮತ್ತು ಫೋಟೋಗಳನ್ನು ಅಪ್​ಲೋಡ್​ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ನೂತನ ಫೀಚರ್​ ಬಳಕೆದಾರರ ಮನಗೆದ್ದಿದೆ.
/newsfirstlive-kannada/media/post_attachments/wp-content/uploads/2023/09/INSTA.jpg)
ಇನ್​ಸ್ಟಾಗ್ರಾಂನಲ್ಲಿ ಒಂದೇ ಪೋಸ್ಟ್​ ಮೂಲಕ 10 ಫೋಟೋ ಮತ್ತು ವಿಡಿಯೋ ಹಂಚಬಹುದಾಗಿತ್ತು. ಆದರೀಗ ಅದರ ಮಿತಿಯನ್ನು ಏರಿಸಿದೆ. 20 ಮಿತಿಯವರೆಗೆ ಕೊಂಡೊಯ್ದಿದೆ. ಸದ್ಯ ಸದಾ ಇನ್​​ಸ್ಟಾಗ್ರಾಂನಲ್ಲಿ ಕಾಲ ಕಳೆಯುವವರಿಗೆ ನೂತನ ಫೀಚರ್​ ಮನಗೆದ್ದಿದೆ.
ಇನ್​​ಸ್ಟಾ 2017ರಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮಿತಿಯನ್ನು ಹೆಚ್ಚಿಸಿಕೊಂಡಿತು. ಅಂದಿನಿಂದ ಆ್ಯಪ್​​ನಲ್ಲಿ ನವೀನ ಬಗೆಯ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಮಾತ್ರವಲ್ಲದೆ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಒಂದೇ ಪೋಸ್ಟ್​​ನಲ್ಲಿ 20 ಫೋಟೋ ಮತ್ತು ವಿಡಿಯೋ ಹಂಚಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us