newsfirstkannada.com

ಮದುವೆ ಆಗದಿದ್ದರೆ ಮೇಲಿಂದ ಬಿದ್ದು ಸಾಯ್ತೀನಿ ಎಂದು ಕಟ್ಟಡ ಏರಿದ ವಿವಾಹಿತ ಮಹಿಳೆ

Share :

Published March 18, 2024 at 9:15am

    ಯುವಕನ ಮಾತಿನಿಂದ ಕೋಪಗೊಂಡ ಮಹಿಳೆ ಆತ್ಮಹತ್ಯೆಗೆ ಪ್ರಯತ್ನ

    ಕಳೆದ ಒಂದು ವರ್ಷದಿಂದ ಇನ್​ಸ್ಟಾ ಮೂಲಕವೇ ಇಬ್ಬರ ಮಧ್ಯೆ ಪ್ರೀತಿ

    ಹೋಟೆಲ್​ನ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಮೈಸೂರು: ಇತ್ತೀಚೆಗೆ ಆನ್​​ಲೈನ್​ ಮೂಲಕ ಪ್ರೀತಿ-ಪ್ರೇಮ ಹೆಚ್ಚಾಗುತ್ತಿದ್ದು ಅದರಲ್ಲಿ ಇನ್​ಸ್ಟಾಗ್ರಾಮ್​​ನಿಂದ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರು ಲವ್ ಬಲೆಗೆ ಬೀಳುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಮೈಸೂರಿನಲ್ಲಿ ಬಿಹಾರ ಮೂಲದ ಯುವಕನಿಗೂ, ವಿವಾಹಿತ ಮಹಿಳೆಗೂ ಇನ್​ಸ್ಟಾದಲ್ಲಿ ಪ್ರೀತಿಯಾಗಿದೆ. ಆದರೆ ಯುವಕ ಮದುವೆ ಆಗಲು ನಿರಾಕರಣೆ ಮಾಡಿದ್ದಕ್ಕೆ ಬಿಲ್ಡಿಂಗ್​ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆ ಯತ್ನಿಸಿದ್ದಾಳೆ. ಇದೀಗ ಇವರ ಲವ್​ಸ್ಟೋರಿ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಬಿಹಾರ ಮೂಲದವರಾದ ಆಸಿಬೂರ್ ರೆಹಮಾನ್ ಮೈಸೂರಿನ ಹಿಮ್ಮಾವು ಗ್ರಾಮದಲ್ಲಿ ವಾಸವಿದ್ದು ಏಷ್ಯನ್ ಪೈಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್​ಸ್ಟಾ ಮೂಲಕ ಬಿಹಾರ ಮೂಲದ ನಾಸಿಂ ಬೇಗಂ (31) ಎನ್ನುವ ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದಾನೆ. ಈ ಸಲುಗೆ ಮುಂದೆ ಪ್ರೀತಿಯಾಗಿ ಮಾರ್ಪಟ್ಟಿದೆ. ಇಲ್ಲಿ ಟ್ವಿಸ್ಟ್ ಏನೆಂದರೆ ಮಹಿಳೆಗೆ ಈಗಾಗಲೇ ಮದುವೆ ಆಗಿದೆ. ಆದರೂ ಒಂದು ವರ್ಷದಿಂದ ಸೋಷಿಯಲ್ ಮೀಡಿಯಾ ಮೂಲಕ ಇಬ್ಬರು ಲವ್ ಮಾಡಿದ್ದಾರೆ.

ಇದನ್ನು ಓದಿ: ಕಪ್ ಗೆದ್ದುಕೊಟ್ಟ ಮಂದಾನ ಪಡೆಯ ಸಾಹಸಕ್ಕೆ CM ಮೆಚ್ಚುಗೆ; ಹುಡುಗರೂ ಕಪ್ ಗೆಲ್ಲಲಿ ಎಂದ ಸಿದ್ದರಾಮಯ್ಯ

ರೆಹಮಾನ್​ನನ್ನ ಹುಡುಕಿಕೊಂಡು ನೇರ ಮೈಸೂರಿನ ನಂಜನಗೂಡಿಗೆ ಮಹಿಳೆ ಬಂದಿದ್ದು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾಳೆ. ಮಹಿಳೆಯನ್ನು ನೋಡಿದ ಮೇಲೆ ವಯಸ್ಸಿನ ಅಂತರ ಹೆಚ್ಚಿದೆ ಎಂದು ಕಾರಣ ನೀಡಿ ಮದುವೆ ನಿರಾಕರಣೆ ಮಾಡಿದ್ದಾನೆ. ಯುವಕನ ಮಾತಿನಿಂದ ಕೋಪಗೊಂಡ ಮಹಿಳೆ ನಂಜನಗೂಡು ತಾಲೂಕಿನಲ್ಲಿನ ಖಾಸಗಿ ಹೋಟೆಲ್​ವೊಂದರ ಮೇಲ್ಭಾಗಕ್ಕೆ ತೆರಳಿ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದಾಳೆ.

ಈ ಬಗ್ಗೆ ಮಾಹಿತಿ ಪಡೆದುಕೊಂಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಹೇಗೋ ಮಹಿಳೆಯನ್ನು ಒಪ್ಪಿಸಿ ಸಾವಿನ ದವಡೆಯಿಂದ ಕಾಪಾಡಿದ್ದಾರೆ. ಸದ್ಯ ಮಹಿಳೆಯು ಪೊಲೀಸರ ವಶದಲ್ಲಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗದಿದ್ದರೆ ಮೇಲಿಂದ ಬಿದ್ದು ಸಾಯ್ತೀನಿ ಎಂದು ಕಟ್ಟಡ ಏರಿದ ವಿವಾಹಿತ ಮಹಿಳೆ

https://newsfirstlive.com/wp-content/uploads/2024/03/MYS_INST_LOVE.jpg

Load More