/newsfirstlive-kannada/media/post_attachments/wp-content/uploads/2025/07/accused.jpg)
ಬೆಂಗಳೂರು: ಇನ್​ಸ್ಟಾದಲ್ಲಿ ಪರಿಚಯವಾದ ಮಹಿಳೆ ಜೊತೆಗೆ ಮಾತುಕತೆಗೆ ಅಂತ ಬಂದವನು ಆಕೆಯ ಸಂಬಂಧಿಗೆ ಕತ್ತುಕೊಯ್ದ ಘಟನೆ ಹೆಚ್ಎಎಲ್​ನಲ್ಲಿ ನಡೆದಿದೆ. ಸೆಲ್ವ ಕಾರ್ತಿಕ್​ ಬಂಧಿತ ಆರೋಪಿ.
ತಿರಪ್ಪತ್ತೂರು ಮೂಲದ ಸೆಲ್ವ ಕಾರ್ತಿಕ್​ಗೆ ಇನ್​ಸ್ಟಾಗ್ರಾಮ್​ನಲ್ಲಿ ಮಹಿಳೆ ಜೊತೆಗೆ ಪರಿಚಯ ಆಗುತ್ತೆ. ಹೀಗೆ ದಿನ ಕಳೆದಂತೆ ಕಾರ್ತಿಕ್​ ಇನ್​ಸ್ಟಾದಲ್ಲಿ ಮಹಿಳೆಗೆ ಮೆಸೇಜ್ ಮಾಡಿ ಪೀಡಿಸ್ತಿದ್ದನಂತೆ. ಆದ್ರೆ, ಆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಕಾರ್ತಿಕ್ ಮೆಸೇಜ್​ ಮಾಡುತ್ತಿದ್ದ ವಿಚಾರವನ್ನು ಗಂಡನಿಗೂ ಹೇಳದೆ ತಂದೆಗೆ ತಿಳಿಸಿದ್ದಳು.
/newsfirstlive-kannada/media/post_attachments/wp-content/uploads/2025/07/accused1.jpg)
ಇನ್ನೂ, ಈ ವಿಚಾರ ತಂದೆಗೆ ಗೊತ್ತಾಗುತ್ತಿದ್ದಂತೆ ಕಾರ್ತಿಕ್​ ಜೊತೆ ಮಾತಾಡಲು ಹೆಚ್ಎಎಲ್​ಗೆ ಕರೆಸಿದ್ದರು. ಮಾತುಕತೆ ಬಳಿಕ ಕಾರ್ತಿಕ್ ಮಹಿಳೆ ಜೊತೆ ಮಾತನಾಡಬೇಕು ಅಂತ ಹೇಳಿದ್ದಾನೆ. ಈ ವೇಳೆ ಬೈಕ್​ನಲ್ಲಿ ಕೂರಿಸಿಕೊಂಡು ಮನೆಗೆ ಕಡೆ ಹೊರಟಿದ್ರು, ಆಗ ಅದೇನ್ ಆಯ್ತೋ ಗೊತ್ತಿಲ್ಲ ಮಹಿಳೆ ಸಂಬಂಧಿಗೆ ಕಾರ್ತಿಕ್ ಚಾಕು ಇರಿದಿದ್ದಾನೆ. ಬೈಕ್​ನಲ್ಲಿಯೇ ಪ್ರಶಾಂತ್ ಎಂಬಾತನ ಕತ್ತುಕೊಯ್ದಿದ್ದಾನೆ. ಆ ಕೂಡಲೇ ಗಾಯಾಳು ಯುವಕನಿಗೆ ಆಸ್ಪತ್ಸೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿ ಕಾರ್ತಿಕ್​ನ ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us