/newsfirstlive-kannada/media/post_attachments/wp-content/uploads/2024/08/Iman-Esmail2.jpg)
ತೆಲುಗು ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. ಕಲ್ಕಿ ಸಿನಿಮಾದ ಸಕ್ಸಸ್ ನಂತರ ಸೀತಾರಾಮಂ ಡೈರೆಕ್ಟರ್ ಹನು ರಾಘವಪುಡಿ ಜೊತೆ ಪ್ರಭಾಸ್ ಕೈ ಜೋಡಿಸಿದ್ದಾರೆ. ಅದರಲ್ಲೂ ಡಾರ್ಲಿಂಗ್​ ಪ್ರಭಾಸ್ ಅವರ ಹೊಸ ಚಿತ್ರಕ್ಕೆ ಸೋಷಿಯಲ್​ ಮೀಡಿಯಾ ಸ್ಟಾರ್​ ಅನ್ನು ಆಯ್ಕೆ ಮಾಡಿದ್ದಾರೆ. ತಾತ್ಕಾಲಿಕವಾಗಿ ನೂತನ ಚಿತ್ರಕ್ಕೆ ‘ಫೌಜಿ’ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: VIDEO: ಕ್ಯಾಮರಾದಲ್ಲಿ ಸೆರೆಯಾಯ್ತು ಲಂಚಾವತಾರ; ಬಂದ ಹಣ ಹಂಚಿಕೊಂಡು ಸಿಕ್ಕಿಬಿದ್ದ ಪೊಲೀಸ್ರು..!
ನಿನ್ನೆ ಹೈದರಾಬಾದ್ ಪ್ರಭಾಸ್ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಈ ವೇಳೆ ಬಣ್ಣದ ಲೋಕಕ್ಕೆ ಮೊದಲ ಬಾರಿಗೆ ಕಾಲಿಡುತ್ತಿದ್ದ ಯುವ ನಟಿ ಕೂಡ ಭಾಗಿಯಾಗಿದ್ದ. ಇನ್ನು, ಡಾರ್ಲಿಂಗ್​ ಪ್ರಭಾಸ್​ ಜೊತೆಗೆ ಚೊಚ್ಚಲ ಸಿನಿಮಾ ಮಾಡುತ್ತಿರೋ ರೀಲ್ಸ್​ ಸ್ಟಾರ್ ಇಮಾನ್ವಿ ಇಸ್ಮಾಯಿಲ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ನೂತನ ಸಿನಿಮಾಗೆ ವಿಶಾಲ್ ಚಂದ್ರಶೇಖರ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಶಾಲ್ ಈಗಾಗಲೇ ಚಿತ್ರಕ್ಕಾಗಿ ಮೂರು ಹಾಡುಗಳನ್ನು ರಚಿಸಿದ್ದಾರಂತೆ. ಪ್ರಭಾಸ್ ಮತ್ತು ಹನು ರಾಘವಪುಡಿ ಅವರ ಆಕ್ಷನ್ ಪ್ರಾಜೆಕ್ಟ್ ಅನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಲಿದೆ.
ಇಮಾನ್ವಿ ಇಸ್ಮಾಯಿಲ್ ರೀಲ್ಸ್ ರಾಣಿಯಾಗಿರೋ ಇವರು ಅತ್ಯುತ್ತಮ ನೃತ್ಯಗಾರ್ತಿ. ತಮ್ಮ ಅದ್ಭುತ ಡ್ಯಾನ್ಸ್​ ಮೂಲಕವೇ ಅನೇಕರ ಗಮನ ಸೆಳೆದಿದ್ದಾರೆ ರೀಲ್ಸ್ ರಾಣಿ ಇಮಾನ್ವಿ. ಇನ್ನು, ಇವರು ನಟಿಸುತ್ತಿರೋ ಮೊದಲ ಸಿನಿಮಾನೇ ಪ್ರಭಾಸ್ ಜೊತೆ. ಡಾರ್ಲಿಂಗ್​ ಪ್ರಭಾಸ ಜೊತೆಗೆ ನಟಿಸುತ್ತಿರುವ ಬಗ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಸಿದ್ದಾರೆ. ಪ್ರಭಾಸ್​ಗೆ ನಟಿಯಾಗಿ ಎಂಟ್ರಿ ಕೊಡುತ್ತಿರೋ ಇಮಾನ್ವಿ ಇಸ್ಮಾಯಿಲ್ ಅವರು ಇನ್​​ಸ್ಟಾಗ್ರಾಮ್​ನಲ್ಲಿ 80ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್​ ಆಗಿರುವ ಇವರು ಕೆಲ ಸಣ್ಣ ಪುಟ್ಟ ಚಿತ್ರಗಳಲ್ಲಿ ನಟಿಸಿದ್ದಾರೆ.
ದೆಹಲಿ ಮೂಲದ ಈ ಚೆಲುವೆ ಯೂಟ್ಯೂಬ್ ಚಾನೆಲ್‌ನಲ್ಲಿ 1.81 ಮಿಲಿಯನ್ ಸಬ್‌ಸ್ಕೈಬರ್ ಹೊಂದಿದ್ದಾರೆ. ಪೋಷಕರ ಪ್ರೋತ್ಸಾಹದೊಂದಿಗೆ ತಮ್ಮ ಕೆಲಸ ಬಿಟ್ಟು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರಂತೆ. ಇನ್​ಸ್ಟಾದಲ್ಲಿ ರೀಲ್ಸ್​ ಮಾಡಿಕೊಂಡಿದ್ದ ಈಕೆ ಈಗ ಸ್ಟಾರ್​ ನಟನಿಗೆ ನಾಯಕಿಯಾಗಿ ನಟಿಸುವ ಅದೃಷ್ಟ ಒಲಿದು ಬಂದಿದೆ. ಮುಂದಿನ ದಿನಗಳಲ್ಲಿ ಇಮಾನ್ವಿ ಇಸ್ಮಾಯಿಲ್ ಅವರನ್ನು ಪ್ರೇಕ್ಷಕರು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ