Advertisment

ಅಯ್ಯೋ! ಏಕಾಏಕಿ ಬ್ಯಾನ್​​ ಆಯ್ತು ವಾಟ್ಸ್​​ಆ್ಯಪ್​, ಇನ್​ಸ್ಟಾ, ಯೂಟ್ಯೂಬ್​! ಮುಂದೇನು ಕತೆ?

author-image
AS Harshith
Updated On
ಅಯ್ಯೋ! ಏಕಾಏಕಿ ಬ್ಯಾನ್​​ ಆಯ್ತು ವಾಟ್ಸ್​​ಆ್ಯಪ್​, ಇನ್​ಸ್ಟಾ, ಯೂಟ್ಯೂಬ್​! ಮುಂದೇನು ಕತೆ?
Advertisment
  • ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಂ, ಯೂಟ್ಯೂಬ್​ ನಂಬಿಕೊಂಡಿದ್ದವರಿಗೆ ಶಾಕ್​
  • ಜನಪ್ರಿಯ ಪ್ಲಾಟ್​ಫಾರ್ಮ್​ಗಳು ದಿಢೀರನೆ ಬ್ಯಾನ್​! ನಿಷೇಧಕ್ಕೆ ಕಾರಣ ಏನು ಗೊತ್ತಾ?
  • ಯೂಟ್ಯೂಬ್​ ನಂಬಿಕೊಂಡು ಅದರ ಮೂಲಕ ಹಣ ಸಂಪಾದಿಸುತ್ತಿದ್ದವರ ಕತೆ ಏನು?

ವಾಟ್ಸ್​ಆ್ಯಪ್​, ಇನ್​​ಸ್ಟಾಗ್ರಾಂ, ಯೂಟ್ಯೂಬ್​ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಪ್ಲಾಟ್​​ಫಾರ್ಮ್​. ಕೋಟ್ಯಾಂತರ ಜನರು ಇವುಗಳನ್ನು ಬಳಕೆ ಮಾಡುತ್ತಿದ್ದಾರೆ, ಮಾತ್ರವಲ್ಲದೆ ಇದರ ಮೂಲಕ ಸಮಯ ಕಳೆಯುವವರೂ ಇದ್ದಾರೆ. ಇನ್ನು ಹಲವರಿಗೆ ಈ ಪ್ಲಾಟ್​​ಫಾರ್ಮ್​ಗಳು ಆದಾಯದ ಮೂಲವೆಂದರೆ ತಪ್ಪಾಗಲಾರದು. ಆದರೀಗ ವಾಟ್ಸ್​ಆ್ಯಪ್​, ಇನ್​​ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಟಿಕ್​ಟಾಕ್​ ಬ್ಯಾನ್​​ ಆಗಿದೆ. ಹೌದು. ನೆರೆಯ ದೇಶ ಬಾಂಗ್ಲಾದೇಶ ಈ ಪ್ಲಾಟ್​​ಫಾರ್ಮ್​ಗಳ ಮೇಲೆ ನಿಷೇಧ ಹೇರಿದೆ.

Advertisment

ಆಗಸ್ಟ್​ 2ರಂದು ಮೆಟಾ ಒಡೆತನದ ವಾಟ್ಸ್​ಆ್ಯಪ್​, ಇನ್​ಸ್ಟಾ, ಗೂಗಲ್​ ಒಡೆತನದ ಯೂಟ್ಯೂಬ್​ ಮತ್ತು ಬೈಟೆಡ್ಯಾನ್ಸ್​ ಒಡೆತನದ ಟಿಕ್​ಟಾಕನ್ನು ದಿಢೀರನೆ ಬ್ಯಾನ್​ ಮಾಡಿದೆ. ಟರ್ಕಿಯಲ್ಲೂ ಇದೇ ರೀತಿಯ ಕ್ರಮವನ್ನು ಅನುಸರಿಸಿದ ಬಳಿಕ ಬಾಂಗ್ಲಾದೇಶವು ಜನಪ್ರಿಯ ಪ್ಲಾಟ್​​ಫಾರ್ಮ್​ಗಳ ನಿಷೇಧವೆಂಬ ನಿರ್ಧಾರವನ್ನು ತೆಗೆದುಕೊಂಡಿದೆ.

ಇದನ್ನೂ ಓದಿ: ಮೃತ PSI ಪರಶುರಾಮ ಪತ್ನಿ 8 ತಿಂಗಳ ಗರ್ಭಿಣಿ.. ಪತಿಗಾಗಿ ಪ್ರತಿಭಟನೆಯ ಮೊರೆ ಹೋದ ಶ್ವೇತಾ

ಬ್ಯಾನ್​ ಮಾಡಿದ್ದು ಯಾಕೆ?

ಕಳೆದ ಜುಲೈ ತಿಂಗಳಿನಲ್ಲಿ ಮೆಟಾ ಒಡೆತನದ ಫೇಸ್​​ಬುಕ್​ ಮತ್ತು ಇನ್​​​ಸ್ಟಾಗ್ರಾಂ ಬ್ಯಾನ್​ ಮಾಡಲು ಮುಂದಾಗಿತ್ತು. ಈ ಪ್ಲಾಟ್​​ಫಾರ್ಮ್​ಗಳು ಅಶಾಂತಿಗೆ ಕಾರಣವಾಗಿದ್ದ ಕಾರಣ ಸ್ಥಗಿತಗೊಳಿಸಲಾಯಿತು. ಅದರಂತೆಯೇ ಆಗಸ್ಟ್​ 2 ಮಧ್ಯಾಹ್ನ 12;15ಕ್ಕೆ ದೇಶದ ಎಲ್ಲಾ ಮೊಬೈಲ್​ ನೆಟ್​​ವರ್ಕ್​​ ಮೂಲಕ ಪ್ರವೇಶವನ್ನು ಕಡಿತಗೊಳಿಸಿದೆ.

Advertisment

ಇದನ್ನೂ ಓದಿ: ಗೆಳೆಯನ ಪತ್ನಿ ಜೊತೆ ಸಂಬಂಧ.. ಒಂಟಿ ಕೈ ವೆಂಕಟೇಶನ ಮಚ್ಚೇಟಿಗೆ ಬಲಿಯಾದ ವ್ಯಕ್ತಿ

ಟರ್ಕಿಯಲ್ಲೂ ಆಗಸ್ಟ್​ 1 ರಂದು ಇನ್​ಸ್ಟಾವನ್ನು ಬ್ಯಾನ್​ ಮಾಡಲಾಗಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶ ಈ ನಿರ್ಣಯ ತೆಗೆದುಕೊಂಡಿದೆ. ಬ್ಯಾನ್​ ಮಾಡಿದ ಬಳಿಕ ದೇಶದ ಇಂಟರ್​ನೆಟ್​​ ವೇಗ ಸಾಮಾನ್ಯ ಮಟ್ಟಕ್ಕೆ ತಲುಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment