Advertisment

ಭಗೀರಥ ಪ್ರಯತ್ನಕ್ಕೆ ಯಶಸ್ಸು.. ತುಂಗಭದ್ರಾ ಡ್ಯಾಂಗೆ ಮೊದಲ ಸ್ಟಾಪ್ ಲಾಗ್‌ ಫಿಕ್ಸ್‌! ಎಷ್ಟು TMC ನೀರು ಸೇಫ್‌?

author-image
admin
Updated On
ಭಗೀರಥ ಪ್ರಯತ್ನಕ್ಕೆ ಯಶಸ್ಸು.. ತುಂಗಭದ್ರಾ ಡ್ಯಾಂಗೆ ಮೊದಲ ಸ್ಟಾಪ್ ಲಾಗ್‌ ಫಿಕ್ಸ್‌! ಎಷ್ಟು TMC ನೀರು ಸೇಫ್‌?
Advertisment
  • ಟಿಬಿ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್‌ ಅಳವಡಿಕೆ
  • ಪೋಲಾಗುತ್ತಿರೋ ನೀರಿನ ರಕ್ಷಣೆಗೆ ಇನ್ನೂ 4 ಸ್ಟಾಪ್ ಲಾಗ್ ಬಾಕಿ!
  • ತುಂಗಭದ್ರಾ ಡ್ಯಾಂ ಮೇಲೆ ನಿಟ್ಟುಸಿರು ಬಿಟ್ಟ ಸಚಿವರು, ಕನ್ಹಯ್ಯ ನಾಯ್ಡು

ಕೊಪ್ಪಳ: ಆಂಧ್ರ, ತೆಲಂಗಾಣ, ಕರ್ನಾಟಕ ರೈತರ ಜೀವನಾಡಿ. 3 ರಾಜ್ಯದ ಕೋಟ್ಯಾಂತರ ಜನರ ಪಾರ್ಥನೆಗೆ ಕೊನೆಗೂ ಮೊದಲ ಫಲ ಸಿಕ್ಕಿದೆ. ಕಳೆದ 6 ದಿನಗಳಿಂದ ತುಂಗಭದ್ರಾ ಜಲಾಶಯದಲ್ಲಿ ಎದುರಾಗಿದ್ದ ಆತಂಕದ ಕಾರ್ಮೋಡ ನಿಧಾನಕ್ಕೆ ದೂರ ಹೋಗುವ ಮುನ್ಸೂಚನೆ ಸಿಕ್ಕಿದೆ. ಸತತ ಪರಿಶ್ರಮ, ನಿರಂತರ ಕಾರ್ಯಾಚರಣೆಯ ಬಳಿಕ ಟಿಬಿ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್‌ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.

Advertisment

publive-image

ತುಂಗಭದ್ರಾ ಡ್ಯಾಂನ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದ ತಂಡದಿಂದ ಈ ಕಾರ್ಯ ನಡೆದಿದ್ದು, ಇಂದಿನ ಕಾರ್ಯಾಚರಣೆ ಯಶಸ್ವಿಯಾಗಿದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಈ ಮಾಹಿತಿ ತಿಳಿಯುತ್ತಿದ್ದಂತೆ ಡ್ಯಾಂ ಮೇಲೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

[caption id="attachment_81373" align="aligncenter" width="800"]publive-image ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸಂಭ್ರಮ[/caption]

ಇದನ್ನೂ ಓದಿ: BREAKING: ತುಂಗಭದ್ರಾ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್‌ ಅಳವಡಿಕೆ ಕಾರ್ಯ ಸಕ್ಸಸ್‌

Advertisment

19ನೇ ಗೇಟ್‌ನ ಮೊದಲ ಸ್ಟಾಪ್ ಲಾಗ್ ಅಳವಡಿಕೆಯಿಂದ ಬರೋಬ್ಬರಿ 22 TMC ನೀರು ಉಳಿಸಲು‌ ಸಹಯಕವಾಗಿದೆ. ರಭಸವಾಗಿ ಹರಿಯುವ ನೀರಿನಲ್ಲಿ ಗೇಟ್ ಹಾಕೋ ಕಾರ್ಯ ಸಖತ್‌ ಸವಾಲು ಆಗಿತ್ತು. ಜಿಂದಾಲ್, ಹಿಂದೂಸ್ತಾನ್ ಹಾಗೂ ನಾರಾಯಣ ಸ್ಟೀಲ್ ಕಂಪನಿಗಳಿಗೆ ಧನ್ಯವಾದ ಹೇಳುವೆ. ನಾಳೆ ಸಂಜೆಯೊಳಗೆ ನಾಲ್ಕು ಸ್ಟಾಪ್ ಲಾಗ್‌ಗಳನ್ನು ಅಳವಡಿಸುತ್ತೇವೆ. ಇದರಿಂದ ಡ್ಯಾಂನಲ್ಲಿ ಕನಿಷ್ಠ 70 TMC ನೀರು ಉಳಿಸಲಾಗುವುದು ಎಂದು ಸಚಿವ ಶಿವಕುಮಾರ್ ತಂಗಡಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಿಲ್ಲೆ, ನಿಲ್ಲೆ ತುಂಗಭದ್ರೆ.. ಪೋಲಾಗ್ತಿರುವ ಜೀವಜಲ ತಡೆಯಲು ಹರಸಾಹಸ; ತಾತ್ಕಾಲಿಕ ಗೇಟ್‌ ಅಳವಡಿಕೆ ಏನಾಯ್ತು? 

ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ

Advertisment

ಟಿಬಿ ಡ್ಯಾಮ್‌ಗೆ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ ಆದ ಸುದ್ದಿಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಅವರು ದೂರವಾಣಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಇಂದು ರಾತ್ರಿ ಐದು ಸ್ಟಾಪ್‌ ಪ್ಲೇಟ್‌ಗಳ ಪೈಕಿ ಮೊದಲ ಪ್ಲೇಟ್ ಅಳವಡಿಕೆ ಆಗಿದೆ. ಶನಿವಾರದೊಳಗೆ ಎಲ್ಲಾ ಐದು ಪ್ಲೇಟ್‌ಗಳನ್ನ ಅಳವಡಿಸುವುದಾಗಿ ಜಮೀರ್ ಅಹಮ್ಮದ್ ಭರವಸೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment