ನಿಮ್ಮ ನಿತ್ಯದ ಒಂದು ಕಪ್ ಇನ್​ಸ್ಟಂಟ್ ಕಾಫಿ ಆರೋಗ್ಯಕ್ಕೆ ಒಳ್ಳೆಯದಾ? ಇದರ ಅಡ್ಡ ಪರಿಣಾಮಗಳು ಏನು?

author-image
Gopal Kulkarni
Updated On
ನಿಮ್ಮ ನಿತ್ಯದ ಒಂದು ಕಪ್ ಇನ್​ಸ್ಟಂಟ್ ಕಾಫಿ ಆರೋಗ್ಯಕ್ಕೆ ಒಳ್ಳೆಯದಾ? ಇದರ ಅಡ್ಡ ಪರಿಣಾಮಗಳು ಏನು?
Advertisment
  • ಇನ್​​ಸ್ಟಂಟ್ ಕಾಫಿ ಈಗ ಹೆಚ್ಚು ಹೆಚ್ಚು ಜನಪ್ರಿಯವಾಗಿದ್ದು ಹೇಗೆ ಗೊತ್ತಾ?
  • ಈ ಕಾಫಿ ಕುಡಿಯುವುದರಿಂದ ಆಗಲಿರುವ ಆರೋಗ್ಯದ ಲಾಭಗಳೇನು?
  • ಟೈಪ್​-2 ಡಯಾಬಿಟಿಸ್​ನ್ನು ಕಾಫಿ ಕುಡಿಯುವುದರಿಂದ ನಿಯಂತ್ರಿಸಬಹುದಾ?

ಅತಿಬೇಗ ಹಾಗೂ ಸರಳವಾಗಿ ತಯಾರಾಗುವ ಯಾವುದೇ ವಸ್ತುಗಳು ಜನಪ್ರಿಯತೆ ಪಡೆಯುವ ಕಾಲ ಇದು. ಉತ್ತಮವಾದ ಹಾಗೂ ಹಳೆಯ ಇನ್​ಸ್ಟಂಟ್ ಕಾಫಿ ಜನರ ಅತ್ಯಂತ ಪ್ರಿಯವಾದ ಪಾನೀಯವಾಗಿ ಈಗಿನ ಕಾಲದಲ್ಲಿ ಗುರುತಿಸಿಕೊಂಡಿದೆ. ನಿಮ್ಮ ಅವಸರದ ಮುಂಜಾನೆಗೆ ಅತ್ಯಂತ ಬೇಗವಾಗಿ ತಯಾರಾಗಿ ನಿಮ್ಮನ್ನು ಬೂಸ್ಟ್ ಮಾಡುವ ಪಾನೀಯ ಇನ್​ಸ್ಟಂಟ್ ಕಾಫಿ. ಇದು ಆ್ಯಂಟಿ ಆಕ್ಸಿಡೆಂಟ್ಸ್​ಗಳ ಸಂಗ್ರಹ ಇದು ನಿಮ್ಮನ್ನು ಟೈಪ್ 2 ಡಯಾಬಿಟಿಸ್​ನಂತಹ ಕಾಯಿಲೆಯಿಂದ ರಕ್ಷಿಸುತ್ತದೆ ಹಾಗೂ ಕಡಿಮೆ ಮಾಡುತ್ತದೆ. ಲಿವರ್ ಕ್ಯಾನ್ಸರ್​ನಂತಹ ಕಾಯಿಲೆಗಳಿಗೆ ಇದು ರಾಮಬಾಣ ಎಂದೇ ಹೇಳಲಾಗುತ್ತದೆ. ಅದರ ಜೊತೆ ಜೊತೆಗೆ ಇದರ ಅತಿಯಾದ ಸೇವನೆಯಿಂದ ಕಾಫಿನ್ ಅಂಶ ದೇಹಕ್ಕೆ ಹೋಗುವುದರಿಂದ ಆ್ಯಂಕ್ಸೈಟಿ ಇನ್ಸ್​ಮ್ನಿಯಾದಂತಹ ಸಮಸ್ಯೆಗಳಿಗೂ ಇದು ಕಾರಣವಾಗುತ್ತೆ ಎಂದು ಕೂಡ ಹೇಳಲಾಗುತ್ತದೆ.

ಇದನ್ನೂ ಓದಿ:ಚಳಿಗಾಲ, ಹಲವು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಈ ವಿಷಯಗಳಲ್ಲಿ ನೀವು ತುಂಬಾ ಹುಷಾರಾಗಿರಿ

ಇನ್ನು ಕಾಫಿಯಲ್ಲಿ ಯಾವೆಲ್ಲಾ ಪೋಷಕಾಂಶಗಳು ಹಾಗೂ ಜೀವಸತ್ವಗಳು ಇವೆ ಅನ್ನೋದನ್ನ ನೋಡುವುದಾದ್ರೆ. ಇನ್​ಸ್ಟಂಟ್​ ಕಾಫಿಯಲ್ಲಿ 12.2 ಗ್ರಾಂ ಪ್ರೊಟೀನ್ ಇರುತ್ತದೆ. ಫೈಬರ್ ಅಂಶ ಸೊನ್ನೆ, ಒಟ್ಟು ಲಿಪಿಡ್ ಫ್ಯಾಟ್ ಅಂಶ 0.5 ಗ್ರಾಂನಷ್ಟು, ಸಕ್ಕರೆ ಅಂಶ 0 ಗ್ರಾಂನಷ್ಟು, ಕ್ಯಾಲ್ಸಿಯಂ 141 ಮಿಲಿಗ್ರಾಂ, ಐರನ್ 4.41 ಮಿಲಿಗ್ರಾಂನಷ್ಟು ಇರುತ್ತದೆ.

ಇನ್​​ಸ್ಟಂಟ್ ಕಾಫಿಯಿಂದ ಏನೆಲ್ಲಾ ಲಾಭಗಳಿವೆ

ಸರಳವಾಗಿ ತಯಾರಿಸಬಹುದು: ಇದು ಅತ್ಯಂತ ಅನುಕೂಲಕರ, ಇದನ್ನು ತಯಾರು ಮಾಡಲು ನಿಮಗೆ ಒಂದಿಷ್ಟು ಬಿಸಿನೀರು ಇಲ್ಲವೇ ಒಂದಿಷ್ಟು ಬಿಸಿ ಹಾಲು ಮಾತ್ರ ಸಾಕು. ಬೆಳಗ್ಗೆ ವಿಪರೀತ ಅವಸರಲ್ಲಿರುವವರಿಗೆ ಇದು ಅತ್ಯಂತ ಅನುಕೂಲಕರ ಹಾಗೂ ಸರಳವಾಗಿ ಮಾಡಿಕೊಳ್ಳಬಲ್ಲ ಪಾನೀಯ. ಹೀಗಾಗಿಯೇ ಇದನ್ನು ಹೆಚ್ಚು ಜನರು ಇಷ್ಟಪಡುತ್ತಾರೆ.

ಹೆಚ್ಚು ಕಾಲ ಬಾಳಿಕೆ ಬರುತ್ತದೆ:ಇನ್​ಸ್ಟಂಟ್ ಕಾಫಿಪುಡಿಯನ್ನು ಹೆಚ್ಚು ದಿನಗಳ ಕಾಲ ನಾವು ಶೇಖರಿಸಿಕೊಂಡು ಇಡಬಹುದು. ಅದಕ್ಕೆ ದೀರ್ಘಾಯುಷ್ಯವಿದೆ. ಹೀಗಾಗಿ ಇದರ ಎಕ್ಸ್​ಪೈರಿ ಡೇಟ್ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಕಡಿಮೆ ಕಾಫೀನ್ ಅಂಶ ಹೊಂದಿರುತ್ತದೆ: ಇನ್​ಸ್ಟಂಟ್ ಕಾಫಿ ಅತ್ಯಂತ ಕಡಿಮೆ ಕಾಫಿನ್ ಹೊಂದಿದ ಕಾರಣಕ್ಕೆ ಅದು ಆ್ಯಸಿಡಿಟಿಯಂತಹ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಒಂದು ಕಪ್ ಕಾಫಿಗೆ ಒಂದು ಟೇಬಲ್ ಸ್ಪೂನ್​ ಇನ್​ಸ್ಟಂಟ್ ಕಾಫಿ ಬಳಸುವುದರಿಂದ ಅದರಲ್ಲಿ ಕೇವಲ 26 ಮಿಲಿಗ್ರಾಂನಷ್ಟು ಮಾತ್ರ ಕಾಫಿನ್ ಅಂಶ ಇರುತ್ತದೆ. ಆದ್ರೆ ನಾವು ಬಳಸುವ ರೆಗ್ಯೂಲರ್ ಕಾಫಿಯಲ್ಲಿ ಸುಮಾರು 37 ಮಿಲಿಗ್ರಾಂನಷ್ಟು ಕಾಫಿನ್ ಇರುತ್ತದೆ.

ಮೂಡ್​ ಬೂಸ್ಟ್ ಮಾಡುತ್ತದೆ: ಇನ್​ಸ್ಟಂಟ್ ಕಾಫಿಗೆ ಇರುವ ಅತ್ಯಂತ ಪ್ರಮುಖವಾದ ಗುಣ ಅಂದ್ರೆ ಅದು ಕಾಫಿ ಪ್ರಿಯರ ಮೂಡ್ ಬೂಸ್ಟ್ ಮಾಡುತ್ತದೆ. ಇದು ಮೆದುಳಿನ ಕಾರ್ಯ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರುವುದರಿಂದ ಮನಸ್ಥಿತಿ ಸದಾ ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ:ಏನಿದು ಕ್ಲಿನಿಕಲ್ ಡಿಪ್ರೆಶನ್​? ಈ ಖಿನ್ನತೆ ಆವರಿಸಿಕೊಳ್ಳುವುದು ಏಕೆ? ಈ ಬಗ್ಗೆ ತಜ್ಞ ವೈದ್ಯರು ಏನು ಹೇಳುತ್ತಾರೆ?

ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುತ್ತದೆ: ಜನರು ನಿತ್ಯ ಕನಿಷ್ಠ ಒಂದು ಕಪ್ ಕಾಫಿ ಕುಡಿಯುವುದರಿಂದ ಟೈಪ್​ 2 ಡಯಾಬಿಟಿಸ್​ ಬರುವುದನ್ನು ಶೇಕಡಾ 11 ರಷ್ಟು ತಡೆಯುತ್ತದೆ ಎಂದು ಹಲವು ಅಧ್ಯಯನಗಳು ವರದಿ ಮಾಡಿವೆ.ಇನ್ನು ಕಾಫಿ ಕುಡಿಯವ ಅಭ್ಯಾಸವನ್ನು ನಿಲ್ಲಿಸದೇ ಇದ್ದಲ್ಲಿ ಜರ್ನಲ್ ನ್ಯೂಟ್ರಿಷನ್​ ಅಧ್ಯಯನದ ಪ್ರಕಾರ ಇದು ಡಯಾಬಿಟಿಸ್ ಬಾರದಂತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗಿದೆ. ಇದು ಇನ್ಸೂಲಿನ್ ಸೆನ್ಸಿಟಿವಿಟಿಯನ್ನು ಕಡಿಮೆ ಮಾಡುತ್ತದೆ.
ಇನ್​ಸ್ಟಂಟ್ ಕಾಫಿ ಕುಡಿಯುವುದರಿಂದ ಅನೇಕ ರೀತಿಯ ಲಾಭಗಳು ಇವೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಈ ಕಾಫಿ ತುಂಬಾನೇ ಒಳ್ಳೆಯದು. ಹೀಗಾಗಿ ದಿನಕ್ಕೆ ಒಂದು ಕಪ್ ಆದ್ರೂ ಕಾಫಿ ಕುಡಿಯುವ ಅಭ್ಯಾಸವನ್ನು ನಾವಿಟ್ಟುಕೊಳ್ಳುವುದು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment