newsfirstkannada.com

ಲೋಕಸಭೆ ಬಿಜೆಪಿ ಮಾಸ್ಟರ್​​​ ಪ್ಲಾನ್​​; ಶೋಭಾ ಕರಂದ್ಲಾಜೆ ಬದಲಿಗೆ ಸಿಟಿ ರವಿಗೆ ಟಿಕೆಟ್​​..?

Share :

Published January 12, 2024 at 6:08am

    ಹಾಲಿ ಸಂಸದರ ಮೌಲ್ಯಮಾಪನಕ್ಕೆ ರಾಜ್ಯ ಬಿಜೆಪಿ ಮುಂದು

    ಕರ್ನಾಟಕ ಲೋಕಸಭೆ ಎಲೆಕ್ಷನ್​ನಲ್ಲಿ ಹೊಸ ಪ್ರಯೋಗ

    ಪ್ರತಾಪ್ ಸಿಂಹಗೆ ಸ್ವಪಕ್ಷದಲ್ಲೇ ಹುಟ್ಟಿಕೊಂಡ್ರಾ ವಿರೋಧಿಗಳು?

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಚಟುವಟಿಕೆ ಗರಿಗೆದರಿದೆ. ವಿಧಾನಸಭೆ ಸೋಲಿನ ಸೇಡಿ ತೀರಿಸಿಕೊಳ್ಳಲು ಪಣ ತೊಟ್ಟಿರುವ ರಾಜ್ಯ ಬಿಜೆಪಿ ನಾಯಕರು ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಎರಡು ದಿನಗಳಿಂದ ಸಿದ್ಧತಾ ಸಭೆ ನಡೆಸುತ್ತಿದ್ದು, ಪದಾಧಿಕಾರಿಗಳ ಮೂಲಕ ಹಾಲಿ ಸಂಸದರ ಮೌಲ್ಯಮಾಪನಕ್ಕೆ ಮುಂದಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಮತ್ತೊಂದು ರಾಜಕೀಯ ಮಹಾ ಸಂಗ್ರಾಮಕ್ಕೆ ದೇಶ ಸಾಕ್ಷಿಯಾಗಲಿದೆ. ಬಲಿಷ್ಠ ಪಕ್ಷಗಳ ರೋಚಕ ಹೋರಾಟಕ್ಕೆ ರಾಜ್ಯದಲ್ಲೂ ಅಖಾಡ ಸಜ್ಜಾಗ ತೊಡಗಿದೆ. ವಿಧಾನಸಭೆ ಸೋಲಿನಿಂದ ಪಾಠ ಕಲಿತಿರುವ ರಾಜ್ಯ ಕೇಸರಿ ಬ್ರಿಗೇಡ್, ಹಾಲಿ ಸಂಸದರ ಮೌಲ್ಯಮಾಪನಕ್ಕೆ ಮುಂದಾಗಿದೆ.

ಬೆಂಗಳೂರಿನ ಯಲಹಂಕ ಬಳಿ ಖಾಸಗಿ ರೆಸಾರ್ಟ್​ನಲ್ಲಿ ಬಿಜೆಪಿ ಎರಡು ದಿನಗಳ ಲೋಕಸಭೆ ಚುನಾವಣೆ ಸಿದ್ಧತಾ ಸಭೆಯನ್ನು ಮಾಡ್ತಿದೆ. 2ನೇ ದಿನವಾದ ಇವತ್ತು ಮಂಗಳೂರು, ಬೆಂಗಳೂರು, ಧಾರವಾಡ ಹಾಗೂ ಕಿತ್ತೂರು ಕ್ಲಸ್ಟರ್​ಗಳ ವ್ಯಾಪ್ತಿಗೆ ಬರುವ 15 ಜಿಲ್ಲೆಗಳಲ್ಲಿ ಗೆಲುವಿನ ತಂತ್ರದ ಬಗ್ಗೆ ಚರ್ಚೆ ನಡೆದಿದೆ. ಮೊದಲ ದಿನವಾದ ನಿನ್ನೆ 13 ಕ್ಲಸ್ಟರ್​ಗಳಲ್ಲಿ ಬರುವ ಲೋಕಸಭಾ ಕ್ಷೇತ್ರಗಳ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದೆ. ಕ್ಷೇತ್ರದಲ್ಲಿ ಗೆಲುವಿಗೆ ಯಾವ ರೀತಿ ರಣತಂತ್ರ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿತ್ತು. ಇದೇ ವೇಳೆ ಟಿಕೆಟ್ ನೀಡುವ ಹಿತದೃಷ್ಟಿಯಿಂದ ಹಾಲಿ ಸಂಸದರ ಮೌಲ್ಯಮಾಪನವನ್ನು ಮಾಡಿ, ಅಭಿಪ್ರಾಯ ಸಂಗ್ರಹಿಸಿದೆ. ಅನೇಕ ಹಾಲಿ‌ ಸಂಸದರ ಪುನರ್ ಆಯ್ಕೆಗೆ ಅಪಸ್ವರ ವ್ಯಕ್ತಪಡಿಸಿದ್ದಾರೆ.

ಶೋಭಾ ಕರಂದ್ಲಾಜೆ ಬದಲು ಸಿ.ಟಿ.ರವಿಗೆ ಟಿಕೆಟ್​ ನೀಡಲು ಒತ್ತಾಯ

ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯ ಕೇಸರಿ ಪಡೆಯಲ್ಲಿ ಟಿಕೆಟ್​ ಫೈಟ್​ ಜೋರಾಗಿದೆ. ಹಾಲಿ ಸಂಸದರು ಪುನರ್​ ಆಯ್ಕೆ ಬಯಸಿದ್ರೆ, ಇನ್ನೂ ಕೆಲವರು ನಮಗೂ ಟಿಕೆಟ್​ ಬೇಕೆಂದು ಒತ್ತಡ ಹಾಕಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್​ಗೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ. ಪ್ರಮೋದ್ ಮಧ್ವ ರಾಜ್, ಜೀವರಾಜ್ ಕೂಟ ಕಣ್ಣಿಟ್ಟಿದ್ದು, ಜಯಪ್ರಕಾಶ್‌ ಶೆಟ್ಟಿ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಸಿ.ಟಿ.ರವಿ ಕಣಕ್ಕಿಳುಸವಂತೆ ಆಗ್ರಹ ಕೇಳಿ ಬಂದಿದೆ. ಇವತ್ತಿನ ಸಭೆಗೆ ಶೋಭಾ ಕರಂದ್ಲಾಜೆ ಗೈರಾಗಿದ್ದು, ಕುತೂಹಲ ಮೂಡಿಸಿದೆ. ಇನ್ನು ಉತ್ತರ ಕನ್ನಡ ಕ್ಷೇತ್ರದಿಂದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಯೇ ಮತ್ತೊಮ್ಮೆ ಸ್ಪರ್ಧೆ ಮಾಡುವಂತೆಯೂ ಸಭೆಯಲ್ಲಿ ಕೆಲವರಿಂದ ಬೆಂಬಲ ವ್ಯಕ್ತವಾಗಿದೆ. ಇನ್ನು ಮಾಜಿ ಸಚಿವ ವಿಶ್ವೇಶ್ವರ ಕಾಗೇರಿ ಹೆಗಡೆ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ಸಂಸದ ಪ್ರತಾಪ್​ ಸಿಂಹ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬಂದ ಹಿನ್ನೆಲೆ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಟಿಕೆಟ್​ ಫೈಟ್​ ಶುರುವಾಗಿದೆ. ಹಾಲಿ ಸಂಸದ ಪ್ರತಾಪ್​ ಸಿಂಹ ವಿರುದ್ಧ ಮಾಜಿ ಸಚಿವ ವಿಜಯ್​ಕುಮಾರ್​ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ ಎಂದು ತಿಳಿದುಬಂದಿದೆ. ನಾನೂ ಪ್ರಬಲ ಆಕಾಂಕ್ಷಿ. ಪಕ್ಷದ ಬಲವರ್ಧನೆಗೆ ವರಿಷ್ಠರು ನನಗೆ ಕೆಲಸ ಮಾಡಲು ಹೇಳಿದ್ದಾರೆ. ನಾನೂ ಕೂಡ ಟಿಕೆಟ್​ ಆಕಾಂಕ್ಷಿ ಎಂದು ನಾಯಕರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹೈಕಮಾಂಡ್​ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿ, ಭಾರೀ ಮುಖಭಂಗ ಅನುಭವಿಸಿತ್ತು. ಹೀಗಾಗಿ ಲೋಕಸಭೆಯಲ್ಲಿ ಭರ್ಜರಿ ಗೆಲವು ಸಾಧಿಸಬೇಕೆಂದು ಪಣ ತೊಟ್ಟಿರುವ ಕೇಸರಿ ಪಡೆ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಈ ಮೂಲಕ ಹಳೆ ಹುಲಿಗಳನ್ನೇ ಕಣಕ್ಕಿಳಸಬೇಕಾ? ಅಥವಾ ಹೊಸ ಕಲಿಗಳಿಗೆ ಮಣೆ ಹಾಕಬೇಕಾ? ಅನ್ನೋ ಬಗ್ಗೆ ಲೆಕ್ಕಾಚಾರ ಹಾಕುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಬಿಜೆಪಿ ಮಾಸ್ಟರ್​​​ ಪ್ಲಾನ್​​; ಶೋಭಾ ಕರಂದ್ಲಾಜೆ ಬದಲಿಗೆ ಸಿಟಿ ರವಿಗೆ ಟಿಕೆಟ್​​..?

https://newsfirstlive.com/wp-content/uploads/2024/01/ct-ravi-1.jpg

Load More