ಬರೋಬ್ಬರಿ 5 ಸಾವಿರ ಉದ್ಯೋಗಿಗಳಿಗೆ ಗೇಟ್​ ಪಾಸ್.. ಯಾವ ಕಂಪನಿ? ಕಾರಣವೇನು?

author-image
Veena Gangani
Updated On
ಬರೋಬ್ಬರಿ 5 ಸಾವಿರ ಉದ್ಯೋಗಿಗಳಿಗೆ ಗೇಟ್​ ಪಾಸ್.. ಯಾವ ಕಂಪನಿ? ಕಾರಣವೇನು?
Advertisment
  • ನಾಲ್ಕು ರಾಜ್ಯಗಳಲ್ಲಿ 5 ಸಾವಿರ ಮಂದಿಗೆ ಇಂಟೆಲ್ ಲೇ ಆಫ್
  • ಕ್ಯಾಲಿಪೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಬಿಗ್ ಶಾಕ್​
  • 1,935 ಮಂದಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ

ಇಂಟೆಲ್ ಕಂಪನಿಯು ಬರೋಬ್ಬರಿ 5 ಸಾವಿರ ಉದ್ಯೋಗಿಗಳಿಗೆ ಲೇ ಆಫ್ ನೀಡಲಾಗುತ್ತಿದೆ ಎಂದು ಈ ವಾರ ಘೋಷಿಸಿದೆ. ಈ ಮೊದಲು ಕಂಪನಿಯಿಂದ 4 ಸಾವಿರ ಉದ್ಯೋಗಿಗಳಿಗೆ ಲೇ ಆಫ್ ನೀಡಲಾಗುತ್ತೆ ಎಂದು ಅಂದಾಜಿಸಲಾಗಿತ್ತು. ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಲೇ ಆಫ್ ನೀಡುತ್ತಿದೆ.

ಇದನ್ನೂ ಓದಿ: ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿ ದರ್ಶನ್​​ಗೆ ಜಾಮೀನು ನೀಡಿಲ್ಲ -ಸುಪ್ರೀಂ ಕೋರ್ಟ್​ ಅತೃಪ್ತಿ

publive-image

ವರ್ಕ್ ಅಡ್ಜಸ್ಟಮೆಂಟ್ ಮತ್ತು ರೀಟ್ರೀವಿಂಗ್ ನೋಟಿಫೀಕೇಷನ್ ಕಾಯಿದೆಯಡಿ ಅಮೆರಿಕಾದಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಅಮೆರಿಕಾದ ಒರೆಗಾವ್, ಕ್ಯಾಲಿಪೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕ್ಯಾಲಿಪೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ನೀಡಿದ್ದ ಲೇ ಆಫ್ ಅನ್ನು ಡಬಲ್ ಮಾಡಿದ್ದು, 1,935 ಮಂದಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ.

ಒರೆಗಾವ್ ಕಚೇರಿಯಲ್ಲಿ ತನ್ನ ಲೇ ಆಫ್ ಅನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು, 2,392 ಮಂದಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಒರೆಗಾವ್​ನಲ್ಲಿ ಇಂಟೆಲ್ ಕಂಪನಿಯೇ ಹೆಚ್ಚು ಮಂದಿಗೆ ಉದ್ಯೋಗ ನೀಡಿತ್ತು. ಆದರೇ, ಈಗ ಇಂಟೆಲ್ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಅಮೆರಿಕಾದ ಅರಿಜೋನಾದ ಕಚೇರಿಯಲ್ಲಿ 696 ಮಂದಿಯನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಇದರಿಂದಾಗಿ ಅಮೆರಿಕಾದ ನಾಲ್ಕು ರಾಜ್ಯಗಳಲ್ಲಿ ಬರೋಬ್ಬರಿ 5 ಸಾವಿರ ಮಂದಿಗೆ ಇಂಟೆಲ್ ಲೇ ಆಫ್ ನೀಡಿದಂತೆ ಆಗಿದೆ.

publive-image

ಇಂಟೆಲ್ ಕಂಪನಿಯ ಹೊಸ ಸಿಇಓ ಲಿಪ್ ಬು ಟನ್ ಅವರು ಕಂಪನಿಯನ್ನು ಪುನರ್ ರಚನೆ ಮಾಡುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿದ್ದಾರೆ. ಇಂಟೆಲ್ ಕಂಪನಿಯನ್ನು ಚಿಕ್ಕ ಮತ್ತು ಪರಿಣಾಮಕಾರಿಯಾಗಿ ರೂಪಿಸಲು ಲಿಪ್ ಬು ಟನ್ ನಿರ್ಧರಿಸಿದ್ದಾರೆ. ಚಿಪ್​ಗಳನ್ನು ತಯಾರಿಸುವ ಇಂಟೆಲ್ ಕಂಪನಿಯು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳ ವಿರುದ್ಧ ಹಿಂದೆ ಬೀಳುತ್ತಿದೆ. ಹೀಗಾಗಿ ಕಂಪನಿಯ ಸಂಕೀರ್ಣತೆಯನ್ನು ಕಡಿಮೆ ಮಾಡಲು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಲೇ ಆಫ್ ಗಳನ್ನು ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಒರೆಗಾವ್​ನಲ್ಲೇ ಸ್ಥಳೀಯ ಉದ್ಯೋಗಿಗಳ ಪೈಕಿ ಶೇ.12 ರಷ್ಟು ಮಂದಿಯನ್ನು ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳಿಸಲಾಗಿದೆ. ಚಿಪ್ ಡಿಸೈನ್, ಕ್ಲೌಡ್ ಸಾಫ್ಟ್ ವೇರ್, ಮ್ಯಾನ್ಯುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಬ್ಯುಸಿನೆಸ್ ಮುಖ್ಯಸ್ಥರು, ಐಟಿ ವೈಸ್ ಪ್ರೆಸಿಡೆಂಟ್​ಗಳು ಸೇರಿದಂತೆ ಇಂಜಿನಿಯರ್​ಗಳನ್ನು ಮನೆಗೆ ಕಳಿಸಲಾಗಿದೆ. ಚಿಪ್ ಮ್ಯಾನ್ಯುಫ್ಯಾಕ್ಟರಿಂಗ್ ವಿಭಾಗದಲ್ಲಿ ಶೇ.20 ರಷ್ಟು ಮಂದಿಗೆ ಗೇಟ್ ಪಾಸ್ ನೀಡಲಾಗುತ್ತಿದೆ.

2025ರ ಮೊದಲ ಆರು ತಿಂಗಳಲ್ಲೇ ಜಾಗತಿಕ ಮಟ್ಟದಲ್ಲಿ ವಿವಿಧ ಐ.ಟಿ. ಕಂಪನಿಗಳು ಒಂದು ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ. ಮೈಕ್ರೋಸಾಫ್ಟ್ ಕಂಪನಿಯು ಬರೋಬ್ಬರಿ 9 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿ ಲೇ ಆಫ್ ನೀಡಿದೆ. ಹೀಗೆ ಬೇರೆ ಬೇರೆ ಕಂಪನಿಗಳಿಂದ ಒಟ್ಟಾರೆ ಒಂದು ಲಕ್ಷ ಮಂದಿ ಐ.ಟಿ. ಕ್ಷೇತ್ರದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಐ.ಟಿ. ವಲಯದಲ್ಲಿ ಕೆಲಸ ಗ್ಯಾರಂಟಿ ಎಂದು ಹಿಂದೆ ಹೇಳುತ್ತಿದ್ದರು. ಆದರೇ, ಈಗ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಬೇರೆ ದಾರಿ ಇಲ್ಲದೇ, ನಷ್ಟ ಕಡಿಮೆ ಮಾಡಿಕೊಳ್ಳಲು ಉದ್ಯೋಗಿಗಳನ್ನು ಮುಲಾಜಿಲ್ಲದೇ, ತೆಗೆದು ಹಾಕಿ ಮನೆಗೆ ಕಳಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment