ಕೇಸ್​​ವೊಂದರಲ್ಲಿ ಡ್ರೋನ್​ ಪ್ರತಾಪ್​ ಅರೆಸ್ಟ್​; ಪೊಲೀಸರಿಂದ ತೀವ್ರ ವಿಚಾರಣೆ

author-image
Veena Gangani
Updated On
ಕೇಸ್​​ವೊಂದರಲ್ಲಿ ಡ್ರೋನ್​ ಪ್ರತಾಪ್​ ಅರೆಸ್ಟ್​; ಪೊಲೀಸರಿಂದ ತೀವ್ರ ವಿಚಾರಣೆ
Advertisment
  • ಮತ್ತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ ಡ್ರೋನ್ ಪ್ರತಾಪ್
  • ಸೈನ್ಸ್ ವಿಡಿಯೋ ಹೆಸರಿನಲ್ಲಿ ಡ್ರೋಣ್ ಪ್ರತಾಪ್ ಹುಚ್ಚಾಟ
  • ನೀರಿಗೆ ಸೋಡಿಯಂ ಮೆಟಲ್ ಹಾಕಿ ಬ್ಲಾಸ್ಟ್ ಮಾಡಿದ ಡ್ರೋನ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಸ್ಪರ್ಧಿಯಾಗಿದ್ದ ಡ್ರೋನ್​ ಪ್ರತಾಪ್​ ಸಖತ್​ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಡ್ರೋನ್​ ಪ್ರತಾಪ್​ ನಡೆಸಿರೋ ಸೈನ್ಸ್ ಎಕ್ಸ್​​ಪೆರಿಮೆಂಟ್​​ 100% ವರ್ಕೌಟ್​​ ಆಗ್ಬಿಟ್ಟಿದೆ. ​ಆದ್ರೀಗ ಇದೇ ಎಕ್ಸ್​​ಪೆರಿಮೆಂಟ್​​ ಪರಿಸರ ಪ್ರೇಮಿಗಳನ್ನ ಕೆರಳಿಸಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಗರಂ ಆಗಿದ್ದಾರೆ.

ಇದನ್ನೂ ಓದಿ:ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್​; ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ

ಕೃಷಿ ಹೊಂಡದಂತಿರೋ ಆಳವಾದ ದೊಡ್ಡ ಗುಂಡಿಯಲ್ಲಿರೋ ನೀರಿಗೆ ಸೋಡಿಯಂ ಮೆಟಲ್ ಹಾಕಿ ಬ್ಲಾಸ್ಟ್ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಿರೋ ಈ ವಿಡಿಯೋ ನೋಡಿದ ಪರಿಸರ ಪ್ರೇಮಿಗಳು ಡ್ರೋನ್​ ಪ್ರತಾಪ್​ ವಿರುದ್ಧ ಸಿಡಿದೆದ್ದಿದ್ದಾರೆ.

‘ಬ್ರೋ ಇನ್ನು ದೊಡ್ಡ ದೊಡ್ಡ ಎಕ್ಸ್​​ಪೆರಿಮೆಂಟ್​​ ಮಾಡಿ ಒಳ್ಳೆಯದಾಗ್ಲಿ, ಆದ್ರೆ ದಯವಿಟ್ಟು ಈ ಥರ ವಿಡಿಯೋಸ್​ ಪೋಸ್ಟ್​ ಮಾಡ್ಬೇಡಿ. ಈ ಟ್ರಿಕ್ಸ್​​ ನೋಡಿದವರಲ್ಲಿ ಒಳ್ಳೆ ಕೆಲಸಕ್ಕಿಂತ ಕೆಟ್ಟ ಕೆಲಸಕ್ಕೆ ಬಳಸೋರೆ ಜಾಸ್ತಿ. ಇದರಿಂದ ಪರಿಸರಕ್ಕೆ ಹಾಗೂ ಜಲಚರ ಜೀವಿಗಳಿಗೆ ಅಪಾಯ ಹೆಚ್ಚು. ಈಗಾಗ್ಲೇ ಕೇಪ್​ ಅನ್ನೋ ಸಿಡಿ ಮದ್ದಿನ ಹಾವಳಿ ಜಾಸ್ತಿ ಆಗಿದೆ’

ಪ್ರತಾಪ್​ ಅವರಲ್ಲಿ ನನ್ನದೊಂದು ಪ್ರಶ್ನೆ, ನಿಮ್ಮ ಪ್ರಯೋಗ ಅದ್ಭುತವಾಗಿತ್ತು. ಆದ್ರೆ ನಿಮ್ಮ ಪ್ರಯೋಗದ ನಂತರ ಆ ಹೊಂಡದಲ್ಲಿನ ನೀರನ್ನು ಬದಲಾಯಿಸಿದ್ದೀರಾ? ಯಾಕಂದ್ರೆ ಆ ನೀರನ್ನ ನಿಮ್ಮ ಹಳ್ಳಿಯ ಪ್ರಾಣಿ, ಪಕ್ಷಿಗಳು ಸೇವಿಸಬಹುದು ಅವುಗಳಿಗೆ ಆರೋಗ್ಯದ ಮೇಲೆ ಕೆಮಿಕಲ್​ ಪರಿಣಾಮ ಬೀರಬಹುದು. ಇಷ್ಟೇ ಅಲ್ಲ ಎಕ್ಸ್​​ಪೆರಿಮೆಂಟ್​​ ಮೂಲಕ ಡ್ರೋನ್​ ಪ್ರತಾಪ್​ ಸಮಾಜಕ್ಕೆ ತಪ್ಪು ಸಂದೇಶ ಕೊಡ್ತಿದ್ದಾರೆ ಅಂತ ಸಾರ್ವಜನಿಕರು ಗರಂ ಆಗಿದ್ದಾರೆ.

publive-image

ಇದನ್ನೂ ಓದಿ: ‘ಇಷ್ಟು ದಿನ ಸಹಿಸಿಕೊಂಡೆ, ಇನ್ಮೇಲೆ ಸಹಿಸಲ್ಲ’- ಸಾಯಿ ಪಲ್ಲವಿ ಎಚ್ಚರಿಕೆ

ಆದರೆ ನೀರಿನಲ್ಲಿ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದ ಕೇಸ್​ನಲ್ಲಿ ಮಾಜಿ ಬಿಗ್​ ಸ್ಪರ್ಧಿ ಡ್ರೋನ್​ ಪ್ರತಾಪ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸ್ಫೋಟಕ ವಸ್ತು ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಬಂಧನವಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್​ನನ್ನು ಬಂಧಿಸಿದ್ದಾರೆ. ವಿಡಿಯೋ ಆಧರಿಸಿ ಎಫ್​ಐಆರ್​ ಮಾಡಲಾಗಿದೆ. ಮಿಡಿಗೇಶಿ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಪ್ರತಾಪ್ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment