/newsfirstlive-kannada/media/post_attachments/wp-content/uploads/2025/04/RBI-And-money.jpg)
ನವದೆಹಲಿ: ಕಳೆದ 5 ವರ್ಷದಿಂದ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಪಡೆದವರಿಗೆ ರಿಲೀಫ್ ಸಿಕ್ಕಿರಲಿಲ್ಲ. ಆದರೆ ಈ ವರ್ಷ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ರಿಲೀಫ್ ಸಿಗೋದು ಪಕ್ಕಾ ಆಗಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ RBI 25 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತ ಮಾಡಿತ್ತು. ಇದೀಗ ಏಪ್ರಿಲ್ 7-9ರವರೆಗೆ RBIನ ದ್ವೈಮಾಸಿಕ ಹಣಕಾಸು ನೀತಿ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಮತ್ತೆ 25 ಬೇಸಿಸ್ ಪಾಯಿಂಟ್ ರೆಪೋ ದರ ಕಡಿಮೆ ಆಗೋದು ನಿಶ್ಚಿತವಾಗಿದೆ. ಅಷ್ಟೇ ಅಲ್ಲ 2025ರ ಒಳಗೆ 100 ಬೇಸಿಸ್ ಪಾಯಿಂಟ್‌ನಷ್ಟು ರೆಪೋ ದರ ಕಡಿತ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಉಳಿತಾಯ ಖಾತೆಯಲ್ಲಿ ಎಷ್ಟು ಲಕ್ಷದವರೆಗೆ ಡೆಪಾಸಿಟ್ ಮಾಡಬಹುದು? RBI ರೂಲ್ಸ್ ಏನು? ಓದಲೇಬೇಕಾದ ಸ್ಟೋರಿ!
RBI ರೆಪೋ ದರ ಕಡಿತ ಮಾಡುವ ಈ ಮಹತ್ವದ ನಿರ್ಧಾರದಿಂದ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ಸಿಗುವ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತೆ. ಈ ಲಾಭವನ್ನು ವಾಣಿಜ್ಯ ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಹೀಗಾಗಿ ಗ್ರಾಹಕರಿಗೆ ನೀಡುವ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿದರವನ್ನು ಬ್ಯಾಂಕ್‌ಗಳು ಕಡಿತ ಮಾಡುತ್ತವೆ.
ಬಡ್ಡಿದರ ಎಷ್ಟು ಕಡಿಮೆ?
RBI ರೆಪೋ ದರ ಕಡಿತ ಮಾಡುವುದರಿಂದ ಗ್ರಾಹಕರ ಸಾಲದ ಬಡ್ಡಿ ದರ ಶೇಕಡಾ 1ರಷ್ಟು ಕಡಿತವಾಗುವ ಸಾಧ್ಯತೆ ಇದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಶೇ.1ರಷ್ಟು ಕಡಿಮೆಯಾದರೆ ಜನಸಾಮಾನ್ಯರಿಗೆ ಬಿಗ್ ರಿಲೀಫ್ ಸಿಗಲಿದೆ. ಸಾಲಗಾರರು ಬ್ಯಾಂಕ್ ಬಡ್ಡಿ ದರದ ಹೊರೆಯಿಂದ ಸ್ವಲ್ಪ ನಿಟ್ಟುಸಿರು ಬಿಡುತ್ತಾರೆ.
ಭಾರತದಲ್ಲಿ ಕೋವಿಡ್ ಸಂದರ್ಭದಲ್ಲಿ ಬ್ಯಾಂಕ್ ಬಡ್ಡಿದರ ಕಡಿಮೆಯಾಗಿತ್ತು. ಆದಾದ ಬಳಿಕ ಬ್ಯಾಂಕ್ ಸಾಲಗಳ ಬಡ್ಡಿ ದರ ಕಡಿಮೆಯಾಗಿರಲಿಲ್ಲ. 5 ವರ್ಷಗಳ ಬಳಿಕ ಬ್ಯಾಂಕ್ ಸಾಲಗಳ ಬಡ್ಡಿ ದರ ಕಡಿಮೆಯಾಗುತ್ತಿರುವುದು ಆರ್ಥಿಕತೆಯ ಮೇಲೆ ಮಹತ್ವದ ಪಾತ್ರವಹಿಸಲಿದೆ.
ರೆಪೋ ದರ ಎಂದರೇನು?
ರೆಪೋ ದರವು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸರ್ಕಾರಿ ಭದ್ರತೆಗಳ ವಿರುದ್ಧ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾಗಿದೆ. ಈ ದರವು ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಣದುಬ್ಬರ ಮತ್ತು ದ್ರವ್ಯತೆಯನ್ನು ನಿಯಂತ್ರಿಸುವ ಮೂಲಕ ಸಾಲದ ದರಗಳು, ಹೂಡಿಕೆ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ