newsfirstkannada.com

ಮತ್ತೆ ಮುನ್ನೆಲೆಗೆ ಬಂದ ನಿತ್ಯಾನಂದ ಪ್ರಕರಣ, ಸ್ಪಷ್ಟನೆ ಕೇಳಿದ ಇಂಟರ್ ಪೊಲ್; ಅರೆಸ್ಟ್​ ಆಗ್ತಾರಾ ಕೈಲಾಸ ಅಧಿಪತಿ?

Share :

Published August 31, 2023 at 8:41pm

Update August 31, 2023 at 8:46pm

    ನಿತ್ಯಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣ

    ಕಾನೂನಾತ್ಮಕ ಪ್ರಕ್ರಿಯೆ ಬಗ್ಗೆ ಇಂಟರ್ ಪೋಲ್ ಮಾಹಿತಿ

    ನಿತ್ಯಾನಂದನನ್ನ ಅರೆಸ್ಟ್ ಮಾಡಿ ದೇಶಕ್ಕೆ ಕರೆ ತರ್ತಾರಾ?

ನಿತ್ಯಾನಂದ ಸ್ವಯಂಘೋಷಿತ ದೇವಮಾನವ. ಕೈಲಾಸ ಅಧಿಪತಿಯ ಇದೇ ಹೆಸ್ರು ಇದೀಗ ಮತ್ತೆ ಮುನ್ನಲೆಗೆ ಬಂದ್ಬಿಟ್ಟಿದೆ. ದೇಶ ತೊರೆದಿರುವ ನಿತ್ಯಾನಂದನಿಗಾಗಿ ಪೊಲೀಸರು ತಲಾಶ್ ನಡೆಸಿದೆ.

ಹೌದು, ಆತ್ಯಾಚಾರ ಆರೋಪ ಸೇರಿ ವಿವಿಧ ಪ್ರಕರಣಗಳಲ್ಲಿ ಈ ಸ್ವಯಂಘೋಷಿತ ದೇವಮಾನವನ ಹೆಸರು ಕೇಳಿಬಂದಿತ್ತು. ಹಲವು ಆರೋಪ ಹೊತ್ತಿಕೊಂಡು ದೇಶದಿಂದ ತಲೆಮರೆಸಿಕೊಂಡಿರುವ ಬಿಡದಿ ನಿತ್ಯಾನಂದಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್ ಪೊಲ್ ಕರ್ನಾಟಕ ಪೊಲೀಸರಿಂದ ಸ್ಪಷ್ಟನೆ ಕೇಳಿದೆ.

ನಿತ್ಯಾನಂದನಿಗೆ ಸಂಕಷ್ಟ

ಇನ್ನು ತನಿಖೆ‌ ನಡೆಸುತ್ತಿರುವ ಸಿಐಡಿಯು ಇಂಟರ್ ಪೊಲ್ ಕೇಳಿದ ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಿದೆ. ನಿತ್ಯಾನಂದ ವಿರುದ್ಧ ದಾಖಲಾಗಿರುವ ಪ್ರಕರಣ, ಅಪರಾಧದ ಸ್ವರೂಪ, ಇರುವ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಇಂಟರ್ ಪೋಲ್ ಮಾಹಿತಿ ಕೇಳಿದೆ ಎನ್ನಲಾಗಿದ್ದು, ಈ ಸಂಬಂಧ ಪ್ರತಿಯಾಗಿ ಸಿಐಡಿ ಸ್ಪಷ್ಟನೆ ನೀಡಿ ಪತ್ರ ಬರೆದಿದೆ.

ಒಟ್ಟಿನಲ್ಲಿ ಇಷ್ಟು ದಿನ ಸುಮ್ಮನಿದ್ದ ಅಧಿಕಾರಿಗಳು ಈಗ ಕೇಸ್ ಕೆದುಕುತ್ತಿರೋದನ್ನ ನೋಡಿದ್ರೆ, ನಿತ್ಯಾನಂದನನ್ನ ಅರೆಸ್ಟ್ ಮಾಡಿ ದೇಶಕ್ಕೆ ಕರೆ ತರ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಮುನ್ನೆಲೆಗೆ ಬಂದ ನಿತ್ಯಾನಂದ ಪ್ರಕರಣ, ಸ್ಪಷ್ಟನೆ ಕೇಳಿದ ಇಂಟರ್ ಪೊಲ್; ಅರೆಸ್ಟ್​ ಆಗ್ತಾರಾ ಕೈಲಾಸ ಅಧಿಪತಿ?

https://newsfirstlive.com/wp-content/uploads/2023/08/Nithyananda.jpg

Load More