/newsfirstlive-kannada/media/post_attachments/wp-content/uploads/2025/06/RCB-31.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಕೆಎಸ್​ಸಿಎ ( Karnataka State Cricket Association) ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಕೋರ್ಟ್​, ಪ್ರಕರಣದ ಎರಡು, ಮೂರು ಮತ್ತು ನಾಲ್ಕನೇ ಆರೋಪಿಗಳ ಮೇಲೆ ಬಲವಂತದ ಕ್ರಮಬೇಡ ಎಂದು ಮಧ್ಯಂತರ ತೀರ್ಪು ನೀಡಿದೆ. ಅಲ್ಲದೇ ಆರೋಪಿಗಳಿಗೆ ತನಿಖೆಗೆ ಸಹಕರಿಸಬೇಕು ಎಂದಿರುವ ಕೋರ್ಟ್​, ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ.
ವಾದ-ಪ್ರತಿವಾದ..
ನ್ಯಾಯಮೂರ್ತಿ ಕೃಷ್ಣ ಕುಮಾರ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಪ್ರಕರಣ ಸಂಬಂಧ ಒಟ್ಟು ಮೂರು ಎಫ್ಐಆರ್​ಗಳು ದಾಖಲಾಗಿವೆ ಎಂದು ಎಜಿ ಶಶಿಕಿರಣ್ ಶೆಟ್ಟಿ ಹೈಕೊರ್ಟ್​ಗೆ ತಿಳಿಸಿದರು. ಅದಕ್ಕೆ KSCA ಪರ ವಕೀಲ ಶ್ಯಾಮ್ ಸುಂದರ್, ಒಂದೇ ಘಟನೆಗೆ ಹಲವು ಎಫ್ಐಆರ್​ಗಳು ಯಾಕೆ?. ಎಲ್ಲಾ ಎಫ್ಐಆರ್​​ಗಳನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಆರ್​ಸಿಬಿ, ಡಿಎನ್ಎ ಮ್ಯಾನೇಜ್ಮೆಂಟ್ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಾದಿಸಿದರು.
ಆಗ ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆಯಾ ಅಂತಾ ಜಸ್ಟೀಸ್ ಪ್ರಶ್ನೆ ಮಾಡಿದರು. ‘ಹೌದು, ಆದೇಶ ಮಾಡಲಾಗಿದೆ. 15 ದಿನದೊಳಗೆ ವರದಿಗೆ ಸೂಚಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಏಕಸದಸ್ಯ ಸಮಿತಿ ರಚನೆ ಆಗಿದೆ. ಆರ್​ಸಿಬಿಯಿಂದ ಒಬ್ಬರು ಡಿಎನ್ಎ ಯಿಂದ ಮೂವರ ಅರೆಸ್ಟ್ ಮಾಡಲಾಗಿದೆ ಎಂದು ಎಜಿ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್​, ಕೆಎಸ್​​ಸಿಎ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿಕೆ ಮಾಡಿದೆ.
ಇದೇ ವೇಳೆ ಆರ್​​ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ಅವರ ಪರ ಸಂದೇಶ್ ಚೌಟ ವಾದಿಸಿದರು. ಮಾಧ್ಯಮದ ಮುಂದೆ ಸಿಎಂ ಅರೆಸ್ಟ್ ಮಾಡಿ ಅಂತ ಹೇಳಿದ್ದಾರೆ. ಹೇಗೆಯೇ ನಿಖಿಲ್​​ರನ್ನು ಅರೆಸ್ಟ್ ಮಾಡಲಾಗಿದೆ ಎಂದರು. ಒಟ್ಟು ಮೂರು ಎಫ್​​ಐಆರ್​ಗಳನ್ನು ದಾಖಲು ಮಾಡಲಾಗಿದೆ. ಸುಮೊಟೋ ಕೇಸ್ ದಾಖಲಿಸಿದ ಇನ್ಸ್​​ಪೆಕ್ಟರ್​​ ಅವರನ್ನು ಅಮಾನತು ಮಾಡಿದ್ದಾರೆ. ಹಾಗಿರುವಾಗ ನಿಖಿಲ್ ಅವರನ್ನ ಅರೆಸ್ಟ್ ಮಾಡಿದ್ದಾದರೂ ಯಾರು? ತನಿಖಾಧಿಕಾರಿ ಇಲ್ಲದೇ ಅರೆಸ್ಟ್ ಮಾಡಿದ್ಯಾರು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ರಂಗಧಾಮ ಕೆರೆಯಲ್ಲಿ ದಾರುಣ ಘಟನೆ.. ಇಬ್ಬರು ಮುದ್ದಾದ ಮಕ್ಕಳನ್ನು ಕೆರೆಗೆ ತಳ್ಳಿ ತಾಯಿ ಆತ್ಮಹತ್ಯೆ
ಅದಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಪ್ರತಿವಾದಿಸಿ, ಅಶೋಕನಗರ ಪೊಲೀಸ್ ಇನ್ಸ್​​ಪೆಕ್ಟರ್ ರವಿ ಅವರಿಂದ ನಿಖಿಲ್​ರ ಅರೆಸ್ಟ್ ಆಗಿದೆ. ಮೂರು ಕೇಸ್​ಗಳನ್ನ ಸಿಐಡಿ ತನಿಖೆ ಮಾಡ್ತಿದೆ ಎಜಿ ಶಶಿಕಿರಣ್ ಶೆಟ್ಟಿ ಹೇಳಿದರು. ಆಗ ಸಂದೇಶ ಚೌಟ ಅವರು, ಆರೋಪಿಯ ಮೇಲೆ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಕೋರ್ಟ್​ಗೆ ಮನವಿ ಮಾಡಿಕೊಂಡರು. ಅದಕ್ಕೆ ನಿಖಿಲ್​ ಅವರನ್ನ ಬೇರೆ ಕೇಸ್​​ಗಳಲ್ಲಿ ಬಲವಂತದ ಕ್ರಮ ಆಗಬಾರದು ಎಂದು ಕೋರ್ಟ್​ ಹೇಳಿತು. ನಿಖಿಲ್ ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಇದನ್ನೂ ಓದಿ: ಸಾಲಗಾರರಿಗೆ ಬಿಗ್ ರಿಲೀಫ್.. 3ನೇ ಬಾರಿ ರೆಪೋ ದರ ಕಡಿಮೆ ಮಾಡಿದ RBI; ಬಡ್ಡಿ ದರ ಇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ