ಮನೆಯೊಂದು ಮೂರು ಬಾಗಿಲು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರೋದೇನು?

author-image
Ganesh Nachikethu
Updated On
ಕಾಂಗ್ರೆಸ್​​ಗೆ ಕೌಂಟರ್​​.. ಇಂದು ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್​​; ಉದ್ದೇಶಗಳೇನು?
Advertisment
  • ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು
  • ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ ಬಿಜೆಪಿ
  • ಬಿಜೆಪಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಣ ಆಗಿದೆ

ಬೆಂಗಳೂರು: ಇತ್ತೀಚೆಗೆ ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಇದಕ್ಕೆ ಕಾರಣ ಬಿಜೆಪಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಣಗಳಾಗಿರುವುದು.

ರಾಜ್ಯ ಬಿಜೆಪಿಯಲ್ಲಿ ಒಳಜಗಳ ಹೆಚ್ಚಾಗಿರುವುದು ಗುಟ್ಟಿನ ಸಂಗತಿಯೇನಲ್ಲ. ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಬಿಜೆಪಿ ನಾಯಕರು ಪಕ್ಷದೊಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ಇತ್ತೀಚೆಗೆ ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ರಾಧಾ ಮೋಹನ್ ಅಗರ್‌ವಾಲ್ ಮುಂದೆಯೇ ಬಣ ರಾಜಕೀಯ ಬಯಲಾಗಿದೆ.

ಬಿಜೆಪಿಯಲ್ಲಿ ನಡೆಯುತ್ತಿರುವುದಾದ್ರೂ ಏನು? ಮೂರು ಬಣಗಳು ಹುಟ್ಟಿಕೊಂಡಿದ್ದು ಏಕೆ? ಹಾಗಾದ್ರೆ ಆ ಮೂರು ಬಣಗಳು ಯಾವುವು? ಇಲ್ಲಿ ಆಗುತ್ತಿರೋ ಪ್ರಸ್ತುತ ವಿದ್ಯಾಮಾನಗಳ ಏನು? ಅನ್ನೋ ಕಂಪ್ಲೀಟ್​ ರಿಪೋರ್ಟ್​​ ನ್ಯೂಸ್​ಫಸ್ಟ್​ ನೀಡುತ್ತಿದೆ.

publive-image

ರಾಜ್ಯ ಬಿಜೆಪಿ ಆಗುತ್ತಿರೋದೇನು?

1. ಪರದೆ ಹಿಂದೆ ನಿಂತು ಹಿರಿಯ ನಾಲ್ಕೈದು ನಾಯಕರ ಗೇಮ್ ಆಡುತ್ತಿರುವುದು.

2. ತಟಸ್ಥ ಬಣದ ನಾಲ್ಕೈದು ನಾಯಕರ ಅಸಮಾಧಾನಕ್ಕೆ ಇಡೀ ಬಿಜೆಪಿಯಲ್ಲೇ ಅಸಮಾಧಾನ ಎಂದು ಬಿಂಬಿಸಲು ಹೊರಟಿದ್ದು.

3. ಉಸ್ತುವಾರಿ ರಾಧಾ ಮೋಹನ್ ದಾಸ್ ನಡೆಸಿದ ಸಭೆಯಲ್ಲಿ ಬಹಿರಂಗ ಅಭಿಪ್ರಾಯ ತಿಳಿಸದಿರುವುದು. ಬಳಿಕ ಉಸ್ತುವಾರಿಯನ್ನು ಭೇಟಿ ಆಗಿ ಚರ್ಚೆ ಮಾಡಿರುವುದು ಏಕೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

3. ಬಿಜೆಪಿ ಈಗ ಬರೋಬ್ಬರಿ ಮೂರು ಮನೆ ಆಗಿದೆ ಅನ್ನೋದು ಬಯಲು

4. ಬಿ.ವೈ ವಿಜಯೇಂದ್ರ ಬಣ, ಬಿ.ವೈ ವಿಜಯೇಂದ್ರ ವಿರೋಧಿ ಬಣ, ತಟಸ್ಥ ಬಣ ಹೀಗೆ 3 ಬಣಗಳಾಗಿರುವುದು.

5. ಕಳೆದ ಮೂರು ದಿನಗಳಿಂದ ಬ್ಯಾಕ್​ ಟು ಬ್ಯಾಕ್​ ಸಭೆಗಳು ನಡೆಯುತ್ತಲೇ ಇರುವುದು ಕೂಡ ಬಿಜೆಪಿ ಭಿನ್ನಾಭಿಪ್ರಾಯಕ್ಕೆ ಹಿಡಿದ ಕನ್ನಡಿ ಆಗಿದೆ.

6. ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮುಂದೆ ಹರಿಹರ ಕ್ಷೇತ್ರದ ಶಾಸಕ ಬಿ.ಪಿ ಹರೀಶ್ ಹೊರತುಪಡಿಸಿ ಉಳಿದೆಲ್ಲಾ ಶಾಸಕರು, ಪದಾಧಿಕಾರಿಗಳು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರರನ್ನೇ ಮುಂದುವರಿಸಬೇಕು ಅನ್ನೋ ಅಭಿಪ್ರಾಯ ಹೊರಹಾಕಿದ್ದಾರೆ.

7. ಕೇಂದ್ರದ ಮಾಜಿ ಸಚಿವ ಹಾಗೂ ಕೋರ್ ಕಮಿಟಿ ಸದಸ್ಯ ಡಿ.ವಿ ಸದಾನಂದಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಾ. ಸಿ.ಎನ್ ಅಶ್ವತ್ಥ್‌ ನಾರಾಯಣ್ ಅವರನ್ನ ರಾಜ್ಯಾಧ್ಯಕ್ಷ ಮಾಡುವುದಾಗಿ ಎತ್ತಿ ಕಟ್ಟಿರುವುದು.

8. ವಿ. ಸುನಿಲ್​ ಕುಮಾರ್​ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು. ಶಾಸಕ ಯತ್ನಾಳ್​ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡಬೇಕು ಅನ್ನೋದು ಮತ್ತೊಂದು ಬಣದ ಅಭಿಪ್ರಾಯ.

9. ಸುನಿಲ್‌ ಕುಮಾರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಗಮನಕ್ಕೆ ಬಂದಿಲ್ಲ ಎನ್ನುವುದು.

10. ವಿಧಾನಪರಿಷತ್‌ನಲ್ಲಿ ದಲಿತ ಸಮುದಾಯದವರಿಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ದೇವೆ. ವಿಧಾನಸಭೆಯಲ್ಲಿ ಒಕ್ಕಲಿಗರನ್ನು ವಿಪಕ್ಷ ನಾಯಕ ಮಾಡಿದ್ದೇವೆ. ಸಂಘಟನೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯವನ್ನೇ ಮುಂದುವರಿಸುವುದು ಸೂಕ್ತ ಎಂದು ವಿಜಯೇಂದ್ರ ಪರ ಬ್ಯಾಟಿಂಗ್​.

ಹೀಗೆ ರಾಜ್ಯ ಬಿಜೆಪಿಯಲ್ಲಿ ಹಲವು ಭಿನ್ನಾಭಿಪ್ರಾಯಳು ಎದ್ದಿವೆ. ಅದರಲ್ಲೂ ವಿಜಯೇಂದ್ರ ಯಡಿಯೂರಪ್ಪರ ಪುತ್ರ ಬೇರೆ. ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಶ್ನಾತೀತಾ ನಾಯಕ. ಹೀಗಾಗಿ ಅವರನ್ನೇ ರಾಜ್ಯಾಧ್ಯಕ್ಷರಾಗಿ ಮುಂದುವರಿಸಬೇಕು ಅನ್ನೋ ಚರ್ಚೆ ಕೂಡ ಇದೆ.

ಕಳೆದ ಒಂದುವರೆ ವರ್ಷದಿಂದ ವಿಜಯೇಂದ್ರ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ವಿಜಯೇಂದ್ರ ನಾಯಕತ್ವದ ಮೇಲೆ ಒಲವಿದೆ. ಹೀಗಾಗಿ ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ತಪ್ಪು ಸಂದೇಶ ಹೋಗಲಿದೆ ಎಂದು ಬಹುತೇಕ ಶಾಸಕರು ಮತ್ತು ಎಂಎಲ್​ಸಿಗಳು ಬಹಿರಂಗ ಆಗ್ರಹ ಮಾಡಿದ್ದಾರೆ. ಹೀಗಾಗಿ ನಾಲ್ಕೈದು ಹಿರಿಯ ನಾಯಕರ ಅಸಮಾಧಾನವನ್ನೇ ಪಕ್ಷದ ಅಸಮಾಧಾನ ಎನ್ನುವಂತೆ ಬಿಂಬಿಸಲಾಗಿದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ:BJP ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ.. ಪಕ್ಷಕ್ಕೆ ಗುಡ್​ಬೈ ಹೇಳ್ತಾರಾ ಮಾಜಿ ಸಚಿವ ಶ್ರೀರಾಮುಲು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment