Advertisment

ದಲಿತ ಸಮುದಾಯಕ್ಕೆ ಒಳ ಮೀಸಲಾತಿ.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

author-image
Ganesh
Updated On
ದಲಿತ ಸಮುದಾಯಕ್ಕೆ ಒಳ ಮೀಸಲಾತಿ.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
Advertisment
  • ನಾಗಮೋಹನ್ ದಾಸ್ ಸಮಿತಿಯಿಂದ ವರದಿ ಸಲ್ಲಿಕೆ
  • 4 ಶಿಫಾರಸು ಮಾಡಿರುವ ನಾಗಮೋಹನ್ ದಾಸ್ ಸಮಿತಿ
  • ಸಂಪುಟ ಸಭೆಯಲ್ಲಿ ಸರ್ಕರ ತೆಗೆದುಕೊಂಡ ತೀರ್ಮಾನ ಏನು?

ಬೆಂಗಳೂರು: ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ, ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದೆ.

Advertisment

4 ಶಿಫಾರಸು

ಬೆನ್ನಲ್ಲೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ಆಗಿದೆ. ಸಭೆ ಬಳಿಕ ಸಚಿವರಾದ ಹೆಚ್.ಕೆ ಪಾಟೀಲ್, ಹೆಚ್.ಸಿ ಮಹಾದೇವಪ್ಪ, ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆಗೆ ಹೆಚ್.ಕೆ ಪಾಟೀಲ್ ಮಾಹಿತಿ ನೀಡಿ.. ಇಂದಿನ ಸಭೆಯಲ್ಲಿ 36 ವಿಷಯಗಳನ್ನು ಪರಿಶೀಲನೆ ‌ಮಾಡಿ 34 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

publive-image

ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚನೆ ಮಾಡಲಾಗಿತ್ತು. ಒಳ ಮೀಸಲಾತಿ ಬಗ್ಗೆ ಮಧ್ಯಂತರ ಶಿಫಾರಸು ಮಾಡಲಾಗಿತ್ತು. ಆ ಸಮಿತಿಯು 4 ಶಿಫಾರಸು ಮಾಡಿದೆ ಅಂತಾ ತಿಳಿಸಿದರು.

  • SC ಉಪಜಾತಿ ವೈಜ್ಞಾನಿಕ ವರ್ಗೀಕರಣ ಮಾಡಬೇಕು
  • ಹೊಸ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹ ಮಾಡಬೇಕು
  • ತಂತ್ರಜ್ಞಾನ ಬಳಸಿ 30-40 ದಿನಗಳ ಒಳಗಾಗಿ ಹೊಸ ಸಮೀಕ್ಷೆ
  • ಅಗತ್ಯ ಪ್ರಶ್ನಾವಳಿ ಸಿದ್ದಪಡುಸಬೇಕು, ಉನ್ನತಮಟ್ಟದ ಸಮಿತಿ ರಚಿಸಬೇಕು
Advertisment

ಹೊಸ ಸಮೀಕ್ಷೆ ದತ್ತಾಂಶ ಆಧಾರದ ಮೇಲೆ ಎಸ್‌ಸಿ ಉಪಜಾತಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಬೇಕು. ನಾಗಮೋಹನ್ ದಾಸ್ ಸಮಿತಿಯನ್ನೇ ಮುಂದುವರೆಸಲು ಕ್ಯಾಬಿನೆಟ್​ನಲ್ಲಿ ತೀರ್ಮಾ‌ನಿಸಲಾಗಿದೆ. 60 ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಸಮಿತಿ ಸದಸ್ಯರು 60 ದಿನದೊಳಗೆ ಸಮೀಕ್ಷೆ ಮಾಡ್ತೇವೆ ಎಂದಿದ್ದಾರೆ. ಅದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಅಂತ ಇದೆ. ಆದರೆ ಇದರಲ್ಲಿ ಇರುವ ಗೊಂದಲ ಬಗೆಹರಿಸುವ ಉದ್ದೇಶ ಇದೆ. ಇದನ್ನು ಸರಿಪಡಿಸಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ. 60 ದಿನದೊಳಗೆ ನೀಡಬಹುದು. ನಮ್ಮ ಸರ್ಕಾರಿ ಅಧಿಕಾರಿಗಳೇ ಬಳಕೆಯಾಗಲಿದ್ದಾರೆ ಅಂತಾ ಹೆಚ್​​ಕೆ ಪಾಟೀಲ್ ಹೇಳಿದರು.

ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ.. ಇದಕ್ಕಾಗಿ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುವುದು. ರಾಜ್ಯದಲ್ಲಿ 5260 ಗ್ರಾಮ ಪಂಚಾಯ್ತಿಗಳಿವೆ. ಚೀಫ್ ಸೆಕ್ರಟರಿ ಮಾನಿಟರಿಂಗ್ ಇರಲಿದೆ. ಸಮರೋಪಾದಿಯಲ್ಲಿ ಸರ್ವೇ ಮಾಡಿ ವರದಿ ಸಲ್ಲಿಸಲಿದೆ. ದತ್ತಾಂಶ ಕರಾರುವಕ್ಕಾಗಿ ಇದ್ದರೆ ಸಮಸ್ಯೆ ಆಗೋದಿಲ್ಲ. ಆಂಧ್ರ ,ತೆಲಂಗಾಣದಂತೆ ಆಗುವುದು ಬೇಡ. ವೈಜ್ಞಾನಿಕವಾಗಿ ಸಮೀಕ್ಷೆ ಸಮಿತಿ ವರದಿ ಸಲ್ಲಿಸಲಿದೆ ಎಂದರು.

ಇದನ್ನೂ ಓದಿ: ಕೊನೆಗೂ ಹಿಂದೂ ಸಂಘಟನೆ ಒತ್ತಾಯಕ್ಕೆ ಮಣಿದ ರಕ್ಷಕ್ ಬುಲೆಟ್‌.. ಹೊಸ ಪೋಸ್ಟ್‌ನಲ್ಲಿ ಹೇಳಿದ್ದೇನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment