ಭಾರತ, ಪಾಕ್ ಸಂಘರ್ಷದಲ್ಲಿ ಗೆಲುವು ಯಾರಿಗೆ? ಎಷ್ಟು ಕೋಟಿ ನಷ್ಟ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!

author-image
admin
Updated On
ಆಪರೇಷನ್ ಸಿಂಧೂರ್​ಗೆ ಚೀನಾ ಪ್ರತಿಕ್ರಿಯೆ.. ಸ್ನೇಹಿತನ ಮೇಲೆ ನಡೆದ ದಾಳಿ ಬಗ್ಗೆ ಏನಂತು..?
Advertisment
  • ಅಂತಾರಾಷ್ಟ್ರೀಯ ರಕ್ಷಣಾ ತಜ್ಞರ ಪ್ರಕಾರ ಭಾರತಕ್ಕೆ ಸ್ಪಷ್ಟ ಗೆಲುವು
  • ಪಾಕಿಸ್ತಾನ ಬಾಲ ಬಿಟ್ಚುಕೊಂಡು ಬೆದರಿದ ನಾಯಿ ರೀತಿ ಓಡಿ ಹೋಗಿದೆ
  • 1971ರ ಬಳಿಕ ಪಾಕಿಸ್ತಾನಕ್ಕೆ ಒಂದೇ ವಾರದಲ್ಲೇ ಅತಿ ಹೆಚ್ಚು ನಷ್ಟ!

ಪಹಲ್ಗಾಮ್ ಪ್ರತೀಕಾರಕ್ಕೆ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಭಾರತ- ಪಾಕ್ ನಡುವಿನ ಸಂಘರ್ಷದಲ್ಲಿ ಗೆದ್ದಿದ್ದು ಯಾರು? ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅಂತಾರಾಷ್ಟ್ರೀಯ ರಕ್ಷಣಾ ತಜ್ಞರು ಭಾರತವೇ ಸ್ಪಷ್ಟವಾದ ಗೆಲುವು ಸಾಧಿಸಿದೆ ಅನ್ನೋ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮಿಲಿಟರಿ ಇತಿಹಾಸಕಾರ, ಏವಿಯೇಷನ್ ತಜ್ಞ ಟಾಮ್ ಕೂಪರ್ ಅವರು ಭಾರತದ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪಾಕಿಸ್ತಾನ ವಿಫಲವಾಗಿದೆ. ಭಾರತೀಯ ವೈಮಾನಿಕ ದಾಳಿಯಿಂದ ಪಾಕಿಸ್ತಾನಕ್ಕೆ ಹಿನ್ನಡೆಯ ಮೇಲೆ ಹಿನ್ನಡೆ ಆಗಿದೆ. ಇದು ಭಾರತಕ್ಕೆ ಕ್ಲಿಯರ್ ಕಟ್ ಗೆಲುವು ಎಂದಿದ್ದಾರೆ.

publive-image

ಭಾರತದ ಏರ್ ಪೋರ್ಸ್, ಪಾಕಿಸ್ತಾನದ ನ್ಯೂಕ್ಲಿಯರ್ ಸಂಗ್ರಹಗಾರಗಳ ಮೇಲೆ ದಾಳಿ ಮಾಡಿದಾಗ ಪಾಕಿಸ್ತಾನದ ಡಿಫೆನ್ಸ್ ಲೆಸ್ ಆಗಿತ್ತು. ಪಾಕಿಸ್ತಾನ ಸಂಪೂರ್ಣವಾಗಿ ಭಾರತದ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಫಲವಾಗಿತ್ತು. ಈ ಸಂಘರ್ಷದಲ್ಲಿ ಭಾರತಕ್ಕೆ ಯಾವುದೇ ಹಿನ್ನಡೆ ಆಗಿಲ್ಲ. ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಏನನ್ನೂ ಮಾಡಲಾಗಿಲ್ಲ ಎಂದು ಟಾಮ್ ಕೂಪರ್ ಹೇಳಿದ್ದಾರೆ.

publive-image

ಭಾರತ- ಪಾಕ್ ಎರಡು ದೇಶಗಳು ಗೆಲುವು ನಮ್ಮದೇ ಎನ್ನುತ್ತಿರುವ ಹೊತ್ತಿನಲ್ಲಿ ಅಂತಾರಾಷ್ಚ್ರೀಯ ತಜ್ಞರಿಂದ ಭಾರತಕ್ಕೆ ಗೆಲುವು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಇಬ್ಬರು ಗೆಲುವಿನ ಬಗ್ಗೆ ಪ್ರತಿಪಾದನೆ ಮಾಡಿದಾಗ ಭಾರತದ್ದೇ ಗೆಲುವು ಎಂದು ಥರ್ಡ್ ಅಂಪೈರ್ ರೀತಿ ಟಾಮ್ ಕೂಪರ್ ತೀರ್ಪು ನೀಡಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಭಾರತವೇ ಪಾಕ್ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ ಭಾರತವು ಪಾಕಿಸ್ತಾನದ 6 ಏರ್ ಫೀಲ್ಡ್ ರನ್ ವೇಗೆ ಡ್ಯಾಮೇಜ್ ಮಾಡಿದೆ. ದಶಕಗಳಲ್ಲೇ ಭಾರತವು ಪಾಕಿಸ್ತಾನದ ಮೇಲೆ ಮಹತ್ವದ ದಾಳಿ ನಡೆಸಿದೆ ಎಂದಿದೆ.

publive-image

ಈ ಬಗ್ಗೆ ವಾಷಿಂಗ್ಟನ್ ಪೋಸ್ಟ್‌ 24ಕ್ಕೂ ಹೆಚ್ಚು ಸ್ಯಾಟಲೈಟ್ ಫೋಟೋಗಳನ್ನು ವಿಶ್ಲೇಷಣೆ ಮಾಡಿದೆ. ಇದರ ಪ್ರಕಾರ ಪಾಕಿಸ್ತಾನದ ಮೂರು ಹ್ಯಾಂಗರ್, 2 ರನ್ ವೇ, ಬಿಲ್ಡಿಂಗ್‌ಗಳಿಗೆ ಭಾರೀ ಡ್ಯಾಮೇಜ್ ಆಗಿದೆ. ಪಾಕಿಸ್ತಾನದ 100 ಕಿ.ಮೀ ಒಳಗೂ ಭಾರತದ ಏರ್ ಪೋರ್ಸ್ ದಾಳಿ ನಡೆಸಿದೆ.

ಇದನ್ನೂ ಓದಿ: ಗಡಿಯಲ್ಲಿ ನ್ಯೂಸ್ ಫಸ್ಟ್ ವರದಿ ಮಾಡುವಾಗಲೇ ಫೈರಿಂಗ್.. ಮೂವರು ಉಗ್ರರು ಫಿನಿಶ್; ಸ್ಫೋಟಕ ದೃಶ್ಯ! 

ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಇಂಟರ್‌ನ್ಯಾಷನಲ್ ಸೀನಿಯರ್ ಪ್ರೊಫೆಸರ್ ಪ್ರಕಾರ 1971ರ ಯುದ್ಧದ ನಂತರ ಭಾರತ ದೊಡ್ಡ ದಾಳಿ ನಡೆಸಿದೆ. ಭಾರತವು ಪಾಕಿಸ್ತಾನದ ದಾಳಿ, ರಕ್ಷಣಾತ್ಮಕ ವಾಯು ಸಾಮರ್ಥ್ಯವನ್ನು ಡಿಗ್ರೇಡ್ ಮಾಡಿದೆ. ರಾವಲ್ಪಿಂಡಿ ಬಳಿ ಇರುವ ನೂರ್ ಖಾನ್ ಏರ್ ಬೇಸ್‌ನಲ್ಲಿ 2 ಮೊಬೈಲ್ ಕಂಟ್ರೋಲ್ ಸೆಂಟರ್ ನಾಶವಾಗಿವೆ. ಬೋಲಾರಿ ಏರ್ ಬೇಸ್‌ನಲ್ಲಿ 60 ಅಡಿ ಅಗಲದ ಗುಂಡಿ ಮಿಸೈಲ್ ದಾಳಿಯಿಂದಲೇ ಬಿದ್ದಿದೆ ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ವರದಿಯಾಗಿದೆ.

publive-image

ಬೆದರಿದ ನಾಯಿಯ ರೀತಿ ಓಡಿ ಹೋಗಿದೆ
ಅಮೆರಿಕಾದ ಪೆಂಟಗಾನ್ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಅವರು ಭಾರತವು ಟೆರರ್ ಮೂಲಸೌಕರ್ಯಗಳ ಮೇಲೆ ನಿಖರ ದಾಳಿ ನಡೆಸಿದೆ. ಪಾಕಿಸ್ತಾನ ಎರಡು ಕಾಲುಗಳ ಮಧ್ಯೆ ಬಾಲ ಬಿಟ್ಚುಕೊಂಡು ಬೆದರಿದ ನಾಯಿ ರೀತಿ ಓಡಿ ಹೋಗಿದೆ. ಪಾಕಿಸ್ತಾನಕ್ಕೆ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬಹಳ ಕೆಟ್ಟದ್ದಾಗಿ ಪಾಕಿಸ್ತಾನ ಸೋತಿದೆ. ಭಾರತ ಮಿಲಿಟರಿ, ರಾಜತಾಂತ್ರಿಕವಾಗಿ ಗೆಲುವು ಸಾಧಿಸಿದೆ. ಈಗ ಪಾಕಿಸ್ತಾನ ಟೆರರಿಸ್ಟ್ ಪ್ರಯೋಜನೆಗೆ ಏನ್ ಮಾಡುತ್ತೆ ಎಂಬ ಕುತೂಹಲ ಇದೆ ಎಂದಿದ್ದಾರೆ.

publive-image

ಪಾಕಿಸ್ತಾನದ ಆದ ನಷ್ಟ ಎಷ್ಟು?
ಭಾರತದ ಏರ್‌ಸ್ಟ್ರೈಕ್‌ನಿಂದ ಪಾಕಿಸ್ತಾನಕ್ಕೆ ಆದ ನಷ್ಟ ಬರೋಬ್ಬರಿ 1 ಬಿಲಿಯನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 8,500 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಇದು ಪಾಕಿಸ್ತಾನದ ಮಿಲಿಟರಿ ಅಕೌಂಟೆಂಟ್ ಹಾಕಿರುವ ನಷ್ಟದ ಅಂದಾಜು.

ಮಿಲಿಟರಿ ಮೂಲ ಸೌಕರ್ಯಕ್ಕೆ ಭಾರತದ ಏರ್‌ಸ್ಟ್ರೈಕ್‌ನಿಂದ ಬರೋಬ್ಬರಿ 1 ಬಿಲಿಯನ್ ಡಾಲರ್ ನಷ್ಟವಾಗಿದೆ. ಇದುವರೆಗೂ ಪಾಕಿಸ್ತಾನದ ಸೇನೆಯು ಕಡಿಮೆ ವೆಚ್ಚದಲ್ಲಿ ಭಯೋತ್ಪಾದನೆ ಮೂಲಕ ಭಾರತಕ್ಕೆ ನಷ್ಟ ಮಾಡುತ್ತಿದ್ದರು. ಈಗ 1971ರ ಬಳಿಕ ಭಾರತದ ಸೇನೆ ಹಾಗೂ ಏರ್ ಪೋರ್ಸ್ ಪಾಕಿಸ್ತಾನಕ್ಕೆ ಒಂದೇ ವಾರದಲ್ಲೇ ಅತಿ ಹೆಚ್ಚು ನಷ್ಟ ಉಂಟು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment