/newsfirstlive-kannada/media/post_attachments/wp-content/uploads/2025/03/SUNITA-WILLIAMS-RETURNED-1.jpg)
ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಕೊನೆಗೂ ಎಲ್ಲರ ಪ್ರಾರ್ಥನೆಯಂತೆ ಭೂಮಿಗೆ ಸುರಕ್ಷಿತವಾಗಿ ಬಂದು ಸೇರಿದ್ದಾರೆ. ಎಂಟು ದಿನಗಳ ಕಾರ್ಯಚಾರಣೆಗೆ ಹೋಗಿದ್ದ ಉಭಯ ಗಗನಯಾನಿಗಳು 9 ತಿಂಗಳ ವನವಾಸ ಅನುಭವಿಸಿದ್ದರು. ಕಳೆದ ಜೂನ್ 5 ರದು ಬೋಯಿಂಟ್ ಸ್ಟಾರ್ಲಿನೆರ್ ಮೂಲಕ ಬಾಹ್ಯಾಕಾಶಕ್ಕೆ ಹೋಗಿದ್ದ ಈ ಉಭಯ ಗಗನಯಾತ್ರಿಗಳು ಇಂದು ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿದ್ದಾರೆ.
ಅವರು ಭೂಮಿಗೆ ಬರುವ ಮುಂಚೆ ಇಲ್ಲಿ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಫ್ಲೋರಿಡಾದ ಕರಾವಳಿ ಸಮುದ್ರದಲ್ಲಿ ಸ್ಪೇಸ್ ಕ್ಯಾಪ್ಸೂಲ್ಗಳನ್ನು ನಿಯೋಜಿಸಲಾಗಿತ್ತು. ಇಬ್ಬರು ಗಗನಯಾತ್ರಿಗಳು ನಾಸಾದ ನಿಕ್ ಹ್ಯಾಗ್ಯೂ ಮತ್ತು ಅಲೆಕ್ಸಾಂಡರ್ ಗೊರ್ಬುನೊವ್ ಜೊತೆ ಸುಮಾರು 17 ಗಂಟೆಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಫ್ಲೋರಿಡಾದ ಕರಾವಳಿಯವರೆಗೂ ಪ್ರಯಾಣ ನಡೆಸಿದ್ದರು.
ಪ್ರಯಾಣದ ಸೂಚನೆಯಂತೆಯೇ ಬಾಹ್ಯಾಕಾಶ ನೌಕೆಯು ಡಿಆರ್ಬಿಟ್ ಬರ್ನ್ ಆಗುವ ಮೂಲಕ ಚಾಲನೆಯನ್ನು ಪಡೆಯಿತು. ನಂತರ ತನ್ನ ಇಂಜಿನ್ ಫೈರ್ ಮಾಡಿದ ಬಾಹ್ಯಾಕಾಶ ನೌಕೆ ತನ್ನ ಪಥದತ್ತ ಸವಾರಿಯನ್ನು ಆರಂಭ ಮಾಡಿತು. ಭೂಮಿಗೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಅದರ ವೇಗವನ್ನು ಕೂಡ ಕಡಿಮೆ ಮಾಡಲಾಯ್ತು. ಬೆಳಗಿನ ಜಾವ 2.41 ರಿಂದ ಲ್ಯಾಂಡಿಂಗ್ಗೂ 44 ನಿಮಿಷಗಳ ಮುನ್ನ ಬಾಹ್ಯಾಕಾಶದ ನೌಕೆಯ ವೇಗವನ್ನು ತಗ್ಗಿಸಲಾಯ್ತು. 3.27 ನಿಮಿಷಕ್ಕೆ ಸರಿಯಾಗಿ ಕ್ರ್ಯೂ-9 ಲ್ಯಾಂಡ್ ಆಯ್ತು .
ಇದನ್ನೂ ಓದಿ:BREAKING ಭೂಮಿಗೆ ಬಂದ ಸುನೀತಾ ವಿಲಿಯಮ್ಸ್.. ಸಪ್ತ ಸವಾಲುಗಳನ್ನು ದಾಟಿದ ನಾಸಾ
ಕ್ರ್ಯೂ-9 ನಿನ್ನೆ ಬೆಳಗ್ಗೆ ಸುಮಾರು 10.35ಕ್ಕೆ ಸ್ಪೇಸ್ ಸ್ಟೇಷನ್ನಿಂದ ಹೊರಟಿತು. ಈ ವಿಚಾರವನ್ನು ಎಲಾನ್ ಮಸ್ಕ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಡ್ರ್ಯಾಗನ್ ಕ್ಯಾಪ್ಸುಲ್ ಫಲ್ಕಾನ್ 9 ರಾಕೆಟ್ನೊಂದಿಗೆ ಲಾಂಚ್ ಮಾಡಲಾಗಿತ್ತು. ಕ್ರ್ಯೂ 9ನ್ನು ಕ್ರ್ಯೂ 10ಗೆ ಪರ್ಯಾಯವಾಗಿ ಬದಲಾಯಿಸಲಾಗಿತ್ತು. ನಾಸಾದ ಒಂದೊಂದು ವ್ಯವಸ್ಥಿತ ಯೋಜನೆಗಳು ಅವರು ಅಂದುಕೊಂಡಂತೆ ನಡೆದು ಸುಮಾರು 17 ಗಂಟೆಗಳ ಸವಾರಿಯ ಬಳಿಕ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ