ಪಾಕ್​​, ಚೀನಾ ಮಾತ್ರವಲ್ಲ.. ಭಾರತ ಈ ಐದು ದೇಶಗಳೊಂದಿಗೆ ಜಲ ವಿವಾದ ಎದುರಿಸುತ್ತಿದೆ!

author-image
AS Harshith
Updated On
ಪಾಕ್​​, ಚೀನಾ ಮಾತ್ರವಲ್ಲ.. ಭಾರತ ಈ ಐದು ದೇಶಗಳೊಂದಿಗೆ ಜಲ ವಿವಾದ ಎದುರಿಸುತ್ತಿದೆ!
Advertisment
  • ಇದು ದೇಶ-ದೇಶಗಳ ನಡುವಿನ ಜಲ ವಿವಾದದ ಕಂಟಕ
  • ಚೀನಾದೊಂದಿಗೆ ಇದೆ ನೀರಿನ ವಿವಾದ, ಟಿಬೆಟ್​ನಲ್ಲಿ ಡ್ರ್ಯಾಗನ್ ದೇಶ​ ಮಾಡಿದೆ ಬಿಗ್​ ಪ್ಲಾನ್​
  • ಭೂತಾನ್​, ನೇಪಾಳ, ಪಾಕಿಸ್ತಾನ ಜೊತೆ ನೀರಿಗಾಗಿ ಹೋರಾಡುತ್ತಾ ಬಂದಿದೆ ಭಾರತ

ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಜಲ ವಿವಾದ ಎದುರಿಸುತ್ತಿವೆ. ನೀರಿನ ಕೊರತೆ ಮತ್ತು ಕೃಷಿಕರ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಂಡು ಜಲ ವಿವಾದಿತ ವಿಷಯಕ್ಕಾಗಿ ಹೋರಾಡುತ್ತಿವೆ. ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಕೂಡ ಈ ಜಲವಿವಾದದಲ್ಲಿ ಒಳಗಾಗಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ ಮತ್ತು ಚೀನಾ ಜಲ ವಿವಾದ

ಚೀನಾದಲ್ಲಿ ಬ್ರಹ್ಮಪುತ್ರ ಮತ್ತು ಗಂಗೆಯನ್ನು ಪೋಷಿಸುವ ಹಿಮನದಿಗಳು ಹುಟ್ಟಿಕೊಳ್ಳುತ್ತವೆ. ಆದರೆ ಭಾರತ ಮತ್ತು ಬಾಂಗ್ಲಾದೇಶ ಕೃಷಿಗಾಗಿ ಬ್ರಹ್ಮಪುತ್ರ ನದಿಯನ್ನೇ ಅವಲಂಬಿಸಿದೆ. ಆದರೆ ಕುತಂತ್ರಿ ಚೀನಾ ಟಿಬೆಟ್​ನಲ್ಲಿ ಈ ನದಿಗಾಗಿ ನಾಲ್ಕು ಅಣೆಕಟ್ಟನ್ನು ನಿರ್ಮಿಸಲು ಚಿಂತಿಸಿದೆ.

ಭಾರತ ಮತ್ತು ಬಾಂಗ್ಲಾದೇಶ

ಭಾರತದ ನೆರೆದ ದೇಶ ಬಾಂಗ್ಲಾ. ಸಾಮಾನ್ಯವಾಗಿ ಇವೆರಡು ದೇಶಗಳು 54 ನದಿಗಳನ್ನು ಹೊಂದಿದೆ. ಆದರೆ ಇವೆರಡು ದೇಶಗಳ ನದಿ ನೀರಿನ ಭಿನ್ನಾಪ್ರಾಯ ಫರಕ್ಕಾ ಬ್ಯಾರೇಜ್​ಗೆ ಸಂಬಂಧಿಸಿದೆ.

1951ರಲ್ಲಿ ಫರಕ್ಕಾ ವಿವಾದ ಬೆಳಕಿಗೆ ಬಂತು. ಭಾರತವು 18 ಕಿ.ಮೀ ಎತ್ತರದ ಬ್ಯಾರೇಜ್​ ಯೋಜನೆಯನ್ನು ಘೋಷಿಸಿದಾಗ ಆಗಿನ ಪೂರ್ವ ಪಾಕಿಸ್ತಾನವಾದ ಬಾಂಗ್ಲಾದೇಶ ಇದನ್ನು ಪ್ರತಿಭಟಿಸಿತು. 1961ರಲ್ಲಿ ಭಾರತ ನಿರ್ಮಾಣವನ್ನು ಪ್ರಾರಂಭಿಸಿತು. 1971ರಲ್ಲಿ ಬಾಂಗ್ಲಾದೇಶದ ವಿಮೋಚನೆಯೊಂದಿಗೆ ನೀರಿನ ವಿವಾದ ಕೊನೆಯಾಯಿತು.

publive-image

ಭಾರತ ಮತ್ತು ಪಾಕಿಸ್ತಾನ

1947ರಲ್ಲಿ ಭಾರತ-ಪಾಕ್​ ವಿಭಜನೆಯಾದಾಗಿನಿಂದಲೂ ಸಿಂಧೂ ಜಲ ವಿವಾದದಲ್ಲಿ ಸಿಲುಕಿಕೊಂಡಿದೆ. ವಿಶ್ವಬ್ಯಾಂಕ್​​ ಆಶ್ರಯದಲ್ಲಿ ಮಾತುಕತೆ ನಡೆಸಿ ಸಿಂಧೂ ಜಲ ಒಪ್ಪಂದಕ್ಕೆ 1960ರಲ್ಲಿ ಸಹಿ ಹಾಕಲಾಯಿತು. ಈ ಒಪ್ಪಂದದಲ್ಲಿ ಸಟ್ಲುಟ್​, ಬಿಯಾಸ್​ ಮತ್ತು ರವಿಯನ್ನು ಭಾರತಕ್ಕೆ ಅತ್ತ ಸಿಂಧೂ, ಚೆನಾಬ್​ ಮತ್ತು ಝೀಲಂ ನದಿಯನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಯಿತು.

ಭಾರತ ಮತ್ತು ನೇಪಾಳ

ತನಕ್​ಪುರ ಮತ್ತು ಪಂಚೇಶ್ವರ್​ ಯೋಜನೆಗಳ ಮೂಲಕ ಭಾರತ ಮತ್ತು ನೇಪಾಲ ಎರಡು ದೇಶಗಳು ಜಲ ವಿವಾದದಲ್ಲಿ ಸಿಲುಕಿಕೊಂಡಿದೆ.

1996ರಲ್ಲಿ ಭಾರತ ಮತ್ತು ನೇಪಾಳ ನೀರು ಮತ್ತು ವಿದ್ಯುತ್​ ಹಂಚಿಕೊಳ್ಳಲು ಮಹಾಕಾಳಿ ನದಿಯ ಸಮಗ್ರ ಅಭಿವೃದ್ಧಿಯ ಒಪ್ಪಂದಕ್ಕೆ ಸಹಿ ಹಾಕಿದೆ.

publive-image

ಭಾರತ ಮತ್ತು ಭೂತಾನ್​

ಭಾರತ ಮತ್ತು ಭೂತಾನ್​​ ಸಣ್ಣ ಪ್ರಮಾಣದ ಜಲವಿದ್ಯುತ್​ ಯೋಜನೆಯ ಮೇಲೆ ಸಹಕಾರ ಆಧರಿಸಿದೆ. ಅಂದಹಾಗೆಯೇ ನೆರೆಯ ಭೂತಾನ್​​ 30 ಸಾವಿರ MW ಜಲವಿದ್ಯುತ್​ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment