/newsfirstlive-kannada/media/media_files/2025/12/12/england-museum-stolen-1-2025-12-12-12-56-38.jpg)
ಇಂಗ್ಲೆಂಡ್‌ನ ಬ್ರಿಸ್ಟಲ್ ಮ್ಯೂಸಿಯಂನಲ್ಲಿ ಕಳ್ಳತನ
ಇಂಗ್ಲೆಂಡ್ ನಲ್ಲಿ ಭಾರತೀಯ ಕಲಾಕೃತಿಗಳು ಸೇರಿದಂತೆ ಶತಮಾನದ ಹಿಂದಿನ ಹೆಚ್ಚಿನ ಬೆಲೆಬಾಳುವ ಕಲಾಕೃತಿಗಳು ಕಳ್ಳತನವಾಗಿವೆ. ಬ್ರಿಟನ್‌ನ ಬ್ರಿಸ್ಟಲ್ ನಲ್ಲಿರುವ ವಸ್ತು ಸಂಗ್ರಹಾಲಯದಿಂದ ಹೆಚ್ಚಿನ ಮೌಲ್ಯದ ಕಲಾಕೃತಿಗಳು ಕಳ್ಳತನವಾಗಿವೆ ಎಂದು ಬ್ರಿಟನ್ ಪೊಲೀಸರು ಇದೀಗ ಹೇಳಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಮಿಲಿಟರಿ ಬ್ಯಾಡ್ಜ್ ಗಳು ಮತ್ತು ಪಿನ್ ಗಳು, ಬುದ್ದನ ಪ್ರತಿಮೆ ಸೇರಿದಂತೆ ಅನೇಕ ಕಲಾಕೃತಿಗಳು ಸೇರಿವೆ.
ಸೆಪ್ಟೆಂಬರ್ 25 ರಂದು ವಸ್ತು ಸಂಗ್ರಹಾಲಯದ ಬ್ರಿಟಿಷ್ ಸಾಮ್ರಾಜ್ಯ ಮತ್ತು ಕಾಮನ್ ವೆಲ್ತ್ ಸಂಗ್ರಹದಿಂದ ಕಳ್ಳತನ ನಡೆಿದಿದ್ದರೂ, ಅಧಿಕಾರಿಗಳು ಇತ್ತೀಚೆಗೆ ವಿವರ ಬಿಡುಗಡೆ ಮಾಡಿದ್ದಾರೆ. ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಏವನ್, ಸೋಮರ್ ಸೆಟ್ ಪೊಲೀಸರು ಘಟನಾ ಸ್ಥಳದಲ್ಲಿ ನಾಲ್ಕು ಪುರುಷ ಶಂಕಿತರನ್ನು ತೋರಿಸುವ ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ್ದಾರೆ.
ನಾಲ್ವರು ಬ್ಯಾಗ್ ಗಳನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ರೆಕಾರ್ಡ್ ಆಗಿದೆ.
ಈ ವರ್ಷದ ಆಕ್ಟೋಬರ್ ನಲ್ಲಿ ಪ್ರಾನ್ಸ್ ಹೈ ಪ್ರೊಫೈಲ್ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿತ್ತು. ಪ್ಯಾರಿಸ್‌ನ ಲೌವರೆ ಮ್ಯೂಸಿಯಂನಲ್ಲಿ 100 ಮಿಲಿಯನ್ ಡಾಲರ್ ಮೌಲ್ಯದ ಕಿರೀಟದ ಜ್ಯುವೆಲ್ಸ್ ಕಳ್ಳತನ ನಡೆದಿತ್ತು.
ಅದಕ್ಕೂ ಮುನ್ನ ಬ್ರಿಟನ್ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿರುವುದು ಈಗ ಬೆಳಕಿಗೆ ಬಂದಿದೆ.
/filters:format(webp)/newsfirstlive-kannada/media/media_files/2025/12/12/england-museum-stolen-2-2025-12-12-12-57-51.jpg)
ಬ್ರಿಟನ್ ತನ್ನ ವಸಾಹತುಗಳೊಂದಿಗಿನ ಐತಿಹಾಸಿಕ ಸಂಬಂಧಗಳನ್ನು ದಾಖಲಿಸುವ ಸಂಗ್ರಹದಲ್ಲಿ ಮಿಲಿಟರಿ ಸ್ಮರಣಿಕೆಗಳು, ಆಭರಣಗಳು, ನೈಸರ್ಗಿಕ ಇತಿಹಾಸದ ತುಣುಕುಗಳು ಮತ್ತು ಕೆತ್ತಿದ ದಂತ, ಕಂಚಿನ ಮತ್ತು ಬೆಳ್ಳಿಯ ಪ್ರತಿಮೆಗಳು ಕಳ್ಳತನವಾದ ಕಲಾಕೃತಿಗಳಲ್ಲಿ ಸೇರಿವೆ ಎಂದು ಬಿಬಿಸಿ ತಿಳಿಸಿದೆ. ಕದ್ದ ಕೆಲವು ವಸ್ತುಗಳು ಪ್ರಮುಖ ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಭಾರತೀಯ ಕಲಾಕೃತಿಗಳಲ್ಲಿ ಕೆತ್ತಿದ ದಂತದ ಆನೆ ಆಭರಣ, ಈಸ್ಟ್ ಇಂಡಿಯಾ ಕಂಪನಿಯ ಸಮವಸ್ತ್ರದ ಬೆಲ್ಟ್ ಬಕಲ್ ಮತ್ತು ಏಳು ಹಾವಿನ ತಲೆಗಳನ್ನು ಕೆತ್ತಿದ ಕಲ್ಲಿನ ತಳಹದಿಯ ಮೇಲೆ ದಂತದ ಬುದ್ಧ ಸೇರಿವೆ.
/filters:format(webp)/newsfirstlive-kannada/media/media_files/2025/12/12/england-museum-stolen-2025-12-12-12-54-13.jpg)
"ವಸ್ತುಸಂಗ್ರಹಾಲಯ ಕಲಾಕೃತಿಗಳ ಹೆಚ್ಚಿನ ಮೌಲ್ಯದ ಕಳ್ಳತನವನ್ನು ತನಿಖೆ ಮಾಡುವ ಪತ್ತೆದಾರರು ಈ ಜನರನ್ನು ಗುರುತಿಸಲು ಸಾರ್ವಜನಿಕರ ಸಹಾಯವನ್ನು ಕೋರುತ್ತಿದ್ದಾರೆ" ಎಂದು ಏವನ್ ಮತ್ತು ಸೋಮರ್‌ಸೆಟ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. "ವಿವಿಧ ವಿವರಣೆಗಳ 600 ಕ್ಕೂ ಹೆಚ್ಚು ಕಲಾಕೃತಿಗಳನ್ನು ಅಪರಾಧಿಗಳು ತೆಗೆದುಕೊಂಡಿದ್ದಾರೆ" ಎಂದು ಅದು ಹೇಳಿದೆ. ನಷ್ಟದ ಪ್ರಮಾಣವು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿದೆ ಎಂದು ವಿವರವಾಗಿ ಹೇಳಿದೆ.
ಹೆಚ್ಚಿನ ಕಲಾಕೃತಿಗಳನ್ನು ಮೂಲತಃ ಬ್ರಿಸ್ಟಲ್‌ನಲ್ಲಿರುವ ಹಿಂದಿನ ಬ್ರಿಟಿಷ್ ಸಾಮ್ರಾಜ್ಯ ಮತ್ತು ಕಾಮನ್‌ವೆಲ್ತ್ ವಸ್ತುಸಂಗ್ರಹಾಲಯವು ಹೊಂದಿತ್ತು. ಈ ವಿಶಾಲ ಸಂಗ್ರಹವು ಅದರ ಚಲನಚಿತ್ರ ಆರ್ಕೈವ್‌ನಲ್ಲಿ ಸುಮಾರು 2,000 ವಸ್ತುಗಳನ್ನು ಒಳಗೊಂಡಿದೆ, ಇದು 1920 ರಿಂದ 1970 ರವರೆಗಿನ ವಸ್ತುಗಳನ್ನು ಮತ್ತು ಭಾರತ ಮತ್ತು ಹಲವಾರು ಆಫ್ರಿಕನ್ ದೇಶಗಳ ಗಮನಾರ್ಹ ಹವ್ಯಾಸಿ ದೃಶ್ಯಗಳನ್ನು ಒಳಗೊಂಡಿದೆ.
/filters:format(webp)/newsfirstlive-kannada/media/media_files/2025/12/12/england-museum-stolen-3-2025-12-12-12-58-18.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us