/newsfirstlive-kannada/media/media_files/2026/01/13/america-considers-airstrike-against-iran-2026-01-13-12-40-17.jpg)
ಮತ್ತೆ ಇರಾನ್- ಅಮೆರಿಕಾ ಸಂಘರ್ಷದ ವಾತಾವರಣ
ಇರಾನ್ ನಲ್ಲಿ ಸರ್ವಾಧಿಕಾರಿ ಆಯತುಲ್ಲಾ ಆಲಿ ಖಮೇನಿ ವಿರುದ್ಧ ಬೀದಿಗಿಳಿದು ಜನರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಇರಾನ್ ಸುಪ್ರೀಂ ಲೀಡರ್ ಆಯತುಲ್ಲಾ ಆಲಿ ಖಮೇನಿ ವಿರುದ್ಧದ ಪ್ರತಿಭಟನೆಯಲ್ಲಿ 600 ಮಂದಿ ಇರಾನ್ ನಾಗರಿಕರು ಸಾವನ್ನಪ್ಪಿದ್ದಾರೆ. ಪ್ರತಿಭಟನೆ ತೀವ್ರವಾದರೇ, ಅಮೆರಿಕಾ ಮಧ್ಯಪ್ರವೇಶ ಮಾಡುತ್ತೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದರು. ಈಗ 600 ಕ್ಕೂ ಹೆಚ್ಚು ಜನರು ಸರ್ವಾಧಿಕಾರಿ ವಿರುದ್ಧದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಈಗ ಇರಾನ್ ನಲ್ಲಿ ಅಮೆರಿಕಾದ ಮಧ್ಯಪ್ರವೇಶಕ್ಕೆ ಡೋನಾಲ್ಡ್ ಟ್ರಂಪ್ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಇದನ್ನು ಅಮೆರಿಕಾದ ಶ್ವೇತ ಭವನದ ಪ್ರೆಸ್ ಸೆಕ್ರೆಟರಿ ಲೆವಿಟ್ ಕೂಡ ಅಧಿಕೃತವಾಗಿ ಹೇಳಿದ್ದಾರೆ.
ಡೋನಾಲ್ಡ್ ಟ್ರಂಪ್ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡಿದ್ದಾರೆ ಎಂದು ಅಮೆರಿಕಾದ ಶ್ವೇತ ಭವನದ ಪ್ರೆಸ್ ಸೆಕ್ರೆಟರಿ ಲೆವಿಟ್ ಹೇಳಿದ್ದಾರೆ. ಇರಾನ್ ಮೇಲೆ ಏರ್ ಸ್ಟ್ರೈಕ್ ಆಯ್ಕೆಯನ್ನು ಡೋನಾಲ್ಡ್ ಟ್ರಂಪ್ ಪರಿಗಣಿಸಿದ್ದಾರೆ. ಡೋನಾಲ್ಡ್ ಟ್ರಂಪ್ ಮುಂದಿರುವ ಬಹಳಷ್ಟು ಆಯ್ಕೆಗಳಲ್ಲಿ ಏರ್ ಸ್ಟ್ರೈಕ್ ಕೂಡ ಒಂದು ಎಂದು ಲೆಿವಿಟ್ ಹೇಳಿದ್ದಾರೆ.
ಅಮೆರಿಕಾದ ಶ್ವೇತ ಭವನದ ಪ್ರೆಸ್ ಸೆಕ್ರೆಟರಿ ಆಗಿರುವ ಲೆವಿಟ್ ಹೇಳಿಕೆ ಭಾರಿ ಮಹತ್ವ ಪಡೆದಿದೆ.
ರಾಜತಾಂತ್ರಿಕತೆ ಯಾವಾಗಲೂ ಡೋನಾಲ್ಡ್ ಟ್ರಂಪ್ ಅವರ ಮೊದಲ ಆಯ್ಕೆ. ಸಾರ್ವಜನಿಕವಾಗಿ ನೀವು ಕೇಳುತ್ತಿರುವುದೇ ಬೇರೆ, ನಾವು ಖಾಸಗಿಯಾಗಿ ಇರಾನ್ ನಿಂದ ಕೇಳುತ್ತಿರುವುದೇ ಬೇರೆ. ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರ ಇರಾನ್ ಸಂದೇಶಗಳನ್ನು ಪರಿಶೀಲಿಸುತ್ತಿದ್ದಾರೆ . ಅಧ್ಯಕ್ಷ ಟ್ರಂಪ್ , ಇರಾನ್ ವಿರುದ್ಧ ಮಿಲಿಟರಿಯನ್ನು ಬಳಸಲು ಹೆದರುವುದಿಲ್ಲ. ಇರಾನ್ ಗಿಂತ ಇದು ಬೇರೆ ಯಾರಿಗೂ ಚೆನ್ನಾಗಿ ಗೊತ್ತಿಲ್ಲ ಎಂದು ಅಮೆರಿಕಾದ ಪ್ರೆಸ್ ಸೆಕ್ರೆಟರಿ ಲೆವಿಟ್ ಹೇಳಿದ್ದಾರೆ.
ಇರಾನ್ ನಲ್ಲಿ ಜನರ ಪ್ರತಿಭಟನೆಗೆ ಕಾರಣವೇನು ಗೊತ್ತಾ?
ಇರಾನ್ ನಲ್ಲಿ ಮುಲ್ಲಾಗಳೇ ದೇಶ ಬಿಟ್ಟು ಹೋಗಿ ಎಂದು ಜನರಿಂದ ಕಳೆದ ಕೆಲ ದಿನಗಳಿಂದ ಹೋರಾಟ ನಡೆಯುತ್ತಿದೆ. ಮಹಿಳೆಯರು, ಯುವತಿಯರು ಬುರ್ಖಾ ತೆಗೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ನಲ್ಲಿ ಮಹಿಳೆಯರು, ಯುವತಿಯರು ಬುರ್ಖಾ ಧರಿಸುವುದು ಕಡ್ಡಾಯ. ಈಗ ಸುಪ್ರೀಂ ಲೀಡರ್ ಆಯತುಲ್ಲಾ ಅಲಿ ಖಮೇನಿ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಮಹಿಳೆಯರು, ಯುವತಿಯರು ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಉಲಂಘಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ನಮ್ಮನ್ನು ಗಲ್ಲಿಗೇರಿಸಿದರೂ ಚಿಂತೆ ಇಲ್ಲ, ಇರಾನ್ ನಲ್ಲಿ ಧಾರ್ಮಿಕ ನಾಯಕರ ಆಳ್ವಿಕೆ ಅಂತ್ಯವಾಗಬೇಕು ಎಂದು ಘೋಷಣೆ ಕೂಗುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಕುಸಿಯುತ್ತಿರುವ ಇರಾನ್ ಆರ್ಥಿಕತೆ, ಜೀವನ ವೆಚ್ಚದ ಏರಿಕೆ. ಇದಕ್ಕೆಲ್ಲಾ ಆಯತುಲ್ಲಾ ಅಲಿ ಖಮೇನಿ ದುರಾಡಳಿತವೇ ಕಾರಣ ಎಂದು ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕಾದ ಜೊತೆ ಇರಾನ್ ಸಂಘರ್ಷ, ಇಸ್ರೇಲ್ ಜೊತೆ ಇರಾನ್ ಸಂಘರ್ಷ, ರಹಸ್ಯ ನ್ಯೂಕ್ಲಿಯರ್ ಅಸ್ತ್ರ ತಯಾರಿಯಿಂದ ಆರ್ಥಿಕ ದಿಗ್ಭಂಧನವನ್ನು ಇರಾನ್ ಮೇಲೆ ವಿಧಿಸಲಾಗಿದೆ. ಇದೆಲ್ಲದರಿಂದ ತೀವ್ರವಾಗಿ ಇರಾನ್ ಆರ್ಥಿಕತೆ ಕುಸಿದಿದೆ. ಇದರಿಂದ ಜನರ ಜೀವನ ವೆಚ್ಚ ಏರಿಕೆಯಿಂದ ಜನರಿಗೆ ಭಾರಿ ಸಂಕಷ್ಟ ಎದುರಾಗಿದೆ. ಬದುಕುವುದು ಭಾರಿ ಕಷ್ಟ ಎಂಬ ಅಭಿಪ್ರಾಯ ಜನರಿಗೆ ಬಂದಿದೆ. ಹೀಗಾಗಿ ಜನರು ಬೀದಿಗಿಳಿದು ಸುಪ್ರೀಂ ಲೀಡರ್ ಆಯತುಲ್ಲಾ ಅಲಿ ಖಮೇನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೂ, ಆಯತುಲ್ಲಾ ಅಲಿ ಖಮೇನಿ ಪರವಾಗಿಯೂ ಇರಾನ್ ನಲ್ಲಿ ಪ್ರತಿಭಟನೆ ನಡೆದಿದೆ.
ಕಚ್ಚಾತೈಲ ಸಂಪದ್ಭರಿತ ರಾಷ್ಟ್ರವಾದರೂ, ಇರಾನ್ ಆರ್ಥಿಕತೆ ಕುಸಿತವು ವಿಪರ್ಯಾಸಕ್ಕೆ ಕಾರಣವಾಗಿದೆ. ಇರಾನ್ ನಿಂದ ಹೆಚ್ಚಿನ ದೇಶಗಳು ಕಚ್ಚಾತೈಲ ಖರೀದಿಸುತ್ತಿಲ್ಲ. ಇದರಿಂದ ಇರಾನ್ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಜೊತೆಗೆ ಬೇರೆ ಉದ್ಯಮ ವ್ಯವಹಾರ, ರಫ್ತು ಚಟುವಟಿಕೆಗೂ ಭಾರಿ ಹೊಡೆತ ಬಿದ್ದಿದೆ. ಸಂಪ್ರದಾಯವಾದಿ ಚಿಂತನೆ, ಇಸ್ಲಾಂ ಮೂಲಭೂತವಾದಿ ಚಿಂತನೆ ಜಾರಿಯಿಂದ ಇರಾನ್ ಗೆ ಹೊಡೆತ, ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us