ಅಮೆರಿಕದಲ್ಲಿ ಹಿಮಬಿರುಗಾಳಿಯಿಂದ ಅಲ್ಲೋಲ-ಕಲ್ಲೋಲ! : 22 ರಾಜ್ಯಗಳು ತತ್ತರ.. 30ಕ್ಕೂ ಹೆಚ್ಚು ಮಂದಿ ಚಳಿಗೆ ಬಲಿ!

ಅಮೆರಿಕಾದ ಬಹುತೇಕ ರಾಜ್ಯಗಳಲ್ಲಿ ಹಿಮ ಬಿರುಗಾಳಿಯಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅಮೆರಿಕಾದ 22 ರಾಜ್ಯಗಳು ಹಿಮ ಬಿರುಗಾಳಿಯಿಂದ ಭಾರಿ ಪ್ರಮಾಣದಲ್ಲಿ ತತ್ತರಿಸಿ ಹೋಗಿವೆ. ಭಾರಿ ಚಳಿಗೆ 30 ಮಂದಿ ಸಾವನ್ನಪ್ಪಿದ್ದಾರೆ.

author-image
Chandramohan
AMERICA COLD WEATHER (1)
Advertisment


ಇದು ಪ್ರಕೃತಿಯ ಮುನಿಸು.. ಹವಾಮಾನ ವೈಪರೀತ್ಯಕ್ಕೆ ಅಮೆರಿಕದ ಸ್ಥಿತಿ ಡೋಲಾಯಮಾನವಾಗಿ ಬಿಟ್ಟಿದೆ.. ನಿರಂತರ ಸುರಿಯುತ್ತಿರುವ ಹಿಮ ಬಿರುಗಾಳಿ ತತ್ತರಿಸುವಂತೆ ಮಾಡಿದೆ.. 22 ರಾಜ್ಯಗಳು ಅತೀವ ಚಳಿಗೆ ಪತರುಗುಟ್ಟಿವೆ.. ಕರೆಂಟ್ ಇಲ್ಲದೇ ಕತ್ತಲು ಆವರಿಸಿದೆ.. ಅಮೆರಿಕ ಹೊಕ್ಕ ಚಳಿಭೂತ ಸಾವಿನ  ಷರಾ ಬರೆದಿದೆ..

ಎಡಬಿಡದೇ ಸುರಿಯುತ್ತಿರುವ ಹಿಮ ಮಳೆ... ಎತ್ತ ನೋಡಿದ್ರೂ ಬಿಳಿ ಹಿಮದ ರಾಶಿ.. ಹಿಮದ ಮರೆಯಲ್ಲಿ ಮರೆಯಾಗಿರುವ ಸೂರ್ಯ.. ಎಲ್ಲೆಲ್ಲೂ ಆವರಿಸಿರುವ ಕತ್ತಲು.. ಪತರುಗುಡುತ್ತಿರುವ ಜನ.. ಮಂಜುಗಡ್ಡೆಯಂತಾಗಿರುವ ಸಮುದ್ರ.. ಇವೆಲ್ಲಾ ಹಿಮ ಚಂಡಮಾರುತಕ್ಕೆ ಅಮೆರಿಕ ಛಿತ್ ಆಗಿರುವ ಸೀನ್​ಗಳು..
ಅಮೆರಿಕದಲ್ಲಿ ಹಿಮಬಿರುಗಾಳಿಯಿಂದ ಅಲ್ಲೋಲ-ಕಲ್ಲೋಲ!
22 ರಾಜ್ಯಗಳು ತತ್ತರ.. 30ಕ್ಕೂ ಹೆಚ್ಚು ಮಂದಿ ಚಳಿಗೆ ಬಲಿ!
 ಭಾರಿ ಹಿಮಪಾತದ ಹೊಡೆತಕ್ಕೆ ದೊಡ್ಡಣ್ಣಗೆ ದಿಗಿಲು ಬಡಿದಂತಾಗಿದೆ.. ಅಮೆರಿಕದ ದಕ್ಷಿಣದಿಂದ ಈಶಾನ್ಯ ಭಾಗದವರೆಗೆ ಚಳಿರಾಯ ಚಾಟಿ ಏಟು ಕೊಡುತ್ತಿದ್ದು ಜನ ಥಂಡಾ ಹೊಡೆದಿದ್ದಾರೆ.. ದಾಖಲೆಯ ಹಿಮಪಾತ, ಅಪಾಯಕಾರಿ ಮಟ್ಟದಲ್ಲಿ ಶೇಖರಣೆಯಾಗುತ್ತಿರುವ ಮಂಜುಗಡ್ಡೆ ಮಾರಕ ಶೀತವನ್ನು ಎದುರಿಸುವಂತೆ ಮಾಡಿದೆ.. ಅಮೆರಿಕದ ಅರ್ಕಾನ್ಸಾಸ್‌ನಿಂದ ಈಶಾನ್ಯದ ನ್ಯೂ ಇಂಗ್ಲೆಂಡ್‌ವರೆಗೆ ಸುಮಾರು 2,100 ಕಿಲೋ ಮೀಟರ್ ಉದ್ದದ ಪ್ರದೇಶದಲ್ಲಿ  ಭೂಮಿ ಮೇಲೆ ಒಂದು ಅಡಿಗಿಂತ ಹೆಚ್ಚು ಹಿಮ ಆವರಿಸಿದೆ.. ಅಮೆರಿಕದ 22 ರಾಜ್ಯಗಳನ್ನು ಅತೀವ ಚಳಿ ಬಾಧಿಸುತ್ತಿದ್ದು ಭೀಕರ ಹಿಮಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.. 

AMERICA COLD WEATHER (2)


ವಿದ್ಯುತ್ ವ್ಯತ್ಯಯ.. ಕತ್ತಲಲ್ಲಿ ಮುಳುಗಿದ ಜನ!
 ಹಿಮಬಿರುಗಾಳಿ ವಿದ್ಯುತ್ ಜಾಲಗಳನ್ನು ನಿಷ್ಕ್ರಿಯಗೊಳಿಸಿದೆ. ಸುಮಾರು 70 ಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ.. ಜನರು ಹೊರಗೆ ಹೋಗುವುದೇ ಕಷ್ಟವಾಗ್ತಿದೆ.. ಮನೆಗಳಲ್ಲಿ ವಿದ್ಯುತ್ ಇಲ್ಲದೇ ಕತ್ತಲು ಆವರಿಸಿದೆ. ರಾಜಧಾನಿ ವಾಷಿಂಗ್ಟನ್ ಡಿಸಿ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದೆ..
ಭಾರಿ ಹಿಮಪಾತ.. ವಿಮಾನ ಸಂಚಾರಕ್ಕೆ ಹೊಡೆತ!
ಅಮೆರಿಕದಲ್ಲಿ ಹಿಮ ಚಂಡಮಾರುತದಿಂದ ಸಾರಿಗೆ ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಂಡಿದೆ.. ರಸ್ತೆಗಳೇ ಕಾಣದಷ್ಟು ಹಿಮ ಆವರಿಸಿದೆ.. ಎಲ್ಲೆಡೆ ಟ್ರಾಫಿಕ್ ಜಾಮ್ ಕಂಡು ಬರ್ತಿದೆ.. ಇನ್ನು ವಾಯುಸಂಚಾರದ ಮೇಲೂ ಹಿಮ ಪರಿಣಾಮ ಬೀರಿದೆ.. ಕಳೆದ ಭಾನುವಾರದಿಂದ 12 ಸಾವಿರಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ.. ಮುಂದಿನ ಕೆಲ ದಿನಗಳೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

 ಇದರ ನಡುವೆಯೇ ನ್ಯೂಯಾರ್ಕ್ ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಹಿಮಪಾತ ದಾಖಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ  5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಸಂಕಷ್ಟದ ನಡುವೆಯೂ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ..
ಇನ್ನು ಈ ವಾರವಿಡೀ ತಾಪಮಾನ ಶೂನ್ಯಕ್ಕಿಂತ ಕಡಿಮೆ ಇರಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದೆ..  20 ಕೋಟಿಗೂ ಹೆಚ್ಚು ಮಂದಿ ಚಳಿಯಿಂದ ನಡುಗುತ್ತಿದ್ದಾರೆ.. ವಿಪರೀತ ಸುಂಕ ಹೇರಿ ಜಗತ್ತನ್ನು ಬೆದರಿಸುತ್ತಿರುವ ಡೊನಾಲ್ಡ್ ಟ್ರಂಪ್​ಗೆ ಹಿಮ ಸೈಕ್ಲೋನ್​ ಶೇಕ್ ಮಾಡ್ತಿರೋದು ವಿಪರ್ಯಾಸವೇ ಸರಿ.

AMERICA COLD WEATHER



ನ್ಯೂಸ್​​​​ಫಸ್ಟ್​ ಬ್ಯೂರೋ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AMERICA COLD WEATHER
Advertisment