Advertisment

ಕೆನಡಾದಲ್ಲಿ ಮತ್ತೆ ಶೂಟೌಟ್: ಗುಂಡಿನ ದಾಳಿಯಲ್ಲಿ 10 ಮಂದಿ ಸಾವು, 25 ಮಂದಿಗೆ ಗಾಯ

ಕೆನಡಾದಲ್ಲಿ ಮೊನ್ನೆಯಷ್ಟೇ ಕನ್ನಡಿಗ ಚಂದನ್ ಕುಮಾರ್ ರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈಗ ಮತ್ತೆ ಶೂಟೌಟ್ ಮುಂದುವರಿದಿದೆ. ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಕೋರ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ. 25 ಮಂದಿ ಗಾಯಗೊಂಡಿದ್ದಾರೆ.

author-image
Chandramohan
canada shootout 10 killed

ಕೆನಡಾದಲ್ಲಿ ಶೂಟೌಟ್‌ , 10 ಮಂದಿ ಸಾವು

Advertisment
  • ಕೆನಡಾದಲ್ಲಿ ಶೂಟೌಟ್‌ , 10 ಮಂದಿ ಸಾವು
  • ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಶೂಟೌಟ್ ದುರಂತ

ಕೆನಡಾದಲ್ಲಿ ಕನ್ನಡಿಗ ಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ.  ಕೆನಡಾದ ಶಾಲೆಯ ಬಳಿ ಗುಂಡಿನ ದಾಳಿ ನಡೆದಿದೆ.  9 ಜನರು  ಸಾವನ್ನಪ್ಪಿದ್ದಾರೆ.  ದಾಳಿಯಲ್ಲಿ ದಾಳಿಕೋರ ಸೇರಿ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ.  ಕೆನಡಾದ ಟಂಬ್ಲರ್ ರಿಡ್ಜ್​​​ನಲ್ಲಿನ ಶಾಲೆಯಲ್ಲಿ ಶೂಟೌಟ್  ನಡೆದಿದೆ. 9 ಅಮಾಯಕರು ಸಾವನ್ನಪ್ಪಿದ್ದು, 25 ಜನರಿಗೆ ಗಂಭೀರ ಗಾಯವಾಗಿದೆ.  ಕಾಯಾಚರಣೆ ವೇಳೆ ಓರ್ವ ದಾಳಿಕೋರ ಕೂಡ ಸಾವನ್ನಪ್ಪಿದ್ದಾರೆ.  ತನಗೆ ತಾನೇ ಶೂಟ್ ಮಾಡಿಕೊಂಡು ದಾಳಿಕೋರ ಸಾವನ್ನಪ್ಪಿದ್ದಾನೆ.  ಸರಣಿ ಗುಂಡಿನ ದಾಳಿಯಿಂದ ಭಯದ ವಾತಾವರಣ ನಿರ್ಮಾಣವಾಗಿದೆ.  ದಾಳಿ ಕುರಿತು ಕೆನಡಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Advertisment
canada shootout
Advertisment
Advertisment
Advertisment