Advertisment

ಇರಾನ್‌ನ ಖಮೇನಿ ಹತ್ಯೆ- ಗಲ್ಪ್ ರಾಷ್ಟ್ರಗಳ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಅಟ್ಯಾಕ್‌

ಇರಾನ್‌ ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿದೆ. ಇರಾನ್ ಮೇಲೆ ಏರ್ ಸ್ಟ್ರೈಕ್ ಶುರುವಾಗುತ್ತಿದ್ದಂತೆ, ಇರಾನ್ ಗಲ್ಪ್ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ವಾಯುದಾಳಿ ನಡೆಸಿದೆ. ದುಬೈ, ಅಬುಧಾಬಿ, ಬಹ್ರೇನ್, ಕತಾರ್‌ನ ದೋಹಾ ಮೇಲೂ ದಾಳಿ ನಡೆಸಲಾಗಿದೆ.

author-image
Chandramohan
IRAN ATTACKS GULF COUNTRIES USA AIRBASes
Advertisment
  • ಗಲ್ಪ್ ರಾಷ್ಟ್ರಗಳ ಅಮೆರಿಕಾದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ
  • ಕತಾರ್‌ನ ದೋಹಾ, ಬಹ್ರೇನ್‌, ಅಬುಧಾಬಿ, ದುಬೈ ಮೇಲೆ ಇರಾನ್ ದಾಳಿ

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿಯ ಹತ್ಯೆಗೆ ಪ್ರತೀಕಾರವಾಗಿ ಇರಾನ್ ನರಕದ ಬಾಗಿಲುಗಳನ್ನು ತೆರೆದಿದೆ. ಗಲ್ಫ್​​ ರಾಷ್ಟ್ರಗಳಲ್ಲಿನ ಅಮೇರಿಕ ಸೇನಾ ನೆಲೆಗಳ ಗುರಿಯಾಗಿಸಿಕೊಂಡು ದಾಳಿಗೆ ಇಳಿದೆ. ಇರಾನ್‌ನ  ಕ್ಷಿಪಣಿಗಳ ಆರ್ಭಟಕ್ಕೆ ಅಮೆರಿಕಾ, ಇಸ್ರೇಲ್​​​ ಬೆಚ್ಚಿಬಿದೆ. ಇರಾನ್‌ ದಾಳಿಯಲ್ಲಿ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹಾನಿ ಆಗಿದ್ದು ವಿಮಾನ ಹಾರಾಟ ಬಂದ್‌ ಮಾಡಲಾಗಿದೆ.

Advertisment

ಖಮೇನಿ ಹತ್ಯೆಯ ಬಳಿಕ ಮತ್ತಷ್ಟು ಕೆರಳಿದ ಕೆಂಡವಾದ ಇರಾನ್ 
ಗಲ್ಫ್​​ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳು ಉಡೀಸ್​​​
ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಾನಕವಾಗಿರುತ್ತೆ.. ಅದೇ ರೀತಿ.. ತಮ್ಮ ಸರ್ವೋಚ್ಛ ನಾಯಕನನ್ನು ಕಳೆದು ಕೊಂಡಿರುವ ಇರಾನ್​​.. ಆಕ್ರೋಶದ ಜ್ವಾಲೆಯಲ್ಲಿ ಕುದಿಯುತ್ತಿದೆ. ಖಮೇನಿ ಮೃತಪಟ್ಟಿರುವುದು ದೃಢಪಟ್ಟ ಕೆಲ ಗಂಟೆಗಳ ಬಳಿಕ ಇರಾನ್​​​ ಪ್ರತೀಕಾರದ ಹೆಜ್ಜೆ ಇಟ್ಟಿದ್ದು, ಅಮೆರಿಕಾ ಸೇನಾ ನೆಲೆಗಳ ಮೇಲೆ ಡ್ರೋನ್ ಅಟ್ಯಾಕ್ ನಡೆಸಿದೆ.. ಬಹ್ರೇನ್, ಕತಾರ್ ಮತ್ತು ಕುವೈತ್​ನಲ್ಲಿರುವ ಅಮೆರಿಕಾ ಸೇನಾ ನೆಲೆಗಳನ್ನು ಉಡೀಸ್​ ಮಾಡಿ, ಟ್ರಂಪ್​​ಗೆ ತಿರುಗೇಟು ನೀಡಿದೆ.
ದುಬೈನಲ್ಲಿ ಜನಪ್ರಿಯ ಕಟ್ಟಡಗಳ ಮೇಲೂ ಇರಾನ್​ ದಾಳಿ 
ವಿಶ್ವ ನಕ್ಷೆಯ ಮಧ್ಯಭಾಗದಲ್ಲಿರುವ ದುಬೈ, 110 ದೇಶಗಳ 291 ಸ್ಥಳಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಕೊಂಡಿಯಾಗಿದೆ. ಜಗತ್ತಿನಲ್ಲೇ ಬಾಂಬ್​ ಸದ್ದು ಕೇಳಿಸದ ಸುರಕ್ಷಿತ ಸ್ಥಳ ಎಂದು ಜನರು ದುಬಾರಿ ದುಬೈನಲ್ಲಿ ನೆಲೆಸಲು ಇಷ್ಟ ಪಡ್ತಾರೆ. ಆದ್ರೆ ಇವತ್ತು ದುಬೈನಲ್ಲಿ ಬೆಳ್ಳಂ ಬೆಳ್ಳಗೆ ಮೂರು ಸ್ಫೋಟದ ಸದ್ದುಗಳ ಕೇಳಿ ಬಂದಿವೆ. ಇರಾನ್​​ ದುಬೈನ ಐದು ಸ್ಥಳಗಳ ಮೇಲೆ ದಾಳಿ ಮಾಡಿದೆ. ಜಗತ್ತಿನ ಅತಿ ಎತ್ತರದ ಟವರ್‌ ಭುರ್ಜ್‌ ಖಲೀಫಾ ಸಮೀಪದ ನೆಲೆಗಳನ್ನೂ ಟಾರ್ಗೆಟ್‌ ಮಾಡಿದ್ದು, ಮಾನವ ನಿರ್ಮಿತ ಪಾಮ್‌ ಐಲ್ಯಾಂಡ್‌ಗಳ ಬಳಿಯೂ ಕ್ಷಿಪಣಿ ಸ್ಫೋಟಗೊಂಡಿವೆ. ಇನ್ನು ಜಬೇಲ್ ಅಲಿ ಪೋರ್ಟ್​​ನಲ್ಲೂ ದಾಳಿ ಮಾಡಿದೆ. ಪೋರ್ಟ್​​ ಮೇಲೆ ದಾಳಿಯಿಂದ ಆವರಿಸಿದ ದಟ್ಟ ಹೊಗೆ ಜನರಲ್ಲಿ ಭಯ ಭೀತಿ ಉಂಟು ಮಾಡಿದೆ.
ಕತಾರ್​ ರಾಜಧಾನಿ ದೋಹಾದ ಮೇಲೂ ಇರಾನ್ ಅಟ್ಯಾಕ್​
ಕತಾರ್​ನ ರಾಜಧಾನಿ ದೋಹಾದ ಮೇಲೆ ಇರಾನ್​ ಡ್ರೋನ್​ ದಾಳಿ ನಡೆಸಿದೆ. ದೋಹಾದಲ್ಲಿ  24 ಹೆಕ್ಟೇರ್ ವಿಸ್ತೀರ್ಣದ ಅಲ್ ಉದೈದ್ ವಾಯುನೆಲೆಯು ಯುಎಸ್ ಸೆಂಟ್ರಲ್ ಕಮಾಂಡ್‌ನ ಮುಂಚೂಣಿ ಪ್ರಧಾನ ಕಚೇರಿಯಾಗಿದೆ. ಇದನ್ನು ಗುರಿಯಾಗಿಸಿಕೊಂಡು ಇರಾನ್​​ ಅಟ್ಯಾಕ್​ ಮಾಡಿದೆ. ದೋಹಾ ಗುರಿಯಾಗಿಸಿಕೊಂಡು ನಡೆದ ದಾಳಿಗಳನ್ನು ಯಶಸ್ವಿಯಾಗಿ ತಡೆದಿದೆ ಎಂದು ಕತಾರ್ ಹೇಳಿಕೊಂಡಿದೆ.
ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್​ ಮೇಲೆ ದಾಳಿ 
ತೈಲ ಟ್ಯಾಂಕರ್​​​ಗಳನ್ನು ಸಾಗಿಸುತ್ತಿದ್ದ ಇಸ್ರೇಲ್ ಹಡಗಿನ ಮೇಲೆ ಇರಾನ್ ಭೀಕರ ದಾಳಿ ನಡೆಸಿದೆ.. ಓಮನ್ ಕರಾವಳಿಯ ಬಳಿಯ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ ಸ್ಕೈಲೈಟ್ ತೈಲ ಟ್ಯಾಂಕರ್ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ.. ದಾಳಿಯಲ್ಲಿ 4 ಜನ ನಾವಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಹ್ರೇನ್‌ನಲ್ಲಿ ಯುಎಸ್ ಫ್ಲೀಟ್ ಮೇಲೆ ದಾಳಿ
 ಇನ್ನು, ಬಹ್ರೇನ್‌ನಲ್ಲಿ ಮನಾಮದಲ್ಲಿರುವ ಯುಎಸ್ ನೌಕಾಪಡೆಯ 5 ನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಬಹ್ರೇನ್ ಹೇಳಿಕೊಂಡಿದೆ. ಇರಾನ್​ ಕುವೈತ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಿದೆ. ಸದ್ಯ ಕುವೈತ್​​ ವಿಮಾನ ನಿಲ್ದಾಣದಲ್ಲಿ ತುರ್ತು ಪ್ರೋಟೋಕಾಲ್‌ ಘೋಷಿಸಲಾಗಿದೆ.

IRAN ATTACKS GULF COUNTRIES USA AIRBASE


ದೋಹಾ ಪರಿಸ್ಥಿತಿ ಬಗ್ಗೆ ವಿವರಿಸಿದ ಬಾಗಲಕೋಟೆ ಮೂಲದ ಟೆಕ್ಕಿ
 ದೋಹಾದಲ್ಲಿರುವ ಅಮೆರಿಕಾದ ಏರ್ ಬೆಸ್ ಮೇಲೆ ಇರಾನ್​ ದಾಳಿ ಬೆನ್ನಲ್ಲೇ ಹೈಅಲರ್ಟ್​ ಘೋಷಿಸಲಾಗಿದೆ. ಮೊಬೈಲ್​ಗಳಿಗೆ ಅಲರ್ಟ್​ ಮೆಸೇಜ್​​ ಬರ್ತಿದ್ದಂತಿ ಜನರು ಅಗತ್ಯವಸ್ತು ಸಂಗ್ರಹಕ್ಕೆ ಮುಗಿಬಿದ್ದಿದ್ದಾರೆ. ದೋಹಾದ ಐಟಿ ಕಂಪನಿಯಲ್ಲಿ ಬಾಗಲಕೋಟೆ ಮೂಲಕ ಅರವಿಂದ್​ ಎಂಬುವವರು ಪ್ರಾಜೆಕ್ಟ್​ ಮ್ಯಾನೇಜರ್​ ಆಗಿ ಕೆಲಸ ಮಾಡ್ತಿದ್ದಾರೆ. ಕಳೆದ 3 ವರ್ಷಗಳಿಂದ ಅರವಿಂದ್ ದೋಹಾದಲ್ಲಿ ವಾಸ್ತಿದ್ದಾರೆ. ಇವರು ಇರೋ ಜಾಗದ ಸುತ್ತಮುತ್ತ ಪ್ರದೇಶದಲ್ಲಿ 2-3 ಸಾವಿರ ಭಾರತೀಯರಿದ್ದಾರೆ. ದೋಹಾದಲ್ಲಿ ಕ್ಷಿಪಣಿಗಳು ಬೀಳುತ್ತಿರುವ ವಿಡಿಯೋಗಳನ್ನ ಅರವಿಂದ್​ ಹಂಚಿಕೊಂಡಿದ್ದಾರೆ.
ಒಟ್ಟಾರೆ.. ಇರಾನ್‌ನ ಈ ಸರಣಿ ದಾಳಿಗೆ ಅಮೇರಿಕಾ ಮತ್ತು ಇಸ್ರೇಲ್ ಯಾವ ರೀತಿ ಪ್ರತಿಕ್ರಿಯ ನೀಡಲಿವೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ. ಮಧ್ಯಪ್ರಾಚ್ಯದ ಆಕಾಶ ಈಗ ಕ್ಷಿಪಣಿಗಳಿಂದ ತುಂಬಿಹೋಗಿದ್ದು, ಮೂರನೇ ಮಹಾಯುದ್ಧದ ಭೀತಿ ಎದುರಾಗಿದೆ.


ನ್ಯೂಸ್​ಫಸ್ಟ್​ ಬ್ಯೂರೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
IRAN ATTACKS USA AIR BASES IN GULF COUNTRIES
Advertisment
Advertisment
Advertisment