/newsfirstlive-kannada/media/media_files/2025/12/17/australia-bondi-beach-attackers-are-hyderabad-connection-2025-12-17-16-42-56.jpg)
ಡಿಸೆಂಬರ್ 1 ರ ಸಂಜೆ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಕನಿಷ್ಠ 15 ಜನರನ್ನು ಗುಂಡಿಕ್ಕಿ ಕೊಂದ ಇಬ್ಬರು ಬಂದೂಕುಧಾರಿಗಳಲ್ಲಿ ಒಬ್ಬರು ಹೈದರಾಬಾದ್‌ನವರು ಎಂದು ಆಸ್ಟ್ರೇಲಿಯಾ ಮತ್ತು ಭಾರತದ ಕಾನೂನು ಜಾರಿ ಸಂಸ್ಥೆಗಳು ಮಂಗಳವಾರ ದೃಢಪಡಿಸಿವೆ. ಹೈದರಾಬಾದ್ ನಗರದ ಟೋಲಿಚೌಕಿ ಪ್ರದೇಶದಲ್ಲಿ ಅವರ ಕುಟುಂಬಕ್ಕೆ ಸೇರಿದ ಎರಡು ಅಂತಸ್ತಿನ ಬಂಗಲೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಯೆಹೂದಿಗಳ ಹನುಕ್ಕಾ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಹದಿನೈದು ಜನರು ಸಾವನ್ನಪ್ಪಿದ್ದಾರೆ.
ಬಂದೂಕುಧಾರಿಗಳನ್ನು ಸಾಜಿದ್ ಅಕ್ರಮ್ (50) ಮತ್ತು ಅವರ ಮಗ ನವೀದ್ ಅಕ್ರಮ್ (24) ಎಂದು ಕಾನೂನು ಜಾರಿ ಸಂಸ್ಥೆಗಳು ಗುರುತಿಸಿವೆ. ತಂದೆ ಮತ್ತು ಮಗ ಕಳೆದ ತಿಂಗಳು ಫಿಲಿಪೈನ್ಸ್‌ಗೆ ಪ್ರಯಾಣಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಪೊಲೀಸರು ತಿಳಿಸಿದ್ದಾರೆ. ಸಾಜಿದ್ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸಿದ್ದಾರೆ ಎಂದು ಫಿಲಿಪೈನ್ಸ್ ವಲಸೆ ಬ್ಯೂರೋ ದೃಢಪಡಿಸಿದರೆ, ನವೀದ್ ಆಸ್ಟ್ರೇಲಿಯಾದ ಪಾಸ್ ಪೋರ್ಟ್ ಒಂದನ್ನು ಬಳಸಿದ್ದಾರೆ.
ಗುಂಡಿನ ದಾಳಿಕೋರರ ಭಾರತದೊಂದಿಗೆ ಸಂಪರ್ಕವು ಬಹಿರಂಗಗೊಂಡ ನಂತರ, ತೆಲಂಗಾಣ ಪೊಲೀಸರು ಅಕ್ರಮ್ ಕುಟುಂಬದ ವಿವರಗಳನ್ನು ಹಂಚಿಕೊಂಡರು. ಪೊಲೀಸರ ಪ್ರಕಾರ, ಸಾಜಿದ್ ಬಿ.ಕಾಂ ಪದವಿಯನ್ನು ಹೊಂದಿದ್ದು, ನವೆಂಬರ್ 1998 ರಲ್ಲಿ ಕೆಲಸ ಹುಡುಕಿಕೊಂಡು ಆಸ್ಟ್ರೇಲಿಯಾಕ್ಕೆ ವಲಸೆ ಬಂದರು. ಅಲ್ಲಿ ಅವರು ಯುರೋಪಿಯನ್ ಮೂಲದ ಮಹಿಳೆಯನ್ನು ವಿವಾಹವಾದರು, ಅವರಿಗೆ ಇಬ್ಬರು ಮಕ್ಕಳಿದ್ದರು - ನವೀದ್ ಮತ್ತು ಒಬ್ಬ ಮಗಳು. ಅಂದಿನಿಂದ, ಅವರು ಆರು ಬಾರಿ ಭಾರತಕ್ಕೆ ಬಂದು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಕುಟುಂಬದೊಂದಿಗೆ ಅವರಿಗೆ ಸೀಮಿತ ಸಂಪರ್ಕವಿತ್ತು ಮತ್ತು 2009 ರಲ್ಲಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೂ ಬಂದಿರಲಿಲ್ಲ ಎಂದು ಪೊಲೀಸರು, ಸ್ಥಳೀಯರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us