/newsfirstlive-kannada/media/media_files/2026/03/04/ayatholla-ali-mojtaba-khameni-2026-03-04-09-41-19.jpg)
ಆಯತೊಲ್ಲಾ ಅಲಿ ಮೊಜ್ತಬಾ ಇರಾನ್ ನೂತನ ಸುಪ್ರೀಂ ಲೀಡರ್ ಆಗಿ ಆಯ್ಕೆ
ಇರಾನ್ ನ ನೂತನ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಮೊಜ್ತಬಾರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯತೊಲ್ಲಾ ಮೊಜ್ತಬಾ, ಈ ಹಿಂದೆ ಸುಪ್ರೀಂ ಲೀಡರ್ ಆಗಿದ್ದ ಆಯತೋಲ್ಲಾ ಅಲಿ ಖಮೇನಿ ಮಗ. ಖಮೇನಿ ಅವರ ಎರಡನೇ ಮಗನೇ ಆ ಆಯತೊಲ್ಲಾ ಅಲಿ ಮೊಜ್ತಾಬಾ.
ಆಯತೊಲ್ಲಾ ಮೊಜ್ತಬಾ, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಜೊತೆಗೆ ನಿಕಟ ಸಂಪರ್ಕ, ಬೆಂಬಲ ಹೊಂದಿದ್ದಾರೆ. ಇರಾನ್ ನಲ್ಲಿ 88 ಮಂದಿ ಸದಸ್ಯರನ್ನು ಹೊಂದಿರುವ ಅಸೆಂಬ್ಲಿ ಆಫ್ ಎಕ್ಸ್ ಫರ್ಟ್ ನಿಂದ ಆಯತೊಲ್ಲಾ ಮೊಜ್ತಬಾ ಆಯ್ಕೆ ಮಾಡಲಾಗಿದೆ. ಆಯತೊಲ್ಲಾ ಖಮೇನಿಯ ಎರಡನೇ ಮಗನೇ 56 ವರ್ಷದ ಮೊಜ್ತಬಾ. ಇರಾನ್ ವಂಶಪಾರಂಪರ್ಯ ಆಳ್ವಿಕೆಯನ್ನು ವಿರೋಧಿಸುತ್ತಿತ್ತು. ಆದರೆ ಈಗ ವಂಶಪಾರಂಪರ್ಯ ಆಳ್ವಿಕೆಗೆ ಮಣೆ ಹಾಕಿದೆ. ಇರಾನ್ ಸುಪ್ರೀಂ ಲೀಡರ್ ಆಗಿ ಆಯ್ಕೆಯಾಗಿರುವ ಮೊಜ್ತಬಾ, ಇರಾನ್ ಸೇನೆ, ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥರಾಗಿರುತ್ತಾರೆ. ಈ ಹಿಂದೆ ಇರಾನ್- ಇರಾಕ್ ಯುದ್ಧದಲ್ಲಿ ಕೆಲಸ ಮಾಡಿದ್ದ ಅನುಭವ ಮೊಜ್ತಬಾಗೆ ಇದೆ.
ಆಯತೊಲ್ಲಾ ಅಲಿ ಮೊಜ್ತಾಬಾ ಕೂಡ ತಂದೆಯಂತೆಯೇ ಅಮೆರಿಕಾ ವಿರೋಧಿ ಧೋರಣೆ ಹೊಂದಿದ್ದಾರೆ. ಹೀಗಾಗಿ ಅಮೆರಿಕಾ ಹಾಗೂ ಮಿತ್ರ ರಾಷ್ಟ್ರಗಳ ಮೇಲೆ ದಾಳಿಯನ್ನು ಮುಂದುವರಿಸುವರು.
/filters:format(webp)/newsfirstlive-kannada/media/media_files/2026/03/04/ayatholla-ali-mojtaba-khameni-1-2026-03-04-09-42-30.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us