Advertisment

ನೇಪಾಳದಲ್ಲಿ ಜೆನ್ ಜೀ ನೇತೃತ್ವ ವಹಿಸಿದ್ದ ಬಾಲೇಂದ್ರ ಶಾಗೆ ಪ್ರಧಾನಿ ಹುದ್ದೆ ಖಚಿತ: ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದಿದ್ದ ಬಾಲೇಂದ್ರ ಶಾ!

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಬಾಲೇಂದ್ರ ಶಾ ಈಗ ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ. ನೇಪಾಳ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಾರ್ಟಿ 20 ಕ್ಷೇತ್ರ ಗೆದ್ದಿದ್ದು, 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

author-image
Chandramohan
NEPAL BALENDRA SHAH WIN

ನೇಪಾಳದಲ್ಲಿ ಪ್ರಧಾನಿ ಹುದ್ದೆಗೇರುವ ಬಾಲೇಂದ್ರ ಶಾ

Advertisment
  • ನೇಪಾಳದಲ್ಲಿ ಪ್ರಧಾನಿ ಹುದ್ದೆಗೇರುವ ಬಾಲೇಂದ್ರ ಶಾ
  • ಬಾಲೇಂದ್ರ ಶಾರ ಆರ್‌ಎಸ್‌ಪಿ ಪಕ್ಷಕ್ಕೆ ಬಹುಮತ ನಿಶ್ಚಿತ
  • 20 ಕ್ಷೇತ್ರಗಳಲ್ಲಿ ಗೆಲುವು, 90 ಕ್ಷೇತ್ರಗಳಲ್ಲಿ ಮುನ್ನಡೆ
  • ಬೆಂಗಳೂರಿನಲ್ಲಿ ಬಿಇ, ಎಂ.ಟೆಕ್ ಪದವಿ ಪಡೆದಿರುವ ಬಾಲೇಂದ್ರ ಶಾ

ಭಾರತದ ನೆರೆಯ ನೇಪಾಳದಲ್ಲಿ ಕಳೆದ ವರ್ಷ ಜೆನ್ ಜಿ ಗಳೇ ರಾಜಕೀಯ ಕ್ರಾಂತಿ ನಡೆಸಿ ಆಡಳಿತರೂಢ ಸರ್ಕಾರವನ್ನೇ ಕಿತ್ತೊಗೆದರು. ಸಚಿವರುಗಳನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದರು. ಕೆಲವರ ಹತ್ಯೆಯೂ ಆಯಿತು. ಈಗ ನೇಪಾಳ ಪಾರ್ಲಿಮೆಂಟ್‌ಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುತ್ತಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಘಟಾನುಘಟಿ ರಾಜಕಾರಣಿಗಳನ್ನು ಹಿಂದಿಕ್ಕಿ ಹೊಸ ತಲೆಮಾರಿನ ಱಪರ್ ಆಗಿದ್ದು, ರಾಜಕಾರಣ ಪ್ರವೇಶಿಸಿದ ಬಾಲೇಂದ್ರ ಶಾ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಾರೆ. 
ಬಾಲೇಂದ್ರ ಶಾ ಹೆಸರು ಕಳೆದ ವರ್ಷ ಮಧ್ಯಂತರ ಸರ್ಕಾರದ ಪ್ರಧಾನಿ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೇ, ಆಗ ಬಾಲೇಂದ್ರ ಶಾ ಪ್ರಧಾನಿಯಾಗಿರಲಿಲ್ಲ. ಬಳಿಕ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದರು.  ಬಾಲೇಂದ್ರ ಶಾ ರಾಷ್ಟ್ರೀಯ ಸ್ವತಂತ್ರ ಪಕ್ಷ ಸ್ಥಾಪಿಸಿದ್ದರು. ಈಗ ಈ ಪಕ್ಷವೇ ನೇಪಾಳ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪಷ್ಟವಾದ ಮುನ್ನಡೆ ಸಾಧಿಸುತ್ತಿದೆ. 
ನೇಪಾಳ ಪಾರ್ಲಿಮೆಂಟ್ ನಲ್ಲಿ 165 ಸ್ಥಾನಗಳಿವೆ. ಆರ್‌ಎಸ್‌ಪಿ ಪಕ್ಷವು 20 ಸ್ಥಾನಗಳಲ್ಲಿ ಗೆದ್ದಿದೆ. ಇನ್ನೂ  98 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತದ ಮ್ಯಾಜಿಕ್ ನಂಬರ್ 83 ಆಗಿದೆ. 
ನೇಪಾಳಿ ಕಾಂಗ್ರೆಸ್ 4 ಸ್ಥಾನ ಮಾತ್ರ ಗೆದ್ದಿದೆ. 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇನ್ನೂ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ 1 ಸ್ಥಾನ ಗೆದ್ದಿದ್ದು, 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 
ಬಾಲೇಂದ್ರ ಶಾ ಇದುವರೆಗೂ ರಾಜಧಾನಿ ಕಠ್ಮಂಡುವಿನ ಮೇಯರ್ ಆಗಿದ್ದರು. ಇನ್ನೂ ಬಾಲೇಂದ್ರ ಶಾ, ಈ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜಾಪಾ-5 ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಿಪಿಎನ್‌ -ಯುಎಂಎಲ್ ನಾಯಕ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಬಾಲೇಂದ್ರ ಶಾಗೆ 15 ಸಾವಿರ ಮತ ಬಂದಿದ್ದರೇ, ಕೆ.ಪಿ.ಶರ್ಮಾ ಓಲಿ 3,300 ಮತಗಳನ್ನು ಮಾತ್ರ ಗಳಿಸಿದ್ದಾರೆ.
35 ವರ್ಷದ ಇಂಜಿನಿಯರ್ ಬಾಲೇಂದ್ರ ಶಾ ನೇಪಾಳದ ಮುಂದಿನ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. 
ನೇಪಾಳದಲ್ಲಿ ಯಾವಾಗಲೂ ರಾಜಕೀಯ ಅಸ್ಥಿರತೆ ಸಾಮಾನ್ಯವಾಗಿದೆ. ಕಳೆದ 18 ವರ್ಷಗಳಲ್ಲಿ 14 ಸರ್ಕಾರಗಳನ್ನು ನೇಪಾಳ ಕಂಡಿದೆ. 
 ಈ ಚುನಾವಣೆಯಲ್ಲಿ ಆರ್‌ಎಸ್‌ಪಿ ಪಕ್ಷವು ತಮಗೆ ಮೂರನೇ ಎರಡರಷ್ಟು ಬಹುಮತ ಬರುತ್ತೆ ಎಂಬ ವಿಶ್ವಾಸದಲ್ಲಿದೆ. 
ಬಾಲೇಂದ್ರ ಶಾಗೆ ಬೆಂಗಳೂರಿನ ನಂಟು ಇದೆ. ಬಾಲೇಂದ್ರ ಶಾ, ಬೆಂಗಳೂರಿನ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2016 ರಿಂಗ 2018ರ ಅವಧಿಯಲ್ಲಿ ಎಂ.ಟೆಕ್ ಕೋರ್ಸ್  ಅನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. 
ಬಾಲೇಂದ್ರ ಶಾ, ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದರು ಎಂದು ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಶ್ರೇಯಾಸ್ ಹೇಳುತ್ತಾರೆ. ಉತ್ತಮ ರಿಸಲ್ಟ್ ನೊಂದಿಗೆ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಭೂಕಂಪದ ಇಂಜಿನಿಯರಿಂಗ್ ಬಗ್ಗೆ ಪ್ರಾಜೆಕ್ಟ್ ಮಾಡಿದ್ದಾರೆ. ಅದಕ್ಕೂ ಮುನ್ನ  ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

NEPAL BALENDRA SHAH BECOME Prime minister
Advertisment
Advertisment
Advertisment