Advertisment

ಚಿನ್ನ, ಬೆಳ್ಳಿ ಬೆಲೆ ಕುಸಿತದ ಬೆನ್ನಲ್ಲೇ ಬಿಟ್ ಕಾಯಿನ್ ಮೌಲ್ಯ ಕೂಡ ಕುಸಿತ ! 1 ಬಿಲಿಯನ್ ಡಾಲರ್ ಹಣ ನಷ್ಟ!

ಜಾಗತಿಕ ಮಟ್ಟದ ಯುದ್ಧದ ಪರಿಸ್ಥಿತಿ, ಸಂಘರ್ಷಗಳು, ಅನಿಶ್ಚಿತತೆ ಈಗ ಬಿಟ್ ಕಾಯಿನ್ ಮೌಲ್ಯದ ಮೇಲೂ ಪರಿಣಾಮ ಬೀರುತ್ತಿವೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಹುಚ್ಚು ತೀರ್ಮಾನಗಳಿಂದಾಗಿ ಬಿಟ್ ಕಾಯಿನ್ ಮೌಲ್ಯ ಕುಸಿಯುತ್ತಿದೆ.

author-image
Chandramohan
BIT COIN VALUE DOWN

ಬಿಟ್ ಕಾಯಿನ್ ಮೌಲ್ಯದಲ್ಲಿ ಭಾರಿ ಕುಸಿತ!

Advertisment
  • ಬಿಟ್ ಕಾಯಿನ್ ಮೌಲ್ಯದಲ್ಲಿ ಭಾರಿ ಕುಸಿತ!
  • ಡೋನಾಲ್ಡ್ ಟ್ರಂಪ್ ಹುಚ್ಚಾಟಗಳಿಂದ ಬಿಟ್ ಕಾಯಿನ್ ಮೌಲ್ಯ ಕುಸಿತ.

2026ರ ಆರಂಭದಲ್ಲೇ ಹೂಡಿಕೆದಾರರಿಗೆ ಬಿಟ್ ಕಾಯಿನ್ ಶಾಕ್ ಎದುರಾಗಿದೆ.  1.2 ಲಕ್ಷ ಡಾಲರ್​ನಿಂದ $66 ಸಾವಿರಕ್ಕೆ ಬಿಟ್ ಕಾಯಿನ್  ಮೌಲ್ಯ ಕುಸಿತವಾಗಿದೆ.   ಅಕ್ಟೋಬರ್​ನಲ್ಲಿ 1 ಬಿಟ್​ಕಾಯಿನ್​ಗೆ 1.14 ಕೋಟಿಯಷ್ಟು ಮೌಲ್ಯ ಇತ್ತು.  ಕಳೆದ  4 ತಿಂಗಳಲ್ಲಿ ಶೇಕಡಾ 46 ಪರ್ಸೆಂಟ್​ನಷ್ಟು  ಬಿಟ್ ಕಾಯಿನ್ ಮೌಲ್ಯ ಕುಸಿದಿದೆ. ಡೋನಾಲ್ಡ್  ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಕುಸಿದ ಅತೀ ಕೆಳಮಟ್ಟ ಇದು.  24 ಗಂಟೆಗಳಲ್ಲಿ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದ್ದ ಸುಮಾರು $1 ಬಿಲಿಯನ್ ಹೂಡಿಕೆದಾರರ ಹಣ ನಷ್ಟವಾಗಿದೆ. 

ಬಿಟ್ ಕಾಯಿನ್ ಬೀಳ್ತಿರೋದೇಕೆ?
ಕಾರಣ 01
ಅಂತರಾಷ್ಟ್ರೀಯ ಮಟ್ಟದಲ್ಲಿನ ಬಿಕ್ಕಟ್ಟುಗಳು, ಯುದ್ಧ ಸನ್ನಿವೇಶಗಳು ಬಿಟ್ ಕಾಯಿನ್ ಮೌಲ್ಯಕುಸಿತಕ್ಕೆ ಕಾರಣವಾಗಿವೆ. 
ಕಾರಣ 02
ಪದೇ ಪದೇ ಅಮೆರಿಕದ ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳು ಕೂಡ ಬಿಟ್ ಕಾಯಿನ್ ಮೌಲ್ಯ ಕುಸಿತಕ್ಕೆ ಕಾರಣಗಳಾಗಿವೆ. 
ಕಾರಣ 03
ಚಿನ್ನ, ಬೆಳ್ಳಿಯ ಓಟದ ಬೆನ್ನಲ್ಲೇ ಅತ್ತ ಕಡೆ ಹೂಡಿಕೆದಾರರ ಒಲವು ತೋರಿದ್ದಾರೆ. 
ಕಾರಣ 04
ಭಯದಲ್ಲಿ ಬಿಟ್​ ಕಾಯಿನ್​ನಿಂದ ಹಣ ಹಿಂತೆಗೆದ ಅಪಾರ ಹೂಡಿಕೆದಾರರು
ಕಾರಣ 05
ಕಳೆದ ವರ್ಷ ಭಾರೀ ಹೂಡಿಕೆ ಮಾಡಿದ್ದ ETF ಹೊರಹರಿವು ಹೆಚ್ಚಳವಾಗಿದೆ. 
ಕಾರಣ 07
ನಾಸ್ಡಾಕ್​ನಂತಹ ತಂತ್ರಜ್ಞಾನ ಆಧಾರಿತ ಷೇರು ಕುಸಿತದ ಪರಿಣಾಮ ಬಿಟ್ ಕಾಯಿನ್ ಮೌಲ್ಯ ಕೂಡ ಕುಸಿದಿದೆ. 
ಕಾರಣ 08
ಜಪಾನ್​ ಆರ್ಥಿಕ ನೀತಿ ಬದಲಾವಣೆ, Yen Carry Trade ಬಿಕ್ಕಟ್ಟು ಕೂಡ ಬಿಟ್ ಕಾಯಿನ್ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
GOLD PRICE AND TRUMP DONALD TRUMP Bitcoin value depreciation
Advertisment
Advertisment
Advertisment